Advertisement
ನಗರದ ಗಂಜ್ ಬಡಾವಣೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚರಂಡಿಯಲ್ಲಿ ಕಸಕಡ್ಡಿ, ಪ್ಲಾಸಿಕ್ ವಸ್ತುಗಳು ಸೇರಿಕೊಂಡು ನೀರು ಸರಾಗವಾಗಿ ಹರಿಯದ ಪರಿಣಾಮ ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಬಂದಿದೆ. ವಾರ್ಡ್ ನಂ.18ರಲ್ಲಿ ಬಡಾವಣೆಯ ಜನರು ನಿತ್ಯ ದುರ್ವಾಸನೆ ಸೇವಿಸಿಕೊಂಡೆ ಬದುಕಬೇಕಾಗಿದೆ. ಕಸ ವಿಲೇವಾರಿ, ಹೂಳು ತೆಗೆಯುವ ಕಾರ್ಯದಲ್ಲಿ ಪೌರಕಾರ್ಮಿಕರು ಸರಿಯಾಗಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ನಾಗರಿಕರು ದೂರುತ್ತಿದ್ದಾರೆ.
Related Articles
Advertisement
ನಗರಸಭೆಯ ಮುಂಭಾಗದ ಚರಂಡಿ ಸ್ಥಿತಿ ಹೀಗಾದರೆ ಇಡೀ ನಗರದ ದುಸ್ಥಿತಿ ಹೇಗಿರಬಹುದು ಎಂದು ಇಲ್ಲಿನ ಚಿತ್ರಣದಿಂದ ಅಂದಾಜಿಸಬಹುದು. ಅಲ್ಲದೇ ನಗರಸಭೆಯ ಮುಂಭಾಗದ ಚರಂಡಿ ಸ್ವತ್ಛಗೊಳಿಸಲಾಗದ ನಗರಸಭೆಯ ಅಧಿಕಾರಿಗಳು ಇತರ ಬಡಾವಣೆಯನ್ನು ಹೇಗೆ ಸರಿಪಡಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ನಗರದ 31 ವಾರ್ಡ್‌ಗಳ ಚರಂಡಿಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಬಹುತೇಕ ಬಡಾವಣೆಗಳು ತಿಪ್ಪೆ ಗುಂಡಿಯಾಗಿವೆ.
ಸೂಕ್ಷ್ಮತೆ ಅರಿತು ಕ್ರಮ ಕೈಗೊಳ್ಳಿ ವಾರ್ಡ್ ನಂ.18ರಲ್ಲಿ ಚರಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು, ಕೂಡಲೇ ನಗರಸಭೆಯ ಪೌರಾಯುಕ್ತರು ಸೂಕ್ಷ್ಮತೆ ಅರಿತು ಚರಂಡಿಯನ್ನು ಸ್ವತ್ಛಗೊಳಿಸಲು ಕ್ರಮಕೈಗೊಳ್ಳಬೇಕು∙ಈಶ್ವರರಾಜ ಇಂಗಿನಶೆಟ್ಟಿ , ಉದ್ದಿಮೆದಾರರು ಕುಸಿದ ನಗರಸಭೆ ಆಡಳಿತ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಮನೆ ಮುಂಭಾಗದಲ್ಲೇ ಕಸದ ತಿಪ್ಪೆ ಆವರಿಸಿದೆ. ಇನ್ನು ಇತರ ಬಡಾವಣೆ ಸಮಸ್ಯೆ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ನಗರಸಭೆ ಆಡಳಿತ ಸಂಪೂರ್ಣ ಕುಸಿದಿದೆ. ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು, ಕಚೇರಿಗೆ ಬಂದು ಚಕ್ಕರ್ ಹೊಡೆಯುವ ಸಿಬ್ಬಂದಿ, ಜನರ ಸಮಸ್ಯೆಗೆ ಸ್ಪಂದಿಸದ ಅಧ್ಯಕ್ಷೆ ಇರುವುದರಿಂದ ಜನರ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಜಿಲ್ಲಾ ಧಿಕಾರಿಗಳು ಆದಷ್ಟು ಬೇಗ ನಗರಸಭೆಗೆ ಸರ್ಜರಿ ಮಾಡಬೇಕು
ಲೋಹಿತ್ ಕಟ್ಟಿ , ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ಮಲ್ಲಿನಾಥ ಪಾಟೀಲ