ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಪ್ರಚಾರ ರಂಗೇರಿದೆ. ಪ್ರಮುಖ ಪಕ್ಷಗಳ ಘಟಾನುಘಟಿಗಳು ಪ್ರಚಾರ, ಚುನಾವಣಾ ಕಾರ್ಯತಂತ್ರಗಳಿಗೆ ಮುಂದಾಗಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ನಾನಾ ಕಸರತ್ತಿಗೆ ಮುಂದಾಗಿದ್ದಾರೆ.ಕಳೆದ14 ವರ್ಷಗಳಿಂದ ಪಾಲಿಕೆ ಅಧಿಕಾರದಲ್ಲಿರುವ ಬಿಜೆಪಿ, ಸುಮಾರು 30 ವರ್ಷಗಳಿಂದ ಸ್ವಂತ ಬಲದ ಆಳ್ವಿಕೆ ಕಳೆದುಕೊಂಡು ಪರಿತಪಿಸುತ್ತಿರುವ ಕಾಂಗ್ರೆಸ್ ಮತದಾರರ ಓಲೈಕೆಗೆ ತಮ್ಮದೇ ಯತ್ನದಲ್ಲಿ ತೊಡಗಿವೆ.
ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರ, ಕಾರ್ಯತಂತ್ರ ಇನ್ನಿತರ ವಿಷಯಗಳ ವಿಚಾರದಲ್ಲಿ ಇತರೆ ಎದುರಾಳಿ ಪಕ್ಷಗಳಿಗಿಂತ ಬಿಜೆಪಿ ಒಂದು ಹೆಜ್ಜೆ ಮುಂದೆ ಇರುತ್ತಿತ್ತು. ಈ ಬಾರಿ ಕಾಂಗ್ರೆಸ್ ಸಹ ಪ್ರಚಾರ,ಕಾರ್ಯತಂತ್ರ ವಿಚಾರದಲ್ಲಿಬಿಜೆಪಿಗೆ ಸವಾಲೊಡ್ಡುವ ರೀತಿಯಲ್ಲಿಮುಂದಡಿ ಇರಿಸಿದೆ.ಇತರೆಪಕ್ಷಗಳು,ಪಕ್ಷೇತರರು ತಮ್ಮ ಶಕ್ತಿಯಾನುಸಾರ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.
ಮತದಾನಕ್ಕೂ 48 ಗಂಟೆ ಮೊದಲು ಅಂದರೆ ಸೆ.1ರ ಬೆಳಗ್ಗೆ 7 ಗಂಟೆಯಿಂದ ಬಹಿರಂಗ ಪ್ರಚಾರ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವಾರ್ಡ್‌ವಾರು ಇಲ್ಲವೇ 2-3 ವಾರ್ಡ್ ಸೇರಿಸಿ ಬಹಿರಂಗ ಸಭೆ ನಡೆಸುವ ಕಾರ್ಯಕ್ಕೆ ಯಾವುದೇ ರಾಜಕೀಯ ಪಕ್ಷಗಳು ಮುಂದಾಗಿಲ್ಲ. ಬದಲಾಗಿ ಮನೆ, ಮನೆಯ ಪ್ರಚಾರಕ್ಕೆ ಒತ್ತು ನೀಡಿವೆ. ಘಟಾನುಘಟಿಗಳಪ್ರಚಾರ:2008ರ ಮೊದಲು ಮಹಾನಗರ ಪಾಲಿಕೆ ಚುನಾವಣೆ ಎಂದರೆ ಸ್ಥಳೀಯ ನಾಯಕರು, ಮುಖಂಡರ ನೇತೃತ್ವದಲ್ಲೇ ಪ್ರಚಾರ, ಕಾರ್ಯತಂತ್ರ ನಡೆಯುತ್ತಿತ್ತು.2008ರಲ್ಲಿಅಧಿಕಾರಕ್ಕೆಬಂದಬಿಜೆಪಿಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತಲ್ಲದೆ, ಪ್ರಚಾರಕ್ಕೆ ಮುಖ್ಯಮಂತ್ರಿ, ಸಚಿವರಾದಿಯಾಗಿ ರಾಜ್ಯ ನಾಯಕರು ಆಗಮಿಸತೊಡಗಿದರು. ಅಲ್ಲಿಂದ ಸ್ಥಳೀಯ ಸಂಸ್ಥೆ ಚುನಾವಣೆಯೂ ವಿಧಾನಸಭೆ-ಲೋಕಸಭೆ ಚುನಾವಣೆ ಮಾದರಿಯಲ್ಲಿ ಪ್ರಚಾರದ ಗತ್ತು ಪಡೆಯತೊಡಗಿದೆ.