Advertisement

ಜಿಲ್ಲಾಧಿಕಾರಿ ವಿರುದ್ಧ ಪುರಸಭೆ ಸದಸ್ಯರ ಅಸಮಾಧಾನ

02:06 PM Oct 27, 2018 | |

ಮುದ್ದೇಬಿಹಾಳ: ಇಲ್ಲಿನ ಪುರಸಭೆ ಕಾರ್ಯಾಲಯಕ್ಕೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅವರಿಗೆ ಪಟ್ಟಣದಲ್ಲಿ ಆಗುತ್ತಿರುವ ಅನ್ಯಾಗಳ ಬಗ್ಗೆ ದೂರು ನೀಡಲು ಮುಂದಾದ ನೂತನ ಪುರಸಭೆ ಸದಸ್ಯ ವೀರೇಶ ಹಡಲಗೇರಿ ಅವರಿಗೆ ಯಾವುದೇ ರಿತೀಯ ಸಕಾರಾತ್ಮಕವಾಗಿ ಸ್ಪಂದನೆ ನೀಡದೇ ಡಿಸಿ ಅವರು ಸ್ಥಳದಿಂದ ತೆರಳಿದ ಘಟನೆ ನಡೆದಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

Advertisement

ಹೌದು, ಮುದ್ದೇಬಿಹಾಳ ಪಟ್ಟಣದಲ್ಲಿ ಕೆಲ ರಾಜಕೀಯ ಬಲಾಡ್ಯ ಶಕ್ತಿ ಹೊಂದಿದವರು ಅಕ್ರಮವಾಗಿ ಮರಳು ಮಾಫಿಯಾ ನಡೆಸಿದ್ದಾರೆ. ಇವರಿಗೆ ಸ್ಥಳೀಯ ಪೊಲೀಸರ ಕುಮ್ಮಕ್ಕಿದೆ. ಆದ್ದರಿಂದ ಅಕ್ರಮ ಮರಳು ಮಾಫಿಯಾ ಬಗ್ಗೆ ಗಮನ ಹರಿಸಿ ಅದನ್ನು ತಡೆಗಟ್ಟಬೇಕು ಎಂದು ಪುರಸಭೆ ಸದಸ್ಯ ವೀರೇಶ ಹಡಲಗೇರಿ ಜಿಲ್ಲಾಧಿಕಾರಿಗಳಿಗೆ ಮೌಖೀಕವಾಗಿ ದೂರು ನೀಡಿದರು. ಆದರೆ ದೂರಿಗೆ ಕೇವಲ ಮುಗುಳ್ನಗೆ ನೀಡಿದ ಜಿಲ್ಲಾಧಿಕಾರಿಗಳು ಸ್ಥಳದಿಂದ ತೆರಳಿದರು. ಇದರಿಂದ ಸಿಡಿಮಿಡಿಗೊಂಡ ಪುರಸಭೆ ಸದಸ್ಯರು ಒಬ್ಬ ಜನಪ್ರತಿನಿಧಿ ಮಾತಿಗೆ ಕಿಮ್ಮತ್ತು ನೀಡದೇ ಜಿಲ್ಲಾ ಧಿಕಾರಿಗಳು ಅವಮಾನಿಸಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮರಳು ಮಾಫಿಯಾ ತಡಗಟ್ಟಿ: ಮುದ್ದೇಬಿಹಾಳ ತಾಲೂಕಿನಲ್ಲಿ ಹಗಲಿನಲ್ಲಿಯೇ ಮರಳು ದಂಧೆ ನಡೆಯುತ್ತಿದೆ. ಕೆಲವರು ರಾಜಕೀಯ ಶಕ್ತಿಯನ್ನು
ಬಳಸಿಕೊಂಡಿ ಇಂತಹ ದಂಧೆ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸರು ಇಂತಹ ವ್ಯಕ್ತಿಗಳ ಮರಳು ಟಿಪ್ಪರ್‌ಗಳನ್ನು ಹಿಡಿಯಲು ಹಿಂದೇಟು ಹಾಕಿ ತಮ್ಮ ಮನೆ ಕಟ್ಟಲು ರೈತರು ಮರಳನ್ನು ತೆಗೆದುಕೊಂಡು ಹೋಗುವಾದ ಅಂತಹ ಟ್ರಾಫಿಕ್ಟಗಳನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಮರಳು ಮಾಫಿಯಾ ಮಾಡುವುದು ಅನಧಿಕೃತವಾಗಿದ್ದು ಕೂಡಲೇ ಇದನ್ನು ತಡೆಗಟ್ಟಬೇಕು ಎಂದು ಪುರಸಭೆ ಸದಸ್ಯ ವೀರೇಶ ಹಡಲಗೇರಿ ಆಗ್ರಹಿಸಿದ್ದಾರೆ.
ಈ ವೇಳೆ ಪುರಸಭೆ ಸದಸ್ಯರಾದ ಶಿವು ಹರಿಜನ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next