Advertisement

ಮುನಾಫ್ ಪಟೇಲ್‌ ಕ್ರಿಕೆಟ್‌ ವಿದಾಯ

06:10 AM Nov 11, 2018 | |

ಹೊಸದಿಲ್ಲಿ: ಭಾರತದ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯ, ಈಗ ತಂಡದಿಂದ ಬೇರ್ಪಟ್ಟಿರುವ ಮಧ್ಯಮ ವೇಗಿ ಮುನಾಫ್ ಪಟೇಲ್‌ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

Advertisement

“ನಿವೃತ್ತಿಗೆ ವಿಶೇಷ ಕಾರಣವಿಲ್ಲ. ವಯಸ್ಸಾಗುತ್ತಿದೆ.ಫಿಟ್‌ ನೆಸ್‌ ಕಾಪಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುವ ಆಟಗಾ ರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಇನ್ನೂ ಇಲ್ಲೇ ಉಳಿಯುವುದು ಸರಿಯಲ್ಲ. 2011ರ ವಿಶ್ವ ಕಪ್‌ ವಿಜೇತ ತಂಡದಲ್ಲಿ ನಾನಿದ್ದೆ ಎಂಬ ಖುಷಿ ಇದೆ’ ಎಂದು ಮುನಾಫ್ ಪಟೇಲ್‌ ಹೇಳಿದರು. 2011ರ ಬಳಿಕ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

“ನಿವೃತ್ತಿ ವಿಚಾರದಲ್ಲಿ ಯಾವುದೇ ವಿಷಾದವಿಲ್ಲ. ಧೋನಿಯನ್ನು ಹೊರತುಪಡಿಸಿ ನಾನು ಯಾರೊಂದಿಗೆಲ್ಲ ಆಡಿದ್ದೆನೋ ಅವರೆಲ್ಲ ಈಗಾಗಲೇ ನಿವೃತ್ತಿ ಪಡೆದಿದ್ದಾರೆ.ಒಂದು ವೇಳೆ ಉಳಿದ ಆಟಗಾರರು ಇನ್ನೂ ಆಡುತ್ತಿದ್ದು, ನಾನು ಮಾತ್ರ ವಿದಾಯ ತಿಳಿಸುತ್ತಿದ್ದರೆ ಬೇಸರವಾಗುತ್ತಿತ್ತು’ ಎಂದು ಮುನಾಫ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದೆ ಕೋಚಿಂಗ್‌ನಲ್ಲಿ ನಿರತರಾಗುವ ಯೋಜನೆ ಅವರದು.

ಮುನಾಫ್ 13 ಟೆಸ್ಟ್‌, 70 ಏಕದಿನ ಹಾಗೂ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 125 ವಿಕೆ ಟ್‌ಗಳನ್ನು ಪಡೆದಿದ್ದಾರೆ. ವೃತ್ತಿ ಜೀವನದಲ್ಲಿ ಅವರು ಗಾಯಾ ಳಾಗಿ ಹೊರಗುಳಿದ್ದೇ ಹೆಚ್ಚು. ದೇಶಿ ಕ್ರಿಕೆಟ್ನಲ್ಲಿ ಬರೋಡಾ ಹಾಗೂ ಗುಜರಾತ್‌ ತಂಡವನ್ನು ಪ್ರತಿನಿಧಿಸಿರುವ ಮುನಾಫ್ 69 ಪಂದ್ಯಗಳಲ್ಲಿ 231 ವಿಕೆಟ್‌ ಸಂಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next