Advertisement

ಹೆಸರು ಕಾಳು ಉಸುಲಿ

09:37 PM Sep 13, 2019 | mahesh |

ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಬೇಕು. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಸಾಮಾನ್ಯವಾಗಿ ತಿನ್ನುವ ಆಹಾರ ಆರೋಗ್ಯಕರವಾಗಿದ್ದರೆ ನಾಮ್ಮ ದೇಹ ಕೂಡ ಯಾವುದೇ ಕಾಯಿಲೆಗಳಿಲ್ಲದೆ ಸಮತೋಲನದಲ್ಲಿರುತ್ತದೆ. ಹಾಗಾಗಿ ಮನೆಯಲ್ಲಿ ಮಾಡುವ ಅಡುಗೆಗಳು ಆದಷ್ಟು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಿ. ಆರೋಗ್ಯಕರ ಆಹಾರಗಳಲ್ಲಿ ಒಂದಾದ ಹೆಸರುಕಾಳಿನ ಉಸುಲಿ ರೆಸಿಪಿ ಇಲ್ಲಿದೆ.

Advertisement

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಲ ಎಣ್ಣೆ ಹಾಕಿ ಅದು ಖಾದ ಅನಂತರ ಅದಕ್ಕೆ ಸಾಸಿವೆ, ಉದ್ದಿನಬೆಳೆ ಹಾಕಿರಿ. ಒಗ್ಗರಣೆಗೆ ಮೊದಲು ಹಸಿ ಮೆಣಸು ಅಥವಾ ಒಣ ಮೆಣಸು ಯಾವುದನ್ನಾದರೂ ಒಂದನ್ನು ಸಣ್ಣಕ್ಕೆ ಹೆಚ್ಚಿ ಬಾಣಲೆಯಲ್ಲಿ ಕಾರ ಬೀಡುವವರೆಗೆ ಹುರಿದುಕೊಳ್ಳಬೇಕು ಅನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ, ಅನಂತರ ಅದಕ್ಕೆ ಹೆಚ್ಚಿಟ್ಟುಕೊಂಡ ಟೊಮೇಟೊ ಹಾಕಿ ಚೆನ್ನಾಗಿ ಹುರಿದುಕೊಂಡು ರಾತ್ರಿ ನೆನಸಿಟ್ಟುಕೊಂಡ ಹೆಸರುಕಾಳನ್ನು 2 ರಿಂದ 3 ಬಾರಿ ನೀರಿನಲ್ಲಿ ತೊಳೆದು ಅದನ್ನು ಬಾಣಲೆಗೆ ಹಾಕಿಕೊಂಡು ಅದಕ್ಕೆ ಬೇಕಾದಲ್ಲಿ ಚಿಟಿಕೆ ಅರಿಶಿನ ಹಾಕಿಕೊಳ್ಳಿ ಏಕೆಂದರೆ ಇದು ದೇಹದಲ್ಲಿರುವ ನಂಜಿನ ಅಂಶವನ್ನು ಹೋಗಲಾಡಿಸುತ್ತದೆ ಮತ್ತು ಅಡುಗೆಯಲ್ಲಿರುವ ಚೊಗರನ್ನು ಕಡಿಮೆ ಮಾಡುತ್ತದೆ. ಸಿಹಿ ಬೇಕಾದಲ್ಲಿ ಸಕ್ಕರೆಯನ್ನು ಮೇಲಿಂದ ಉದುರಿಸಿಕೊಳ್ಳಬಹುದು. ಅನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಬೆಂದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಇನ್ನೊಮ್ಮೆ ಚೆನ್ನಾಗಿ ಕಲಸಿಕೊಂಡರೆ ರುಚಿ ರುಚಿಯಾದ ಹೆಸರು ಕಾಳು ಉಸುಲಿ ಸವಿಯಲು ಸಿದ್ಧ.

ಬೆಳಗ್ಗಿನ ಹೊತ್ತು ಮಾಡಿ ತಿಂದರೆ ಪ್ರೋಟಿನ್‌ ಕೊಡುವುದಲ್ಲದೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಕಾದ ಶಕ್ತಿ ಈ ಆಹಾರದಲ್ಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ
ಹೆಸರು ಕಾಳು- 3-4 ಕಪ್‌
ಸಾಸಿವೆ -ಒಂದು ಚಿಟಿಕೆ
ಉದ್ದಿನ ಬೆಳೆ -ಸ್ವಲ್ಪ
ಎಣ್ಣೆ -4-5 ಚಮಚ
ಟೊಮೆಟೊ -1 ರಿಂದ 2
ಈರುಳ್ಳಿ -1 ರಿಂದ 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು
ಕಾಯಿ ತುರಿ- ಅರ್ಧ ಕಪ್‌
ಮೆಣಸು – ಸ್ವಲ್ಪ

-  (ಸಂಗ್ರಹ) ಪ್ರೀತಿ ಭಟ್‌ ಗುಣವಂತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next