Advertisement
ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಸದಸ್ಯ ಯಲ್ಲಪ್ಪ ಕಟಗಿ ಮಾತನಾಢುತ್ತ, ನಗರಸಭೆಯ ಕಡತ ಒಂದನ್ನು ಒಬ್ಬ ವ್ಯಕ್ತಿ ತನ್ನ ಕೈಯಲ್ಲಿಟ್ಟುಕೊಂಡು ನಗರಸಭೆಯ ಕಾರ್ಯಾಲಯದಲ್ಲಿ ಮತ್ತು ರಸ್ತೆಯ ಮೇಲೆ ತಿರುಗಾಡಿದ ಕುರಿತು ವಿಡಿಯೋವನ್ನು ನಗರಸಭೆಯ ಅಧಿಕಾರಿಗಳಿಗೆ, ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರ ಗಮನಕ್ಕೆ ತರುವುದರ ಜೊತೆಗೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಕುರಿತು ಸಭೆಯ ಗಮನಕ್ಕೆ ತಂದರು.
Related Articles
Advertisement
ನಗರಸಭೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾವುದೆ ವಿಷಯವು ಸದಸ್ಯರ ಗಮನಕ್ಕೆ ಬರುತ್ತಿಲ್ಲ. ನಗರಸಭೆಯ 31 ಜನ ಸದಸ್ಯರ ಜೊತೆಗೆ ಚರ್ಚೆ ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ನಗರಸಭೆಯ ಸಾಮಾನ್ಯ ಸಭೆ ವಿವಿಧ ವಿಷಯಗಳಿಗೆ ಅನುಮೋದನೆ ನೀಡುವುದರ ಜೊತೆಗೆ ಹೆಚ್ಚಾಗಿ ಲೋಪದೋಷಗಳ ಕುರಿತು ಚರ್ಚೆ ಮಾತ್ರ ಬಿರುಸಿನಿಂದ ನಡೆಯಿತು.
ಕಾರ್ಮಿಕರ ನೇಮಕಾತಿಯಲ್ಲಿ ದೋಷಗಳ ಕುರಿತು ಸದಸ್ಯರಾದ ಯಲ್ಲಪ್ಪ ಕಟಗಿ ಮತ್ತು ಅರುಣ ಬುದ್ನಿ ಸಭೆಯ ಗಮನಕ್ಕೆ ತಂದರು. ಸದಸ್ಯರ ಪ್ರಶ್ನೆಗೆ ಪೌರಾಯುಕ್ತ ಅಶೋಕ ಗುಡಿಮನಿ ಉತ್ತರಿಸಿದರೂ ಸದಸ್ಯರು ಮಾತ್ರ ಉತ್ತರಕ್ಕೆ ತೃಪ್ತಿಯಾಗಲಿಲ್ಲ.
ನೌಕರರ ಹಾಜರಾತಿಯಲ್ಲಿ ಆಕ್ರಮ: ಕುರಿತು ಸದಸ್ಯ ಶ್ರೀಶೈಲ ಬೀಳಗಿ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಅಧಿಕಾರಿಗಳಲ್ಲಿರುವ ಮಾಹಿತಿಯ ಕೊರತೆ ಎದ್ದು ಕಾಣುತ್ತಿತ್ತು.
ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಹಲವಾರು ಆರೋಪಗಳಿಗೆ ಒಳಗಾದರು.
ಸಭೆಯಲ್ಲಿ ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಸ್ಥಾಯಿ ಸಮಿತಿಯ ಕಾರ್ಯಾಧ್ಯಕ್ಷ ಸದಾಶಿವ ಪರೀಟ ಸೇರಿದಂತೆ ನಗರಸಭೆಯ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಕುಷ್ಟಗಿ ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಧರಣೇಂದ್ರ ಕುಮಾರ್ ಅಧಿಕಾರ