Advertisement
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ಸೋಮವಾರ ನ.ಪಂ. ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.
ವೆಂಕಪ್ಪ ಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಪಟ್ಟಿಯನ್ನು ನಾನು ತಯಾರಿಸಿ ಬ್ಯಾನರ್ ಅಳವಡಿಸುತ್ತೇನೆ ಎಂದರು. ಸದಸ್ಯ ರೋಹಿತ್ ಮಾತನಾಡಿ, ಕೇಂದ್ರ, ರಾಜ್ಯ ಸರಕಾರ ಜನತೆಗೆ ವಿವಿಧ ಯೋಜನೆಗಳ ಮೂಲಕ ಹಣ ನೀಡುತ್ತಾ ಜನಪರ ಕೆಲಸ ಮಾಡುತ್ತಿದೆ. ಇದರ ಪಟ್ಟಿ ನನ್ನಲ್ಲೂ ಇದೆ. ಈ ಬಗ್ಗೆ ನಾನೂ ಬ್ಯಾನರ್ ಹಾಕುವೆ ಎಂದು ತಿಳಿಸಿದರು.
Related Articles
ನ.ಪಂ. ವಠಾರದಲ್ಲಿ ಕಸದ ರಾಶಿ ಹಾಗೆ ಉಳಿಯಲು ಹಿಂದಿನ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಕಾರಣ ಎಂದು ದೂರು ನೀಡಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಇದಕ್ಕೆ ಅವರೊಬ್ಬರೆ ಕಾರಣವೆ? ಒಬ್ಬನನ್ನೇ ಹೊಣೆ ಮಾಡುವುದು ಎಷ್ಟು ಸರಿ. ಹಿಂದಿನವರು ಕಾರಣರಲ್ಲವೆ ಎಂದು ಸದಸ್ಯ ವೆಂಕಪ್ಪ ಗೌಡ ಪ್ರಶ್ನಿಸಿದಾಗ ಅಧ್ಯಕ್ಷ ವಿನಯಕುಮಾರ್ ಮಾತನಾಡಿ, ನಮ್ಮ ಆಡಳಿತ ಅವಧಿಯಲ್ಲಿ ಕಸದ ರಾಶಿ ತೆರವಿಗೆ ಅಂದಿನ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರು ವಿಫರಾಗಿದ್ದಾರೆ ಎಂದು ನಾವು ಬರೆದಿದ್ದೇವೆ ಎಂದರು. ಕಸ ಸಾಗಾಟಕ್ಕೆ ಪ್ರಮಾಣ ಅಂದಾಜು ಮಾಡುವಲ್ಲಿ ವ್ಯತ್ಯಾಸ ಆಗಿರುವುದಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸುಧಾಕರ್ ಸಮಜಾಯಿಸಿಕೆ ನೀಡಿದರು. ಕಸ ನಿರ್ವಹಣೆ ಬಗ್ಗೆ ನಾವು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಅವರು ಆದಷ್ಟು ಬೇಗ ಅನುಮತಿ ನೀಡಿದಲ್ಲಿ ಬೇಗ ಕಸ ಸಾಗಾಟ ಮಾಡುತ್ತೇವೆ. ಆದರೆ ಅವರು ಲಿಖೀತ ರೂಪದಲ್ಲಿ ಅನುಮತಿ ನೀಡಬೇಕು ಎಂದು ವಿನಯಕುಮಾರ್ ತಿಳಿಸಿದರು.
Advertisement
ಕಪ್ಪು ಪಟ್ಟಿ ಸಚಿವ ಎಸ್.ಅಂಗಾರ ಅವರು ಸಾಮಾನ್ಯ ಸಭೆಗೆ ಬರಬೇಕೆಂದು ಪಟ್ಟು ಹಿಡಿದಿರುವ ವಿಪಕ್ಷ ಸದಸ್ಯ ಸದ್ರಿ ಸಭೆಗೂ ಕಪ್ಪು ಪಟ್ಟಿ ಧರಿಸಿದ್ದರು. ನ.ಪಂ.ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸದಸ್ಯ ಶರೀಫ್ ಕಂಠಿ ಆರೋಪಿಸಿದರು. ಮನೆ ಮಂಜೂರು ವಿಚಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ ಸೇರಿದಂತೆ ನ.ಪಂ. ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ವಂದಿಸಿದರು. ಬ್ಯಾನರ್‌ಗೆ ಆಕ್ಷೇಪ
ಸುಳ್ಯ ನಗರದಲ್ಲಿ ಲವ್ ಜೆಹಾದ್ ಕುರಿತು ಬ್ಯಾನರ್ ಅಳವಡಿಸಲಾಗಿದ್ದು, ಇದು ಸಮಾಜದ ಸೌಹಾರ್ದ ಕೆಡಿಸುವ ರೀತಿಯಲ್ಲಿದೆ ಎಂದು ಸದಸ್ಯ ಕೆ.ಎಸ್. ಉಮ್ಮರ್‌ಹೇಳಿದರು. ಲವ್ ಜೆಹಾದ್ ಇದೆ ಎಂಬುದನ್ನು ಕೋರ್ಟ್ ಮಾನ್ಯ ಮಾಡಿಲ್ಲ. ಬ್ಯಾನರ್ ಅಳವಡಿಸಿ 15 ದಿನಗಳು ಕಳೆದರೂ ತೆರವಾಗಿಲ್ಲ. ಒಂದೋ ಬ್ಯಾನರ್ ತೆರವು ಮಾಡಬೇಕು. ಇಲ್ಲವೇ ಲವ್ ಜೆಹಾದ್ ಇಲ್ಲ ಎಂಬ ಬಗ್ಗೆ ಬ್ಯಾನರ್ ಅಳವಡಿಸಲು ನಮಗೂ ಅನುಮತಿ ನೀಡಬೇಕು ಎಂದು ಶರೀಫ್ ಆಗ್ರಹಿಸಿದರು. ಉತ್ತರಿಸಿದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಲವ್ ಜೆಹಾದ್ ಇದೆಯೋ, ಇಲ್ಲವೋ ಗೊತ್ತಿಲ್ಲ. ಎನ್‌ಐಎ ಸುಳ್ಯಕ್ಕೂ ಬಂದಿದೆ. ಮಂಗಳೂರಿನ ವಿದ್ಯಾಸಂಸ್ಥೆಯ ಮೇಲೂ ದಾಳಿ ನಡೆಸಿದೆ. ಇದು ಇಲ್ಲಿ ಚರ್ಚಿಸುವ ವಿಚಾರವಲ್ಲ. ಬ್ಯಾನರ್ ತೆಗೆಯಲು ಸಂಘಟನೆಯವರಿಗೆ ತಿಳಿಸಿದ್ದೇವೆ. ತೆಗೆದಿರುವ ಸಾಧ್ಯತೆಯಿದೆ. ತೆಗೆದಿಲ್ಲ ಎಂದಾದರೆ ತೆಗಿಯುವಂತೆ ತಿಳಿಸಲಾಗುವುದು ಎಂದರು.