Advertisement

ಕ್ಷೇತ್ರದಲ್ಲೇ ಸ್ಥಳೀಯಾಡಳಿತ ಟಿಕೆಟ್‌ ಹಂಚಿಕೆ: ಶಕುಂತಳಾ ಶೆಟ್ಟಿ 

01:05 PM Aug 06, 2018 | |

ಪುತ್ತೂರು: ಸ್ಥಳೀಯಾಡಳಿತ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಸಭೆ ನಡೆಸಿದ್ದಾರೆ. ಸ್ಥಳೀಯಾಡಳಿತದ ಅಭ್ಯರ್ಥಿ ಆಯ್ಕೆ ಆಯಾ ಕ್ಷೇತ್ರದ ಶಾಸಕ ಅಥವಾ ಮಾಜಿ ಶಾಸಕರ ಜವಾಬ್ದಾರಿ ಎಂದು ತಿಳಿಸಿ ದ್ದಾರೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ತಿಳಿಸಿದರು.

Advertisement

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ಪುತ್ತೂರು ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹತ್ತು ವರ್ಷದಿಂದ ಪುತ್ತೂರು ಕಾಂಗ್ರೆಸ್‌ ಸೋಲು ಅನುಭವಿಸುತ್ತಿರಲು ಒಂದು ಗುಂಪು ಕಾರಣ ಎಂದು ರಾಜ್ಯಾಧ್ಯಕ್ಷರೇ ತಿಳಿಸಿದ್ದಾರೆ. ಆದ್ದರಿಂದ ಈ ಬಾರಿ ಸ್ಥಳೀಯವಾಗಿಯೇ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ವಾರ್ಡ್‌ನ ಜವಾಬ್ದಾರಿಯನ್ನು ಒಬ್ಬೊಬ್ಬನಿಗೆ ಹಂಚಲಾಗುತ್ತದೆ. ಅವರು ವಾರ್ಡ್ಗೆ ಭೇಟಿ ನೀಡಿ, ಜನರ ಅಭಿಪ್ರಾಯ ಸಂಗ್ರಹಿಸುವರು. ಕಾರ್ಯಕರ್ತರ ಆಯ್ಕೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಆಯ್ಕೆ ಮಾಡಿ, ಗೆಲ್ಲಿಸಿ ಕೊಡಬೇಕು. ಇವರ ಮೂಲಕ ಮತ್ತೆ ಪಕ್ಷ ಸಂಘಟನೆ, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಬೇಕು ಎಂದರು. ಬೊಂಡಾಲ ಜಗನ್ನಾಥ ಶೆಟ್ಟಿ, ಸುಧಾಕರ ಶೆಟ್ಟಿ, ವಿನಯ್‌ ಕುಮಾರ್‌ ಸೊರಕೆ ಪುತ್ತೂರಿನಲ್ಲಿ ಸೋಲಲು ಕಾರಣ ಏನು ಎನ್ನುವುದು ರಾಜ್ಯ ನಾಯಕರಿಗೆ ತಿಳಿದಿದೆ ಎಂದರು.

ವಾಣಿ ಶ್ರೀಧರ್‌, ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಅವರ ಸದಸ್ಯತ್ವವನ್ನು ರದ್ದು ಮಾಡಿದರೂ ಕಾಂಗ್ರೆಸ್‌ ಸಭೆಯಲ್ಲಿ ಬಂದು ಕುಳಿತಿದ್ದಾರೆ. ಈಗ ಕಾರ್ಯಕರ್ತರು ನಿರ್ಧರಿಸಬೇಕು- ತಾವು ಯಾರ ಹಿಂದೆ ಬರಬೇಕು ಎಂದು. 10 ಕಾರ್ಯಕರ್ತರಿದ್ದರೂ ಸಾಕು, ಆದರೆ ಅವರು ನಿಷ್ಠಾವಂತರಾಗಿ ಇರಬೇಕು. ಅಲ್ಲೊಮ್ಮೆ- ಇಲ್ಲೊಮ್ಮೆ ಕಾಣಿಸಿಕೊಳ್ಳುವವರು ಬೇಡ. ಕಾಂಗ್ರೆಸ್‌ ಬ್ಯಾಜ್‌ ಹಾಕಿಕೊಂಡು, ಬಿಜೆಪಿಗೆ ಮತ ಕೇಳುವವರು ಬೇಡ ಎಂದರು.

ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ, ನಗರಸಭೆ ಚುನಾವಣಾ ಉಸ್ತುವಾರಿ ಸುಬೋಧ್‌ ಆಳ್ವ ಮಾತನಾಡಿ, 25 ಸೀಟುಗಳನ್ನಾದರೂ ಗೆಲ್ಲಲೇಬೇಕು. ಇದಕ್ಕೆ ಪೂರಕ ಯೋಜನೆಗಳನ್ನು ರೂಪಿಸಿಕೊಳ್ಳಿ. 10 ಮನೆಗಳನ್ನು ಒಬ್ಬರಿಗೆ ಹಂಚಿಕೊಡಿ. ಇಂದಿನಿಂದಲೇ ಕೆಲಸ ಆರಂಭಿಸಿದರೆ, ಗೆಲುವು ಕಷ್ಟವಲ್ಲ. ಫಲಾಪೇಕ್ಷೆ ಇಲ್ಲದೆ, ಪ್ರಾಮಾಣಿಕವಾಗಿ ಕೆಲಸ ಮಾಡಿ. 30 ವರ್ಷಗಳಿಂದ ಗಾಂಧೀ ಕುಟುಂಬ ಅಧಿಕಾರದಲ್ಲಿಲ್ಲ. ಅಂದರೆ ಅವರು ಎರಡನೇ ಹಂತದ ನಾಯಕರನ್ನು ಬೆಳೆಸುವ ಕಡೆ ಗಮನ ಕೊಡುತ್ತಿದ್ದಾರೆ. ಪ್ರಾಮಾಣಿಕ ಕೆಲಸಗಾರರನ್ನು ಪಕ್ಷ ಗುರುತಿಸಿ, ಉನ್ನತ ಹುದ್ದೆಯನ್ನು ನೀಡುತ್ತದೆ. ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಒಂದೇ ಕುಟುಂಬದವರಂತೆ ದುಡಿಯೋಣ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಮಾತನಾಡಿ, 38 ವರ್ಷಗಳ ತನ್ನ ಕಾಂಗ್ರೆಸ್‌ ಜೀವನದಲ್ಲಿ ಮೊದಲ ಬಾರಿಗೆ ನಾಯಕಿಯೊಬ್ಬರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌ಗೆ ಪುತ್ತೂರಿನಲ್ಲಿ ಭವಿಷ್ಯ ಇದೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದರು.

Advertisement

40 ವರ್ಷಗಳ ನೋವು
ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ಹಿಂದಿನ ಪುರಸಭೆ ಚುನಾವಣೆಯಂತೆ ಈ ಬಾರಿಯೂ ಮರುಕಳಿಸಿದರೆ ಭಿನ್ನಮತ ಮಾಡುವುದು ನಿಶ್ಚಿತ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡಿಸಿಸಿಗೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕೇವಲ ಒಂದು ನೋಟಿಸ್‌ ನೀಡಿ ಸುಮ್ಮನಿದೀªರಿ. ಕಳೆದ 40 ವರ್ಷಗಳಿಂದ ನಾವು ನೋವು ಅನುಭವಿಸುತ್ತಿದ್ದೇವೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ, ಪ್ರಮುಖರಾದ ನಿರ್ಮಲ್‌ ಕುಮಾರ್‌ ಜೈನ್‌, ಜೋಕಿಂ ಡಿ’ಸೋಜಾ, ವಿಲ್ಮಾ ಡಿ’ಸೋಜಾ, ಯಾಕೂಬ್‌, ಕೌಶಲ್‌ ಪ್ರಸಾದ್‌ ಶೆಟ್ಟಿ, ಶಕೂರ್‌, ರಹಿಮಾನ್‌ ಬಪ್ಪಳಿಗೆ ಉಪಸ್ಥಿತರಿದ್ದರು. ಕೃಷ್ಣಪ್ರಸಾದ್‌ ಆಳ್ವ ಕಾರ್ಯಕ್ರಮ ನಿರೂಪಿಸಿದರು. 

20+ ಗುರಿ
ಪುತ್ತೂರು ನಗರಸಭೆಯಲ್ಲಿ ಕಾಂಗ್ರೆಸ್‌ 20ಕ್ಕೂ ಅಧಿಕ ಸೀಟ್‌ ಗೆಲ್ಲಬೇಕು. ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ವಾರ್ಡ್‌ಗಳಿಗೆ ಉಸ್ತುವಾರಿಗಳು ಬರಲಿದ್ದಾರೆ. ಇದಾಗಿ ಒಂದು ವಾರದೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಬಿ ಫಾರ್ಮ್ ನೀಡಲಾಗುವುದು.
– ಶಕುಂತಳಾ ಶೆಟ್ಟಿ ಮಾಜಿ ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next