Advertisement
ನಗರದಲ್ಲಿ ಬಿಬಿಎಂಪಿ ಒಡೆತನದ ಸುಮಾರು 12 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಆದರೆ, ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಬಹುತೇಕ ಹಾಳಾಗಿವೆ. ಬೇಸಿಗೆಯಲ್ಲಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮಗಳಿಗೆ ಮುಂದಾಗಿರುವ ಬಿಬಿಎಂಪಿ, ಕೇಂದ್ರ ಭಾಗದ ಕೊಳವೆ ಭಾವಿಗಳನ್ನು ದುರಸ್ತಿಗೊಳಿಸಿ ಜಲಮಂಡಳಿಗೆ ಹಸ್ತಾಂತರ ಮಾಡಿದೆ.
Related Articles
Advertisement
ವಿದ್ಯುತ್ ಬಿಲ್ ಮನ್ನಾ ಮಾಡಿ: ಪಾಲಿಕೆಯ 12 ಸಾವಿರ ಕೊಳವೆಬಾವಿಗಳಿಂದ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚಿನ ವಿದ್ಯುತ್ ಬಿಲ್ ಅನ್ನು ಬಿಬಿಎಂಪಿ ಬೆಸ್ಕಾಂಗೆ ಪಾವತಿಸಬೇಕಿದೆ. ಬಿಬಿಎಂಪಿ ಕೊಳವೆ ಬಾವಿಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಮಾಡುವ ಸಲುವಾಗಿ ವಿದ್ಯುತ್ ಬಿಲ್ ಮನ್ನಾ ಮಾಡಲು ಬೆಸ್ಕಾಂಗೆ ಸೂಚಿಸುವಂತೆ ಬೆಂಗಳೂರು ನಗರಾಭಿವೃದ್ ಸಚಿವರಿಗೆ ಬಿಬಿಎಂಪಿ ಮನವಿ ಮಾಡಿದೆ. ಸಚಿವರು ಬೆಸ್ಕಾಂ ಅಕಾರಿಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದು, ಬಾಕಿ ಮನ್ನಾ ಆಗುವ ಸಾಧ್ಯತೆಯಿದೆ ಎಂದು ಪಾಲಿಕೆಯ ಅಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ನೀರಿಗಾಗಿ ಅನುದಾನ ಮೀಸಲುಬಿಬಿಎಂಪಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಉಂಟಾಗುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಕುಡಿಯುವ ನೀರು ಒದಗಿಸಲು ಬಜೆಟ್‌ನಲ್ಲಿ ಹಳೆ ವಾರ್ಡ್‌ಗಳಿಗೆ ತಲಾ 15 ಲಕ್ಷ ರೂ. ಮತ್ತು ಹೊಸ ವಾರ್ಡ್‌ಗಳಿಗೆ ತಲಾ 40 ಲಕ್ಷ ರೂ.ನಂತೆ ಅನುದಾನ ಮೀಸಲಿಟ್ಟಿದ್ದು, ಅಗತ್ಯ ಬಿದ್ದರೆ ಮೇಯರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವರ ನಿಯಿಂದ ಕುಡಿಯುವ ನೀರಿಗೆ ಅನುದಾನ ನೀಡಲು ಯೋಜನೆ ರೂಪಿಸಲಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಪಾಲಿಕೆಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲಾಗಿದೆ. ಕೇಂದ್ರ ಭಾಗದಲ್ಲಿದ್ದ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಜಲಮಂಡಳಿಗೆ ನೀಡಲಾಗಿದ್ದು, ಹೊರವಲಯದಲ್ಲಿನ ಕೊಳವೆ ಬಾವಿಗಳ ನಿರ್ವಹಣೆಯನ್ನು ಜಲಮಂಡಳಿ ವಹಿಸಿಕೊಂಡಿದೆ. ಇದರೊಂದಿಗೆ ವಿದ್ಯುತ್ ಬಿಲ್ ಮನ್ನಾ ಮಾಡುವಂತೆಯೂ ಸಚಿವರನ್ನು ಕೋರಲಾಗಿದೆ.
-ಜಿ.ಪದ್ಮಾವತಿ, ಮೇಯರ್ * ವೆಂ.ಸುನೀಲ್ ಕುಮಾರ್