ಮುಂಡಗೋಡ: ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ 4ರಲ್ಲಿ ನಡೆದಿದ್ದು ಮತ್ತೊಬ್ಬ ಟಿಬೆಟಿಯನ್ ವ್ಯಕ್ತಿ ಗಂಭೀರ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಸೆ.5ರ ಮಂಗಳವಾರ ರಾತ್ರಿ ನಡೆದಿದೆ.
ಜಮಯಾಂಗ್ ಲೋಬ್ಸಂಗ್ (35) ಕೊಲೆಯಾದ ಟಿಬೆಟಿಯನ್ ವ್ಯಕ್ತಿ.
ಗೊನಪ್ ಚೊಡೇಕ್ ಹತ್ಯೆ ಮಾಡಿದ ವ್ಯಕ್ತಿ. ಈತನು ಕೂಡಾ ಗಂಭೀರ ಗಾಯಗೊಂಡಿದ್ದಾನೆ. ಗೊನಫ್ ಮಾಜಿ ಸೈನಿಕನಾಗಿದ್ದು, ಕ್ಯಾಂಪ್ ನಂ 4 ನಿವಾಸಿ ಎಂದು ತಿಳಿದು ಬಂದಿದೆ.
ಚಾಕು ಇರಿತಕ್ಕೊಳಗಾಗಿದ್ದ ಜಮಾಯಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಆರೋಪಿತ ಗೊನಪ್ ನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ವರಿಷ್ಠಧಿಕಾರಿ ಎನ್. ವಿಷ್ಣವರ್ದನ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಟಿಬೆಟಿಯನ್ ಸೆಟ್ಲಮೆಂಟ್ ಚೇರಮನ್ ಡೊಲ್ಮಾ ಸಿರಿಂಗ್, ಡಿವೈಎಸ್ಪಿ ಕೆ ಎಲ್ ಗಣೇಶ, ಸಿಪಿಐ ಬಿ ಎಸ್ ಲೋಕಾಪುರ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ ಇದ್ದರು.