Advertisement

ಲಿಂ|ತೋಂಟದ ಸಿದ್ಧಲಿಂಗ ಶ್ರೀ ಕಂಚಿನ ಪುತ್ಥಳಿ ಅನಾವರಣ ಇಂದು

11:59 AM Oct 06, 2022 | Team Udayavani |

ಮುಂಡರಗಿ: ತಾಲೂಕಿನ ಡಂಬಳ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿ ಪತಿಯಾಗಿದ್ದ ಲಿಂ|ಡಾ|ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಲಿಂಗಾಯತ್‌ ಷಟ್‌ಸ್ಥಲ ತತ್ವದ ಆಧಾರದ ಮೇಲೆ ನಿರ್ಮಿಸಿರುವ ಶಿಲಾಮಂಟಪದಲ್ಲಿ ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಕಂಚಿನ ಪುತ್ಥಳಿ ಸಾಂಕೇತಿಕವಾಗಿ ಅ.6ರಂದು ಗುರುವಾರ ಮುಂಜಾನೆ ಅನಾವರಣಗೊಳ್ಳಲಿದೆ.

Advertisement

ಡಂಬಳದಲ್ಲಿ ತೋಂಟದಾರ್ಯ ಮಠದ ಸಮೀಪ ಬಸ್‌ ನಿಲ್ದಾಣದ ಪಕ್ಷದಲ್ಲಿಯೇ ಶಿಲಾಮಂಟಪ ನಿರ್ಮಿಸಲಾಗಿದೆ. ಈ ಶಿಲಾಮಂಟಪವದಲ್ಲಿ ಲಿಂ.ಶ್ರೀ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಕಂಚಿನ ಪುತ್ಥಳಿಯನ್ನು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ನೇತೃತ್ವದಲ್ಲಿ ನಾಡಿನ ಹರಗುರುಚರಮೂರ್ತಿಗಳು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ. ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ ಜನಮಾನಸದಲ್ಲಿ ಜನಪ್ರಿಯರಾಗಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಲಿಂ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ನೆನಪು ಜನರು, ಭಕ್ತ ಸಮೂಹದ ಮಧ್ಯೆ ಶಾಶ್ವತಗೊಳಿಸಲು ತೋಂಟದಾರ್ಯ ಮಠದ ವತಿಯಿಂದ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳಲಿದೆ.

ಲಿಂಗಾಯತ ತಾತ್ವಿಕತೆಯ ಶಿಲಾ ಮಂಟಪ: ಡಂಬಳದಲ್ಲಿ ಭಕ್ತರ ಇಚ್ಛೆಯ ಮೇರೆಗೆ ಲಿಂಗಾಯತ ತತ್ವದ ಷಟಸ್ಥಲಗಳ ಆಧಾರದ ಮೇಲೆ ಶಿಲಾ ಮಂಟಪ ನಿರ್ಮಾಣಗೊಂಡಿದೆ. ಲಿಂಗಾಯತ ಮೂಲಾ ಧಾರಗಳಾದ ಷಟಸ್ಥಲದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಸ್ಥಲ ಸೂಚಿಸುವ ಆರು ಶಿಲಾಕಂಬಗಳ ಆಧಾರದ ಮೇಲೆ ಶಿಲಾಮಂಟಪ ನಿರ್ಮಾಣಗೊಂಡಿದೆ. ಈ ಶಿಲಾಮಂಟ ಪದ ಮಧ್ಯೆದಲ್ಲಿ ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ನಿಂತಿರುವ ಭಂಗಿಯಲ್ಲಿ ಇರುವ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.

ಕಂಚಿನ ಪುತ್ಥಳಿ: ಬೆಂಗಳೂರಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕಂಚಿನಲ್ಲಿ ನಿರ್ಮಾಣಗೊಂಡಿರುವ ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯವರ ನಿಂತಿರುವ ಭಂಗಿಯಲ್ಲಿ ಇರುವ ಕಂಚಿನ ಪುತ್ಥಳಿ 8.50 ಕ್ವಿಂಟಲ್‌ ಭಾರವಿದೆ. ಈ ಕಂಚಿನ ಪುತ್ಥಳಿ ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯವರು ನಿಂತಿರುವ ಭಂಗಿಯಲ್ಲಿ 7 .4 ಫೂಟ್‌ ಎತ್ತರವಾಗಿದೆ. ಈ ಪುತ್ಥಳಿಯನ್ನು 16/16 ಫೂಟ್‌ಗಳ ಮೇಲೆ ನಿರ್ಮಿಸಿರುವ ಸಿಮೆಂಟಿನ ಬುನಾದಿಯ ಮೇಲೆ 21ಫೂಟ್‌ ಎತ್ತರದ ಶಿಲಾಮಂಟಪ ನಿಂತಿದೆ. ಮುಂಬರುವ ದಿನಗಳಲ್ಲಿ ನಾಡಿನ ಸಾಕ್ಷಿಪ್ರಜ್ಞೆ, ಸೌಹಾರ್ದಯತೆಯ ಹರಿಕಾರರು, ಲಿಂಗಾಯತದ ನಿಜ ಸಾಕಾರದಲ್ಲಿ ಮೈದಳೆದ ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಯವರ ನೆನಪು ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ.

ಕನ್ನಡ ನಾಡು ಕಂಡ ಅಪರೂಪದ ಮಹಾಸ್ವಾಮೀಜಿ ಲಿಂ|ಡಾ|ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಕಂಚಿನ ಪುತ್ಥಳಿ ಸಾಂಕೇತಿಕವಾಗಿ ಲೋಕಾರ್ಪಣೆಗೊಳ್ಳುತ್ತಿರುವುದು ಭಕ್ತರ ಮನದಲ್ಲಿ ಹರ್ಷವನ್ನುಂಟು ಮಾಡಿದೆ. ಲಿಂಗಾಯತ ಆಶಯದ ಷಟಸ್ಥಲದ ಮೇಲೆ ಕಂಚಿನ ಪುತ್ಥಳಿ ಶಿಲಾಮಂಟಪದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲಿದೆ.  – ಜಿ.ವಿ.ಹಿರೇಮಠ, ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕರು

Advertisement

-ಹು.ಬಾ.ವಡ್ಡಟ್ಟಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next