ಕೋಲಾರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿವಿಧ ವಾರ್ಡ್‌ಗಳಿಗೆ ಶುಕ್ರವಾರ ಒಟ್ಟು 101 ವಾರ್ಡ್‌ಗಳಲ್ಲಿ 8 ವಾರ್ಡ್ ಗಳಿಗೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ನಾಮಪತ್ರಗಳ ಸಲ್ಲಿಕೆಯಾದ ವಿವರ ಈ ಹೀಗಿದೆ. ಕೋಲಾರ ನಗರಸಭೆಯ 35 ವಾರ್ಡ್‌ಗಳಲ್ಲಿ 1ನೇ ವಾರ್ಡ್‌ಗೆ 1 ನಾಮಪತ್ರ ಸಲ್ಲಿಕೆಯಾಗಿದೆ. ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳಲ್ಲಿ 6 ವಾರ್ಡ್‌ಗಳಿಗೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೆಜಿಎಫ್ ರಾಬರ್ಟ್‌ಸನ್‌ಪೇಟೆಯ 35 ವಾರ್ಡ್‌ಗಳಿಗೆ 1 ವಾರ್ಡ್‌ನಲ್ಲಿ 1 ನಾಮಪತ್ರ ಸಲ್ಲಿಕೆಯಾಗಿದೆ.
ಪರವಾನಗಿ ಶಸ್ತ್ರಾಸ್ತ್ರ ಬಳಕೆ ನಿಷೇಧ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರ ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ ಹಾಗೂ ನಗರಸಭೆ ಸಾರ್ವತ್ರಿಕ ಚುನಾವಣೆ-2019 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೆ ಜಿಲ್ಲೆಯ ಎಲ್ಲಾ ಆಯುಧ ಪರವಾನಗಿದಾರರು ಶಸ್ತ್ರಾಸ್ತ್ರಗಳನ್ನು ಒಯ್ಯುವುದನ್ನು ಹಾಗೂ ಅವುಗಳ ಬಳಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ನಗರ ಪ್ರದೇಶದ ಎಲ್ಲಾ ಆಯುಧ ಪರವಾನಗಿದಾರರು ತಾವು ಹೊಂದಿರುವ ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಾಗಲಿ ಅಥವಾ ಪರವಾನಗಿ ಹೊಂದಿದ ಆರ್ಮರಿಗಳಲ್ಲಿ ತಕ್ಷಣ ಠೇವಣಿ ಇಡಲು ಸೂಚಿಸಲಾಗಿದ್ದು, ಈ ಆದೇಶ ಅ.24 ರಿಂದ ನ.14ರವರೆಗೆ ಜಾರಿಯಲ್ಲಿರುತ್ತದೆ.
ಶಸ್ತ್ರ ಪರವಾನಗಿ ಹೊಂದಲು ವಿನಾಯಿತಿ: ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಅಧಿಕಾರಿಗಳು, ಸಾರ್ವಜನಿಕರು ಆತ್ಮ ರಕ್ಷಣೆಗಾಗಿ ಅಗತ್ಯವಿದ್ದಲ್ಲಿ ಅಥವಾ ಬ್ಯಾಂಕ್, ಕೈಗಾರಿಕಾ ಮುಂತಾದ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಆಯುಧ ಪರವಾನಗಿ ಹೊಂದಿರುವ ಸಂಸ್ಥೆ ಅಥವಾ ರೀಟೈಲರ್ ಆಗಿರುವ ಅಂಗೀಕೃತ ಸೆಕ್ಯೂರಿಟಿ ಗಾರ್ಡ್‌ಗಳು ಕಾರ್ಯನಿರ್ವಹಣಾ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವವರು ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಎಸ್ಪಿಯಿಂದ ಕೂಡಲೇ ವಿನಾಯಿತಿ ಪಡೆದುಕೊಳ್ಳಲು ಸೂಚಿಸಲಾಗಿದೆ.