Advertisement

Mundaje: ಸೂಪರ್‌ ಮಾರ್ಕೆಟ್‌ಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತು ನಾಶ

07:51 AM May 21, 2023 | |

ಬೆಳ್ತಂಗಡಿ: ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ರಸ್ತೆಯ ಬಿ ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್ ನಲ್ಲಿ ರವಿವಾರ ಮುಂಜಾನೆ ಸುಮಾರು 4.30 ರ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ.

Advertisement

ಪತ್ರಿಕಾ ವಿತರಣೆ ಮಾಡುವವರು ಘಟನೆ ಗಮನಕ್ಕೆ ಬಂದು ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಸಹಕಾರ ಹಾಗೂ ಅಗ್ನಿಶಾಮಕದಳ ಸಕಾಲದಲ್ಲಿ ಸ್ಪಂದಿಸಿದೆ. ಆದರೆ ಬೆಂಕಿ ಸಂಪೂರ್ಣ ತಗುಲಿದ್ದರಿಂದ ಮಾಲಕರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next