Advertisement

ನಗರ ಸಭೆ ವ್ಯಾಪ್ತಿ ನಿಗದಿ ಅವೈಜ್ಞಾನಿಕ

04:18 PM Dec 10, 2019 | Suhan S |

ಮುಳಬಾಗಿಲು: ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಸಂಬಂಧ ಈಗಾಗಲೇ ತಾಲೂಕು ಆಡಳಿತ 5 ಕಿ.ಮೀ. ವ್ಯಾಪ್ತಿಯನ್ನು ನಿರ್ಧರಿಸಿದೆ. ಆದರೆ, ನಿಗದಿ ಮಾಡಿರುವ ವ್ಯಾಪ್ತಿಗೆ ಒಳಪಟ್ಟಿರುವ ಕೆಲವು ಗ್ರಾಮಗಳು ನಗರದಿಂದ 10 ಕಿ.ಮೀ.ಗೂ ಹೆಚ್ಚು ದೂರ ಇವೆ. ಇದರಿಂದ ಈ ಗ್ರಾಮಗಳ ಜನರು, ಅಕ್ರಮ ಸಕ್ರಮ, ಭೂ ಸಾಗುವಳಿ ಪತ್ರಕ್ಕಾಗಿ ಅರ್ಜಿ ಹಾಕಿಕೊಂಡಿರುವರು, ಕೆಲವು ಬಡವರು ಸರ್ಕಾರಿ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ.

Advertisement

ಕರ್ನಾಟಕ ಪೌರಸಭೆಗಳ ಕಾಯ್ದೆ 19649ನೇ ಪ್ರಕರಣದಲ್ಲಿ ನಿಗದಿಪಡಿಸಿದಂತೆ ಮುಳ ಬಾಗಿಲು ಪುರಸಭೆ ಪ್ರದೇಶವನ್ನು ಸಣ್ಣ ನಗರ ಸಭೆ ಪ್ರದೇಶ ಎಂದು ಘೋಷಣೆ ಮಾಡಿ, ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿದ್ಧಿಕ್‌ಪಾಷ ಅವರು ಆದೇಶ ಹೊರಡಿಸಿದ್ದರು. ಹೀಗಾಗಿ ಕಳೆದ ಜನವರಿ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅವರು, ಇಲ್ಲಿನ ನಗರಸಭೆ ವ್ಯಾಪ್ತಿಯನ್ನು 5 ಕಿ.ಮೀ. ಗುರುತಿಸಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಸರ್ವೆ ಕಾರ್ಯ ಮಾಡಿ ತಾಲೂಕು ಆಡಳಿತ ವ್ಯಾಪ್ತಿಯನ್ನು ನಿರ್ಧರಿಸಿದ್ದು, ಅದು ವೈಜ್ಞಾನಿಕವಾಗಿದೆ ಎಂದು ಕೆಲವು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಗುರುತಿಸಲಾದ ಗ್ರಾಮಗಳು: ಈಗಾಗಲೇ ಗುರುತಿಸಿರುವ ವ್ಯಾಪ್ತಿಯಲ್ಲಿ ಕಸಬಾ ಹೋಬಳಿ ಚಾಮರೆಡ್ಡಿಹಳ್ಳಿ, ಜಿ.ವಡ್ಡಹಳ್ಳಿ, ಗುಮ್ಲಾಪುರ, ಕವತನಹಳ್ಳಿ, ಪಿ.ಗಂಗಾಪುರ, ಕೊತ್ತೂರು, ಕಸವಿರೆಡ್ಡಿಹಳ್ಳಿ, ನರಸೀಪುರ ದಿನ್ನೆ, ದೊಡ್ಡಬಂಡಹಳ್ಳಿ, ಕುಂಬಾರಹಳ್ಳಿ, ಚಿಕ್ಕಬಂಡ ಹಳ್ಳಿ, ಜಂಗಾಲಹಳ್ಳಿ, ಅಲ್ಲಾಲಸಂದ್ರ, ಕಪ್ಪಲಮಡಗು, ಮನ್ನೇನಹಳ್ಳಿ, ದಾರೇನಹಳ್ಳಿ, ಸೊನ್ನವಾಡಿ, ಮಂಚಿಗಾನಹಳ್ಳಿ, ಖಾದ್ರೀಪುರ, ತುರುಕರಹಳ್ಳಿ, ಲಿಂಗಾಪುರ, ಸೋಮೇಶ್ವರ ಪಾಳ್ಯ, ಕದರೀಪುರ, ಸಿದ್ದಘಟ್ಟ, ಚಲುವ ನಾಯಕನಹಳ್ಳಿ, ದುಗ್ಗಸಂದ್ರ, ಮಾರಂಡಹಳ್ಳಿ, ಹೊಸಹಳ್ಳಿ, ಸೀಗೇನಹಳ್ಳಿ, ತೊರಡಿ, ಕುರುಬರ ಹಳ್ಳಿ, ಆವಣಿ ಹೋಬಳಿ ಮಲ್ಲಕಚ್ಚನಹಳ್ಳಿ, ಶೆಟ್ಟಿಬಣಕನಹಳ್ಳಿ, ಅಸಲಿಅತ್ತಿಕುಂಟೆ, ಜಮ್ಮನ ಹಳ್ಳಿ, ದೊಡ್ಡಮಾದೇನಹಳ್ಳಿ, ವಿ.ಗುಟ್ಟ ಹಳ್ಳಿ, ಚಿಕ್ಕಮಾದೇನಹಳ್ಳಿ, ಅನಂತಪುರ, ಕುಮುದೇನಹಳ್ಳಿ, ವರದಗಾನಹಳ್ಳಿ, ದುಗ್ಗಸಂದ್ರ ಹೋಬಳಿ ದೊಡ್ಡಗುರ್ಕಿ, ಎಚ್‌.ಗೊಲ್ಲಹಳ್ಳಿ, ರಚ್ಚಬಂಡಹಳ್ಳಿ, ಕೆ.ಜಿ.ಲಕ್ಷ್ಮೀಸಾಗರ, ಜಂಗಮ ಕನ್ನಸಂದ್ರ ಮತ್ತು ಕುರುಡುಮಲೆ ಗ್ರಾಮ ಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ.

ಸೌಲಭ್ಯಗಳಿಂದ ವಂಚಿತ: ಆದರೆ, ದೊಡ್ಡಗುರ್ಕಿ, ಎಚ್‌.ಗೊಲ್ಲಹಳ್ಳಿ, ರಚ್ಚಬಂಡ ಹಳ್ಳಿ, ಕೆ.ಜಿ.ಲಕ್ಷ್ಮೀಸಾಗರ, ಜಂಗಮ ಕನ್ನಸಂದ್ರ ಮತ್ತು ಕುರುಡುಮಲೆ, ಚಾಮರೆಡ್ಡಿಹಳ್ಳಿ, ಮನ್ನೇನಹಳ್ಳಿ, ದುಗ್ಗಸಂದ್ರ, ವರದಗಾನಹಳ್ಳಿ ಸೇರಿ ಹಲವು ಗ್ರಾಮಗಳು ನಗರದಿಂದ 5 ಕಿ.ಮೀ. ಗಿಂತಲೂ ಹೆಚ್ಚು ದೂರದಲ್ಲಿದ್ದರೂ ತಾಲೂಕು ಆಡಳಿತ ಅವೈಜ್ಞಾನಿಕವಾಗಿಸೇರಿಸಿದೆ. ಇದರಿಂದ ಈ ಗ್ರಾಮಗಳ ಜನರುದರ ಕಾಸ್ತು ಸೇರಿ ಸರ್ಕಾರಿ ಯೋಜನೆಗಳನ್ನು ಪಡೆಯಲಾಗದೇ, ಅದರಿಂದ ದೂರ ಉಳಿಯುಂತಾಗಿದೆ. ಅದಕ್ಕೆ, ಪೂರಕವಾಗಿ ಇತ್ತೀಚಿಗೆ ಸೊನ್ನವಾಡಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಈ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡು, ತಾಲೂಕು ಆಡಳಿತ ನಿರ್ಧಾರ ಮಾಡಿರುವ ನಗರಸಭೆ ವ್ಯಾಪ್ತಿಯ ಅವೈಜ್ಞಾನಿಕವಾಗಿ ಕ್ರಮ ದಿಂದ ನಮಗೆ ಸರ್ಕಾರಿ ಸೌಲಭ್ಯ ಸಿಗದಂತಾಗಿದೆ. ಹೀಗಾಗಿ ವೈಜ್ಞಾನಿಕವಾಗಿ ನಿಗದಿ ಮಾಡಿರುವ ನಗರಸಭೆ ವ್ಯಾಪ್ತಿ ರದ್ದು ಮಾಡಲು ಅಬಕಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಎಚ್‌.ನಾಗೇಶ್‌ ಮುಂದೆ ತಮ್ಮ ಮನವಿ ಸಲ್ಲಿಸಿದರು.

ಈಗ ನಿಗದಿ ಮಾಡಿರುವ 5 ಕಿ.ಮೀ. ವ್ಯಾಪ್ತಿಗೆ ಒಳಪಟ್ಟಿರುವ 47 ಗ್ರಾಮಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ತಮ್ಮಗಳ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದೇವೆ. ಆದರೆ, ಈಗ ನಗರಸಭೆ ವ್ಯಾಪ್ತಿಯನ್ನು 5 ಕಿ.ಮೀ. ಒಳಪಡದಿದ್ದರೂ ಅವೈಜ್ಞಾನಿಕವಾಗಿ ನಿಗದಿ ಮಾಡಿದ್ದರ ಪರಿಣಾಮ ಭೂ ಮಂಜೂರಾತಿಗಾಗಿ (ದರಕಾಸ್ತು) ಅರ್ಜಿ 57 ಸಲ್ಲಿಸಲು ಅವಕಾಶವಿಲ್ಲದಂತೆ ಆಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದರು.

Advertisement

 

ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next