Advertisement
ಕಾಲನಿಯ ನೀರಿನ ಸಮಸ್ಯೆಯ ಬಗ್ಗೆ ಉದಯವಾಣಿ ಕಳೆದ 3 ತಿಂಗಳ ಹಿಂದೆ ಜನಪರ ಕಾಳಜಿ ವಿಭಾಗದಲ್ಲಿ ಸಚಿತ್ರ ವರದಿ ಪ್ರಕಟಿಸಿದ್ದರೂ ನೀರಿನ ಸಂಪರ್ಕಕ್ಕೆ ಖಾಸಗಿ ಜಮೀನು ತೊಂದರೆ ಯಾಗುತ್ತಿದ್ದು, ಸಮಸ್ಯೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಕಾಲನಿಯ ಮಂದಿ ತಮ್ಮ ನಿತ್ಯ ಕಾರ್ಯಕ್ಕೆ ನದಿ ನೀರನ್ನೇ ಹೆಚ್ಚಾಗಿ ಅವಲಂಬಿಸಿದ್ದು ಈ ಬಾರಿ ಶಾಂಭವಿ ನದಿಯೂ ಬತ್ತಿದೆ. ಒಂದೂವರೆ ಕಿ.ಮೀ. ದೂರ ನಡೆದು ಉಗ್ಗೆದ ಬೆಟ್ಟು ಪರಿಸರದಿಂದ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
Related Articles
ಸಮಸ್ಯೆಯ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಪಂಚಾಯತ್ ವತಿಯಿಂದ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಲು ಖಾಸಗಿ ಜಾಗವಿರುವುದು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಡೇ ಪಕ್ಷ ಕಾಲನಿಯಲ್ಲೇ ಒಂದು ತೆರೆದ ಬಾವಿ ಅಥವಾ ಕೊಳವೆ ಬಾವಿ ಯನ್ನಾದರೂ ನಿರ್ಮಿಸಬೇಕು ಎನ್ನು ವುದು ಇಲ್ಲಿನ ನಿವಾಸಿಗಳ ಬಹು ದಿನದ ಬೇಡಿಕೆಯಾಗಿದೆ.
Advertisement
ಖಾಸಗಿ ಜಮೀನಿರುವುದು ಸಮಸ್ಯೆಪಂಚಾಯತ್ ವ್ಯಾಪ್ತಿಯ ಎಲ್ಲ ಭಾಗಗಳಿಗೆ ನೀರು ಪೂರೈಕೆಯನ್ನು ಮಾಡಲಾಗಿದೆ. ಕನ್ನಡಬೆಟ್ಟು ಪರಿಸರಕ್ಕೆ ನೀರಿನ ಸಂಪರ್ಕ ಕಲ್ಪಿಸಲು ಖಾಸಗಿ ಜಮೀನಿರುವುದು ತೊಂದರೆ ಆಗುತ್ತಿದೆ. ಖಾಸಗಿಯವರು ಸ್ಪಂದಿಸಿದಲ್ಲಿ ನೀರು ಪೂರೈಕೆ ಸಾಧ್ಯ.
-ಶಶಿಧರ್ ಆಚಾರ್ಯ, ಪಿಡಿಒ ಮುಂಡ್ಕೂರು ಗ್ರಾ.ಪಂ. ನಿತ್ಯ ನರಕ ಯಾತನೆ
ಸಮಸ್ಯೆ ಬಗ್ಗೆ ಹಲವುಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಈ ಭಾಗದ ಜನ ನೀರಿಗಾಗಿ ನಿತ್ಯ ನರಕಯಾತನೆ ಪಡುವಂತಾಗಿದೆ.
-ಜಯರಾಮ ಶೆಟ್ಟಿ, ಸ್ಥಳೀಯರು