Advertisement
ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ನಗರದ ಒಳ ಚರಂಡಿ ಅವ್ಯವಸ್ಥೆಯನ್ನು ಸದಸ್ಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪಕ್ಷಬೇಧಮರೆತ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಿಮಗೆ ಈ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ಹಣ ಬೇಕು, ಒಂದು ಯೋಜನೆಗೆ ಎಷ್ಟು ಬಾರಿ ಅಂದಾಜು ವೆಚ್ಚ ಸಿದ್ಧಪಡಿಸುತ್ತೀರಿ, ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ಲವೇ, ಹಣ ಏನುಬಿಟ್ಟಿ ಬಿದ್ದಿದಿಯಾ, 2007ರಲ್ಲಿ 7 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಗೆಈಗಾಗಲೇ 24 ಕೋಟಿ ರೂ. ಖರ್ಚಾಗಿದೆ. ಈಗಮತ್ತೆ ಕಾಮಗಾರಿಪೂರ್ಣಗೊಳಿಸಲು ಇನ್ನೂ34 ಕೋಟಿ ರೂ.ಯೋಜನೆ ಸಿದ್ಧಪಡಿಸುತ್ತಿದ್ದೀರಿ ಎಂದು ಸದಸ್ಯರಾದ ಖಾಲೀದ್, ಕಪೀಲೇಶ್,ಯೋಗೀಶ್, ಗಾಯತ್ರಿ, ಯೋಗಾನಂದ, ಗಿರೀಶ್, ಶ್ವೇತಾ ಲಕ್ಷ್ಮೀ, ಶ್ರೀಕಂಠಸ್ವಾಮಿ, ದೊರೆಸ್ವಾಮಿ, ಮಹೇಶ್ ಮತ್ತಿತರ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು.
Related Articles
Advertisement
ಈ ವೇಳೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಕರಿಬಸವಯ್ಯ, ಅಧಿಕಾರಿಗಳು ಗ್ರಾಪಂ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು. ಇದರಿಂದ ಕೋಪಗೊಂಡ ಸದಸ್ಯರು, ನೀವು ಅಧಿಕಾರಿಗಳ ಪರವೋ ಅಥವಾ ಜನತೆಯಪರವೋ ಎಂಬುದನ್ನುಮೊದಲು ತೀರ್ಮಾನಿಸಿ ಎಂದು ತರಾಟೆಗೆ ತೆಗೆದುಕೊಂಡರು.
ಬಜಾರ್ ರಸ್ತೆ: 2016ರಲ್ಲಿ ಬಜಾರ್ ರಸ್ತೆ ಅಭಿವೃದ್ಧಿಗಾಗಿ ಆದ ಕಾಂಕ್ರೀಟ್ ರಸ್ತೆ ಟೆಂಡರ್ ಏನಾಯಿತು, ಆಗ ಬಿಡುಗಡೆಯಾದ ಆದ 2.5 ಕೋಟಿ ರೂ. ಏನಾಯ್ತು, ಈಗ ಕಾಂಕ್ರೀಟ್ ಬದಲು ಡಾಂಬರು ಹಾಕಲು ಏಕೆ
ಮುಂದಾಗಿದ್ದೀರಿ, ಇದು ಪೂರ್ಣಗೊಳ್ಳುವುದು ಯಾವಾಗ ಎಂದು ಸದಸ್ಯರು ಪ್ರಶ್ನಿಸಿದರು. ಈ ಕಾಮಗಾರಿಯ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ ದಿಂದ ಬಜಾರ್ ರಸ್ತೆಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಗೈರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನಗರ ಸಭಾ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ತ್ಯಾಜ್ಯ ಗುಂಡ್ಲುನದಿ ಮೂಲಕ ಕಪಿಲೆ ನದಿ ಒಡಲು ಸೇರುತ್ತೆ! ನಗರಸಭಾಅಧ್ಯಕ್ಷ ಮಹದೇವಸ್ವಾಮಿ ಮಾತ ನಾಡಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ನಗರಸಭಾ ಸದಸ್ಯರನ್ನು ಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ದೇವಾಲಯದ ಸುತ್ತ ಸ್ವತ್ಛತೆ ಇಲ್ಲವಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ಮುಂದುವರಿದಿದೆ. ಒಳ ಚರಂಡಿ ತ್ಯಾಜ್ಯವನ್ನು ಎಲ್ಲಿಗೆ ಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವಾಲಯದ ಎಂಜನಿಯರ್ ರವಿಕುಮಾರ್, “ಇನ್ನೆಲ್ಲಿಗೆ ಬಿಡಲು ಸಾಧ್ಯ ಸರ್, ತ್ಯಾಜ್ಯ ನೀರು ಗುಂಡ್ಲು ನದಿಗೆ ಸೇರಿಕೊಳ್ಳುತ್ತೆ.ಅಲ್ಲಿಂದಅದುಕಪಿಲಾ ನದಿಯ ಒಡಲಿಗೆ ಹೋಗುತ್ತದೆ¤ ಎಂಬ ಸತ್ಯವನ್ನು ಬಹಿರಂಗ ಪಡಿಸಿದಾಗ ಸಭೆಯಲ್ಲಿದ್ದ ಎಲ್ಲರೂ ಬೆಚ್ಚಿ ಬಿದ್ದರು.