Advertisement
2018- 19ನೇ ಆರ್ಥಿಕ ಸಾಲಿನ ಮಾ. 31ರ ವರೆಗೆ ಈ ಹಿಂದಿನ ವರ್ಷದ 17.81 ಕೋಟಿ ರೂ. ಹಾಗೂ ಈ ವರ್ಷದ 75.63 ಕೋಟಿ ರೂ. ಸೇರಿ ಒಟ್ಟು 93.44 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ 69. 71 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ತೆರಿಗೆಯನ್ನು ಮುಂಗಡವಾಗಿ ಪಾವತಿಸಿದವರಿಗೆ 1.12 ಕೋಟಿ ರೂ. ರಿಯಾಯಿತಿ ನೀಡಿದೆ. ಆ ಮೂಲಕ 22.61 ಕೋ. ರೂ. ತೆರಿಗೆ ಸಂಗ್ರಹ ಬಾಕಿ ಉಳಿದಿದೆ.
Related Articles
Advertisement
ಪುರಭವನದ ಬಾಡಿಗೆಯಿಂದ 37.78 ಲಕ್ಷ ರೂ. ಸಂಗ್ರಹ ಮಾಡಿದರೆ, ಮನಪಾ ಸ್ವಾಧೀನದ ಪ್ರದೇಶದ ನೆಲ ಬಾಡಿಗೆಯಿಂದ 12.80 ಲಕ್ಷ ರೂ., ಸುಡು ಮದ್ದುಗಳ ಮಳಿಗೆಗಳ ಬಾಡಿಗೆಯಿಂದ 6.22 ಲಕ್ಷ ರೂ. ಸಂಗ್ರಹ ಮಾಡಲಾಗಿದೆ.
ಹಿಂದಿನ ವರ್ಷಗಳಲ್ಲಿ ತೆರಿಗೆ ಸಂಗ್ರಹ 2013-14ರ ಆರ್ಥಿಕ ಸಾಲಿನಲ್ಲಿ 42.88 ಕೋಟಿ. ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿ, 34.41 ಕೋಟಿ ರೂ.ತೆರಿಗೆ ಸಂಗ್ರಹಿಸ ಲಾಗಿತ್ತು. 2014-2015ರಲ್ಲಿ 51.71 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿ, 41.46 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2015-2016ರಲ್ಲಿ 55.65 ಕೋಟಿ ರೂ. ಸಂಗ್ರಹ ಗುರಿ ಹೊಂದಿ, 47.47 ಕೋಟಿ ರೂ. ಸಂಗ್ರಹಿಸ ಲಾಗಿತ್ತು. 2016-17ರಲ್ಲಿ 60.39 ಕೋಟಿ ರೂ. ಸಂಗ್ರಹ ಗುರಿ ಹೊಂದಿ, 58.19 ಕೋಟಿ ರೂ. ಸಂಗ್ರಹಿಸಲಾಗಿತ್ತು. 2017-18ನೇ ಸಾಲಿನಲ್ಲಿ 67.98 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಇರಿಸಿಕೊಂಡು 51.89 ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಐದು ವರ್ಷಗಳಲ್ಲೇ ಅತಿ ಕಡಿಮೆ ತೆರಿಗೆ ಸಂಗ್ರಹ
ಮಹಾನಗರ ಪಾಲಿಕೆ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದರೂ ಐದು ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಕಡಿಮೆ ತೆರಿಗೆ ಸಂಗ್ರಹ ಮಾಡಲಾಗಿದೆ. 2013-14ರಲ್ಲಿ ಶೇ. 80.23, 2014-2015ರಲ್ಲಿ ಶೇ. 80.17, 2015-2016ರಲ್ಲಿ ಶೇ. 85.30, 2016-17ರಲ್ಲಿ ಶೇ. 96.36, 2017-2018ರಲ್ಲಿ ಶೇ.76.33 ರಷ್ಟು ತೆರಿಗೆ ಸಂಗ್ರಹ ಮಾಡಲಾಗಿತ್ತು. ಅತಿ ಕಡಿಮೆ ಸಂಗ್ರಹ ತೆರಿಗೆ
2018-19ರಲ್ಲಿ ಶೇ. 75ರಷ್ಟು ಮಾತ್ರವೇ ತೆರಿಗೆ ಸಂಗ್ರಹ ಮಾಡಲಾಗಿದೆ. ಐದು ಆರ್ಥಿಕ ವರ್ಷಗಳಲ್ಲೇ ಈ ಬಾರಿ ಸಂಗ್ರಹಿಸಿದ ತೆರಿಗೆ ಅತಿ ಕಡಿಮೆ ಸಂಗ್ರಹಗೊಂಡ ತೆರಿಗೆಯಾಗಿದೆ. ಬಾಕಿ ಪ್ರಮಾಣದಲ್ಲಿ ಹೆಚ್ಚಳ
ಪಾಲಿಕೆ ತೆರಿಗೆ ಸಂಗ್ರಹದ ಬಾಕಿ ಪ್ರಮಾಣದಲ್ಲಿ ಐದು ವರ್ಷಗಳಿಗೆ ಹೋಲಿಸಿದರೆ 2018-19ನೇ ಸಾಲಿನ ಮೊತ್ತ ಕೂಡ ಅಧಿಕವಾಗಿದೆ. 2013-14ರಲ್ಲಿ 8.47 ಕೋ.ರೂ. ತೆರಿಗೆ ಸಂಗ್ರಹ ಬಾಕಿಯಾಗಿದ್ದು, 2014-15ರಲ್ಲಿ 10. 25 ಕೋ. ರೂ., 2015-16ರಲ್ಲಿ 8.18 ಕೋ ರೂ.,2016-17ರಲ್ಲಿ
21.9 ಕೋ. ರೂ., 2017-18ರಲ್ಲಿ 16.09 ಕೋ. ರೂ., 2018-19ರಲ್ಲಿ 22.61 ಕೋ. ರೂ. ತೆರಿಗೆ ಸಂಗ್ರಹ ಬಾಕಿಯಾಗಿದೆ. ಪಾವತಿಗೆ ಸೂಕ್ತ ಕ್ರಮ
ಪಾಲಿಕೆಯ ಕಂದಾಯ ಇಲಾಖೆಯಿಂದ ತೆರಿಗೆ ಪಾವತಿಸುವಂತೆ ಜನಗಳಿಗೆ ಸೂಚನೆ ನೀಡಲಾಗಿದೆ. ಆದರೆ ನಿರೀಕ್ಷೆಯಂತೆ ತೆರಿಗೆ ಪಾವತಿಯಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸುತ್ತೇವೆ. ಬಾಕಿ ತೆರಿಗೆ ಪಾವತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
– ಗಾಯತ್ರಿ ನಾಯಕ್,
ಉಪ ಆಯುಕ್ತೆ ಮಹಾನಗರ ಪಾಲಿಕೆ – ಪ್ರಜ್ಞಾ ಶೆಟ್ಟಿ