Advertisement
ಮುನಿಭಾ ಮಜಾರಿ ಎನ್ನುವ ದಿಟ್ಟ ಪಾಕಿಸ್ತಾನಿ ಹೆಣ್ಣೊಬ್ಬಳ ಕಥೆಯಿದು..
Related Articles
Advertisement
ಮುನಿಭಾ ಹಾಗೂ ಆಕೆಯ ಗಂಡ ಖುರಾಮ್ ಸೈಜಾದ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅದೊಂದು ಭೀಕರ ಅಪಘಾತ ನಡೆಯಿತು. ಒಂದು ಕ್ಷಣ ಎಲ್ಲವನ್ನೂ ನೂಚ್ಚು ನೂರು ಮಾಡಿತ್ತು. ಕಾರಿನಿಂದ ಗಂಡ ಖುರಾಮ್ ಹಾರಿಕೊಂಡು ಅಲ್ಪ ಗಾಯ ಮಾಡಿಕೊಂಡು ಪ್ರಾಣ ಉಳಿಸಿಕೊಳ್ಳುತ್ತಾರೆ ಆದ್ರೆ ,ಇತ್ತ ಮುನಿಭಾ ಸಾವು ಬದುಕಿನ ನಡುವೆ ತನ್ನ ಛಿದ್ರ ದೇಹದೊಂದಿಗೆ ನೋವಿನ ನರಳಾಟದಿಂದ ಅರೆ ತ್ರಾಣದಲ್ಲಿ ಹೊರ ಬರಲಾಗದೆ ಕಾರಿನಲ್ಲೇ ಉಳಿಯುತ್ತಾಳೆ, ಆಳುತ್ತಾಳೆ, ಚೀರುತ್ತಾ ಮೂರ್ಛೆ ಹೋಗುತ್ತಾರೆ. ಒಂದು ಕ್ಷಣದ ಭೀಕರತೆ ಅವಳ ಬದುಕಿನ ಎಲ್ಲಾ ಉಮೇದುಗಳನ್ನು ಕಿತ್ತುಕೊಳ್ಳುತ್ತದೆ.
ಅಪಘಾತದ ನಂತರದಲ್ಲಿ ಒಂದು ಕ್ಷಣ ಎಲ್ಲವೂ ಮೌನ, ಎಲ್ಲರಿಗೂ ತಕ್ಷಣಕ್ಕೆ ಏನು ತಿಳಿಯದ ಪರಿಸ್ಥಿತಿ. ಪುಟ್ಟ ಹಳ್ಳಿಯೊಂದರಲ್ಲಿ ತಕ್ಷಣಕ್ಕೆ ಸಿಗುವ ಚಿಕಿತ್ಸೆ ಸೌಲಭ್ಯಗಳಿಲ್ಲ, ಪ್ರಾಥಮಿಕ ಚಿಕಿತ್ಸೆ ನೀಡುವ ಯಾವುದೇ ಸೌಕರ್ಯಗಳಿಲ್ಲ. ಇಂಥ ಹೊತ್ತಿನಲ್ಲಿ ಪಕ್ಕದಲ್ಲಿದ್ದ ಜೀಪ್ ಒಂದರಲ್ಲಿ ಸ್ಥಳೀಯ ವ್ಯಕ್ತಿಗಳು, ಅರೆ ಒದ್ದಾಟದ ರಕ್ತಸಿಕ್ತ ದೇಹವನ್ನು ಕಾರಿನಿಂದ ಕಷ್ಟಪಟ್ಟು ಎಳೆದು ಜೀಪಿನ ಹಿಂಬದಿಯಲ್ಲಿ ಮಲಗಿಸಿ ಅಲ್ಲಿಂದ ಮೂರು ಗಂಟೆ ದೂರದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ.
ಬದುಕುವ ಆಸೆಯನ್ನೇ ಚಿವುಟಿದ ಆಸ್ಪತ್ರೆಯ ಆ ದಿನಗಳು :
ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಚಿಕಿತ್ಸೆ ನೀಡಿದ್ರೂ, ಮುನಿಭಾ ಅದಾಗಲೇ ತನ್ನ ದೇಹದ ಅಂಗಾಂಗಗಳಿಗೆ ತೀವ್ರವಾಗಿ ಬಿದ್ದ ಏಟುಗಳಿಂದ ಬದುಕ ಬೇಕೆನ್ನುವ ಆಸೆಯನ್ನೇ ಮೊಟಕುಗೊಳಿಸುವ ಪರಿಸ್ಥಿತಿಯಲ್ಲಿದ್ದರು. ಅಪಘಾತದಿಂದ ಆದ ಶಾಶ್ವತ ಹೊಡೆತ ಒಂದರೆಡಲ್ಲ, ಸ್ಪೈನಲ್ ಕಾರ್ಡ್ ಮುರಿತದಿಂದ ಎದ್ದು ಕೂರದ ಸ್ಥಿತಿ. ಬಲಭುಜ,ಪಕ್ಕೆಲುಬು, ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡು ಆಸ್ಪತ್ರೆಯ ಬೆಡ್ ನಲ್ಲೇ ನರಳುವ ದಿನಗಳಲ್ಲಿ ಬದುಕು ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ದರು. ಏನೇ ಆದ್ರು ಮುನಿಭಾರ ಅಮ್ಮ ಮಗಳ ಈ ಪರಿಸ್ಥಿತಿಯನ್ನು ಕಂಡು ಸುಮ್ಮನೆ ಕೂರಲಿಲ್ಲ. ಪ್ರತಿದಿನವೂ ನಿರಂತರ ಅರೈಕೆ, ಬದುಕನ್ನು ಆಶದಾಯಕವನ್ನು ಬಾಳುವ ಹಾರೈಕೆಯ ಮಾತುಗಳನ್ನು ಹೇಳುತ್ತಲೇ ಬಂದರು.
ಬೆಂಕಿಯಿಂದ ಬಾಣಲೆಗೆ ಬಿದ್ದ ಬಾಳು :
ಲಿವರ್ ಹಾಗೂ ಶ್ವಾಸಕೋಶಕ್ಕೆ ಹೊಡೆತದ ಪರಿಣಾಮ ತಟ್ಟಿರೋದರಿಂದ ಮುನಿಭಾರಿಗೆ ಡಾಕ್ಡರ್ ಹತ್ತಿರ ಬಂದು, “ನೀನು ಚಿತ್ರ ಕಲಾವಿದೆ ಇನ್ನೂ ಜೀವಮಾನದಲ್ಲಿ ಆಗುವುದು ಕಷ್ಟ, ನಿನಗೆ ಎದ್ದು ನಡೆಯಲೂ ಕೂಡ ಅಸಾಧ್ಯ,ವೀಲ್ ಚಕ್ರದ ಗಾಡಿಯಲ್ಲೇ ನೀನು ಇರಬೇಕು”. ಎಂದಾಗ ಅಷ್ಟು ದಿನಗಳು ಅನುಭವಿಸಿದ ನೋವಿನಲ್ಲೇ ಅದನ್ನು ನುಂಗಿಕೊಂಡು ಬಿಟ್ಟಳು. ಆದ್ರೆ ಡಾಕ್ಟರ್ ಮುಂದುವರೆಸಿ ಹೇಳಿದ ಮಾತು ಅವಳ ದುಃಖವನ್ನು ನೋವಿನಲ್ಲಿ ಬೆರೆಸಿ ಕುಗ್ಗುವಂತೆ ಮಾಡಿತು. ” ನಿನ್ನ ಸ್ಪೈನಲ್ ಕಾರ್ಡ್ ಪೂರ್ತಿಯಾಗಿ ಹಾನಿಯಾಗಿರೋದರಿಂದ ನಿನಗೆ ತಾಯಿಯಾಗುವ ಭಾಗ್ಯವೂ ಇಲ್ಲ”. ಎನ್ನುವ ಮಾತು ಸಿಡಿಲಿನಂತೆ ಅವಳ ಮನಸ್ಸನ್ನು ಸೀಳಿಕೊಂಡು ಬಿಟ್ಟಿತು. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ದುಃಖದ ಮೇಲೆ ಇನ್ನಷ್ಟು ದುಃಖ ಎನ್ನುವ ಹಾಗೆ ಅವಳ ಗಂಡ ಅವಳಿಂದ ವಿಚ್ಛೇದನ ಪಡೆಯುತ್ತಾನೆ. ಮುನಿಭಾ ಮೌನಿಯಾಗುತ್ತಾಳೆ, ಯೋಚನೆಗಳನ್ನು ಯೋಚಿಸುವುದು ಬಿಟ್ಟು ಅವಳಿಂದ ಬೇರೆಲ್ಲವೂ ಅಸಾಧ್ಯ.
ಆಸ್ಪತ್ರೆಯ ಬೆಡ್ ನಲ್ಲೇ ಭರವಸೆ ಬಿತ್ತಿದ್ದಳು:
ಸತತ ಎರಡುವರೆ ತಿಂಗಳು ಆಸ್ಪತ್ರೆಯ ಬೆಡ್ ನಲ್ಲೇ ಎದ್ದು ಕೂರಲಾಗದ ಪರಿಸ್ಥಿತಿಯಲ್ಲಿ ಮುನಿಭಾ ಮತ್ತೆ ಕತ್ತಲೆಯಲ್ಲಿದ್ದ ತಮ್ಮ ಯೋಚನೆಗಳಿಗೆ ಬೆಳಕಿನ ಭರವಸೆಯನ್ನು ಬಿತ್ತಿ ಕನಸು ಕಾಣಲು ಪ್ರಾರಂಭಿಸಿದ್ದರು. ಈಗ ಅವಳೊಳಗೆ ಸಾಧಿಸಲೇ ಬೇಕು ಎನ್ನುವ ಅದಮ್ಯ ಛಲದ ಸಾಹಸಿಯೊಬ್ಬಳು ಹುಟ್ಟಿಕೊಂಡುಬಿಟ್ಟಿದ್ದಳು!. ಆಸ್ಪತ್ರೆಯ ಬೆಡ್ ನಲ್ಲೇ ಹೊರ ಜಗತ್ತಿನ ತನ್ನ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವ ತುಂಬುವ ಚಿತ್ರಗಳನ್ನು ಬಿಡಿಸುತ್ತಾಳೆ. ಅವಳ ಒಂದೊಂದು ಚಿತ್ರವೂ ನೂರು ಕಥೆಯನ್ನು ಹೇಳುವ ಅರ್ಥಗಳನ್ನು ಒಳಗೊಳ್ಳುವಂತೆ ಇತ್ತು. ಅವಳನ್ನು ಪ್ರೋತ್ಸಾಹಿಸ ಬೇಕು ಅನ್ನುವ ನಿಟ್ಟಿನಲ್ಲಿ ಅಂದಿನ ಗರ್ವನರ್ ಒಬ್ಬರು ಅವಳು ಬಿಡಿಸಿದ ಚಿತ್ರ ಗಳನ್ನು ಕೊಳ್ಳುತ್ತಾರೆ. ಮುನಿಭಾ ಚಿತ್ರ ಗಳನ್ನು ಬಿಡಿಸಿ ಖ್ಯಾತಿಯನ್ನು ಗಳಿಸುತ್ತಾಳೆ. ಎಲ್ಲೆಡೆಯೂ ಚಿತ್ರಗಳು ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ.