Advertisement
ಕಿನ್ನಿಗೋಳಿ, ಬೆಳ್ಮಣ್ ಕಡೆಯಿಂದ ಮೂಡುಬಿದಿರೆ ಮತ್ತು ಕೊಡ್ಯಡ್ಕಗಳಿಗೆ ಪ್ರಯಾಣಿಸುವವರಿಗೂ ಈ ರಸ್ತೆ ಅನಿವಾರ್ಯವಾಗಿರುವ ಕಾರಣ ಮರಗಳ ತೆರವಿಗೆ ಲೋಕೋಪಯೋಗಿ ಇಲಾಖೆ ಶೀಘ್ರ ಮುಂದಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯ ದಿಂದ ಕೇಳಿ ಬಂದಿದೆ.
Related Articles
Advertisement
ಈ ರಸ್ತೆ ಭಾರೀ ಇಕ್ಕಟ್ಟಾಗಿದ್ದು ಕಿರು ಸೇತುವೆ ಯನ್ನೂ ವಿಸ್ತರಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದರೂ ಇಲಾಖೆ ಮಾತ್ರ ಇನ್ನೂ ಸ್ಪಂದಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಚಾರ ಕಷ್ಟ
ರಸ್ತೆ ಹಾಗೂ ಕಿರುಸೇತುವೆ ಇಕ್ಕಟ್ಟಾಗಿರುವ ಕಾರಣ ವಾಹನ ಸಂಚಾರ ಕಷ್ಟವಾಗಿದೆ. ಇದರ ನಡುವೆ ಆಲದ ಮರಗಳೂ ರಸ್ತೆಗೆ ವಾಲಿಕೊಂಡು ಅಪಾಯ ಆಹ್ವಾನಿಸುತ್ತಿವೆ. ಸಂಬಂಧ ಪಟ್ಟ ಇಲಾಖೆ ರಸ್ತೆ ವಿಸ್ತರಣೆಯ ಜತೆಗೆ ಇವುಗಳ ತೆರವಿಗೆ ಮುಂದಾಗಬೇಕು.
– ರಾಜೇಶ್ ಕಡಂದಲೆ, ಬಸ್ ಚಾಲಕ
ಲೋಕೋಪಯೋಗಿ ಇಲಾಖೆಗೆ ಪತ್ರ
ಈ ಆಲದ ಮರಗಳ ಬಗ್ಗೆ ಏಕಾಏಕಿ ಪಂಚಾಯತ್ ಕ್ರಮಕೈಗೊಳ್ಳುವಂತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಪಂಚಾಯತ್ ವತಿಯಿಂದ ಪತ್ರ ಬರೆಯಲಾಗುವುದು.
– ಶುಭಾ ಪಿ. ಶೆಟ್ಟಿ, ಅಧ್ಯಕ್ಷೆ, ಮುಂಡ್ಕೂರು ಗ್ರಾ.ಪಂ.
ಹಲವು ಅಪಘಾತ
ಇಲ್ಲಿ ಈ ಹಿಂದೆಯೂ ಹಲವಾರು ಅಪಘಾತಗಳು ನಡೆದಿವೆ. ಅಪಘಾತಗಳಿಗೆ ರಸ್ತೆ ಇಕ್ಕಟ್ಟಾಗಿರುವುದೇ ಮುಖ್ಯ ಕಾರಣ.
– ಪುರಂದರ ಪೊಸ್ರಾಲು, ಸ್ಥಳೀಯರು