Advertisement

ಮುಂಡ್ಕೂರು: ಸೋರುತಿಹುದು ಗ್ರಾಮ ಕರಣಿಕರ ಕಚೇರಿ

06:45 AM Jun 15, 2018 | |

ಬೆಳ್ಮಣ್‌: ಮಳೆ ಹಾನಿ, ಬೆಳೆ ಹಾನಿ ಸಹಿತ ವಿವಿಧ ಪ್ರಕೃತಿ ವಿಕೋಪಗಳ ರಿಪೋರ್ಟ್‌  ನೀಡಬೇಕಾಗಿರುವ ಮುಂಡ್ಕೂರು ಗ್ರಾಮದ ಗ್ರಾಮಕರಣಿಕರ ಕಛೇರಿಯ ಮಾಡಿನ ಹಂಚು ಹಾರಿ ಹೋಗಿದ್ದು ಮಳೆ ನೀರಿನ ನಡುವೆಯೇ ಗ್ರಾಮ ಕರಣಿಕರು ಗ್ರಾಮಸ್ಥರ ಕಂದಾಯ ಸೇವೆ ನೀಡಬೇಕಾಗಿದೆ.

Advertisement

ಈ ಹಿಂದೆ  ಗ್ರಾ.ಪಂ. ಕಚೇರಿಯಿದ್ದ  ಹಳೇ ಕಟ್ಟಡದಲ್ಲಿ  ಈ ಗ್ರಾಮ ಕರಣಿಕರ ಕಚೇರಿ ಇದ್ದು  ಕಟ್ಟಡದ ಜತೆ ಹಂಚಿನ ಮಾಡು ಕೂಡಾ ಹಳೆಯದಾಗಿರುವ ಕಾರಣ ನಿರಂತರ ಮಳೆ ಹಾಗೂ ಗಾಳಿಗೆ ಹಂಚು ತೂತು ಬಿದ್ದು ಭಾರೀ ಮಳೆ ಗಾಳಿ ಬಂದಾಗ  ನೀರು ಕಚೇರಿಯ ಒಳ ಹಾಗೂ ಹರ ವರಾಂಡದಲ್ಲಿ ಶೇಖರಣೆಯಾಗುತ್ತಿದೆ. ಅಧಿಕಾರಿಗಳ ಭೇಟಿಗೆ ಬರುವ ಗ್ರಾಮಸ್ಥರು ಕಚೇರಿಯ ವರಾಂಡದಲ್ಲಿ  ಕೆಸರ ನೀರ ಮೇಲೆಯೇ ನಿಂತು ಕಾರ್ಯ ನಿರ್ವಹಿಸಬೇಕಾಗಿದೆ.

ಕಟ್ಟಡಕ್ಕೆ ತಾಗಿಯೇ ಬೃಹತ್‌ ಮರಗಳಿದ್ದು ಮರಗಳ ಕೊಂಬೆಗಳು ಮುರಿದು ಬೀಳುವ ಪರಿಣಾಮದಿಂದಲೂ ಮಾಡಿನ ಹಂಚುವಿಗೆ ಹಾನಿಯಾಗುತ್ತಿದೆ. ಕಂದಾಯ ಇಲಾಖೆಯ ಪ್ರಕ್ರಿಯೆಗಳು ಇತ್ತೀಚೆಗಿನ ದಿನದಲ್ಲಿ ಆವಶ್ಯವಾಗಿರುವುದರಿಂದ  ಜನಸಾಮಾನ್ಯರು ಈ ಗ್ರಾಮಕರಣಿಕರ ಕಚೇರಿಯನ್ನು ಅವಲಂಬಿಸಿದ್ದು ಈ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್‌ ಆಡಳಿತ ಶೀಘ್ರ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರು  ಆಗ್ರಹಿಸಿದ್ದಾರೆ.

ತೊಂದರೆ ಮಾಮೂಲಿ
ಕಚೇರಿ ಕಟ್ಟಡ ಹಳೆಯದಾಗಿದ್ದು ಈ ರೀತಿಯ ತೊಂದರೆ ಮಾಮೂಲಿ, ಈ ಹಿಂದೆ ಕಚೇರಿಯ ಕಟ್ಟಡವನ್ನು ಮುಂಡ್ಕೂರು ಪಂಚಾಯತ್‌ ಆಡಳಿತ ಸುಸೂತ್ರವಾಗಿ ನಿರ್ವಹಿಸಿದೆ. ಈಗಾಗಲೇ ಪಂಚಾಯತ್‌ ಅಧ್ಯಕ್ಷರು ಸ್ಪಂದಿಸುವುದಾಗಿ ತಿಳಿಸಿದ್ದಾರೆ
– ಸುಖೇಶ್‌,ಗ್ರಾಮಕರಣಿಕ

ಶೀಘ್ರ ಕ್ರಮ
ಗ್ರಾಮ ಕರಣಿಕರ ಸೇವೆ ಗ್ರಾಮಸ್ಥರಿಗೆ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಕಛೇರಿಗೆ ಬರುವ ಜನರಿಗೆ ತೊಂದರೆಯಾಗದಂತೆ ನೋಡುವುದು ಪಂಚಾಯತ್‌ನ ಕರ್ತವ್ಯ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
– ಶುಭಾ.ಪಿ.ಶೆಟ್ಟಿ, 
ಮುಂಡ್ಕೂರು ಗ್ರಾ.ಪಂ. ಆಧ್ಯಕ್ಷೆ

Advertisement

ಕೂಡಲೆ ಕ್ರಮ ಕೈಗೊಳ್ಳಿ
ಕಂದಾಯ ಇಲಾಖೆ ಜನಸಾಮಾನ್ಯರ ಅತ್ಯಂತ ಬೇಡಿಕೆಯ ಇಲಾಖೆಯಾಗಿದ್ದು ಇಲ್ಲಿ ಸಮಸ್ಯೆಯಾದರೆ ಸಾರ್ವಜನಿಕರ ಎಲ್ಲ ಕೆಲಸಗಳೀಗೆ ಬ್ರೇಕ್‌ ಬೀಳುತ್ತದೆ. ಈ ಬಗ್ಗೆ  ಮುಂಡ್ಕೂರು ಪಂಚಾಯತ್‌ ಆಡಳಿತ ಕೂಡಲೇ ಸ್ಪಂದಿಸಬೇಕು
– ದಿನೇಶ್‌ , ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next