Advertisement

ಅಮ್ಮಾ…ನೀನು ಸಿಸಿ ಕ್ಯಾಮೆರಾ?

06:55 AM Dec 27, 2017 | Harsha Rao |

ಬೆಳೆದು ನಿಂತ ಮಗಳಿದ್ದ ಮನೆಯ ಆ ಎದೆಬಡಿತವಿದು. ಮಗಳು ಎಷ್ಟು ಹೊತ್ತಿಗೆ ಕೆಲಸಕ್ಕೆ ಹೋಗ್ತಾಳೆ? ತಡರಾತ್ರಿಯೂ ಯಾವುದೇ ಭಯವಿಲ್ಲದೆ ಬರ್ತಾಳೆ. ಅವಳಿಗೆ ಇಷ್ಟೊಂದು ಮುಕ್ತ ಸ್ವಾತಂತ್ರ್ಯ ನೀಡಿದ್ದೇ ತಪ್ಪಾಯಿತೇ ಎಂದು ಅಮ್ಮ ಚಿಂತಿಸುತ್ತಿದ್ದಾಳೆ. ಆ ಆತಂಕಕ್ಕೆ ಮಗಳೇನು ಉತ್ತರಿಸುತ್ತಾಳೆ ಗೊತ್ತೇ?

Advertisement

ವರ್ಷ ಇಪ್ಪತ್ತೈದು ಆಗುತ್ತಾ ಬಂದ್ರೂ, ಮಗಳು ಮದುವೆಗೆ ಒಪ್ಪುತ್ತಿಲ್ಲ. ಈಗಿನ ಜನರೇಷನ್ನೇ ಹಾಗೆ, ಏನಾದರೂ ಯಡವಟ್ಟು ಮಾಡಿಕೊಳ್ಳೋದು ಸಹಜ. ಹಾಗೇ ಏನಾದ್ರೂ ಹೆಚ್ಚು ಕಡಿಮೆ ಮಾಡಿಕೊಂಡಿದ್ದಾಳಾ? ಅಮ್ಮನಿಗೆ ಹೀಗೊಂದು ಸಣ್ಣ ಗುಮಾನಿ ಸದಾ ಕಾಡುತ್ತಲೇ ಇರುತ್ತೆ. ಅದು ವ್ಯಕ್ತವಾಗೋದು ಸುತ್ತಮುತ್ತ ಏನಾದ್ರೂ ಅಹಿತಕರ ಘಟನೆಗಳು ನಡೆದಾಗ. ಪಕ್ಕದ ಮನೆ ಹುಡುಗಿ ಹಾಗೆ ಮಾಡಿಕೊಂಡಳಂತೆ, ಅವಳು ದಾರಿ ತಪ್ಪಿದ್ದಾಳೆ, ಮತ್ತೂಬ್ಬಳ ನಡತೆ ಸರಿ ಇಲ್ವಂತೆ, ಇಂಥ ಮಾತುಗಳು ಬರುವಾಗ ಅಮ್ಮನ ಆತಂಕಗಳಿಗೆ ರೆಕ್ಕೆಗಳು ಮೂಡುತ್ತವೆ.

ಭುಜದೆತ್ತರಕ್ಕೆ ಬೆಳೆದ ಮಗಳನ್ನು ಬಯ್ಯುವಂತಿಲ್ಲ. ತುಂಬಾ ಓದಿದ ಜಾಣೆ, ಬುದ್ಧಿಮಾತು ಹೇಳಬೇಕೆಂದೇನಿಲ್ಲ. ಆದರೂ ಆತಂಕ ತಳಮಳ ತಪ್ಪಿದ್ದಲ್ಲ. ಅವಳಿಗೆ ಹುಡುಗ- ಹುಡ್ಗಿàರ್‌ ಜೊತೆ ಬಿಂದಾಸ್‌ ಆಗಿರೋದಷ್ಟೇ ಗೊತ್ತು. ಬಹುಶಃ ಮಗಳನ್ನು ಅಂಕೆಯಿಲ್ಲದೆ ಬೆಳೆಸಿದೆವೋ, ಹಾಗೆ ಬೆಳೆಸಿ ಈಗ ಎಡವಿದೆವೋ? ಸ್ವಾತಂತ್ರ ಕೊಟ್ಟಿದ್ದು ಅತಿಯಾಯೊ¤à? ಎಂದೆಲ್ಲ ಯೋಚಿಸುತ್ತಲೇ ಅಮ್ಮ ಸುಸ್ತಾಗುತ್ತಿದ್ದಾಳೆ.

ಮಗಳು ಎಷ್ಟು ಹೊತ್ತಿಗೆ ಕೆಲಸಕ್ಕೆ ಹೋಗ್ತಾಳೆ? ತಡರಾತ್ರಿಯೂ ಯಾವುದೇ ಭಯವಿಲ್ಲದೆ ಬರ್ತಾಳೆ. ಎಷ್ಟೋ ದೂರ ಒಬ್ಬೊಬ್ಬಳೇ ಪ್ರಯಾಣಿಸುತ್ತಾಳೆ. ಒಬ್ಬಳೇ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ತಾಳೆ. ಯಾವತ್ತೂ ಫೋನ್‌ನಲ್ಲೇ ಬ್ಯುಸಿ ಆಗಿರುತ್ತಾಳೆ. ಅವಳ ಕೆಲಸವೇ ಹಾಗೆ. ಗಂಡಿನ ಹಾಗೆ ಎಲ್ಲಾದಕ್ಕೂ ಸೈ. ಒಂದೊಂದ್ಸಲ ಅವಳ ಸಾಧನೆ, ಹಠ, ಯಶಸ್ಸು, ಅವಿರತ ದುಡಿಮೆ ಬಗ್ಗೆ ಹೆಮ್ಮೆ ಅನಿಸಿದ್ರೂ ಯಾಕೋ ಸ್ವಲ್ಪ$ಭಯವೂ ಆಗುತ್ತೆ ಅಮ್ಮನಿಗೆ.

ಮಗಳದು ಸುಖಪಡಬೇಕಾದ ವಯಸ್ಸು. ನಮ್ಮ ಕಾಲದಲ್ಲಿ ಯಾವೊಬ್ಬಳ ಹೆಣ್ಮಗಳೂ ಈ ರೀತಿ ಇರಲಿಲ್ಲ. ಈಗಲೂ ಇವಳ ರೀತಿಯ ಹೆಣ್ಮಕ್ಕಳು ಪುಟ್ಟ ನಗರಗಳಲ್ಲಿ ಅಪರೂಪವೇ. ಇವಳ ಓರಗೆಯವರೆಲ್ಲಾ ಮದುವೆಯಾಗಿ, ಸಂಸಾರ ಮಾಡಿಕೊಂಡು ಹಾಯಾಗಿದ್ರೆ, ಇವಳದ್ದೇನು ದರ್ದು ದುಡಿಮೆ, ಕರಿಯರ್‌, ಸಾಧನೆ, ಅಂಥ ಹಾಳಾದ್ದು? ಅಮ್ಮನ ಮನಸ್ಸು ನೊಂದುಕೊಳ್ಳುತ್ತೆ. ಅವಳನ್ನು ಗಂಡಿನ ಹಾಗೆ ಬೆಳೆಸಿದರೂ, ಅವಳು ಹುಡುಗನ ಹಾಗಿರುವುದು ತಾಯಿ ಹೃದಯಕ್ಕೆ ಇಷ್ಟವಿಲ್ಲ. ನಮಗೂ ವಯಸ್ಸಾಯ್ತು. ಮಗಳ ಮದುವೆಯಾಗಿಬಿಟ್ರೆ, ನಿಶ್ಚಿಂತೆಯಿಂದ ಕಣ್ಣು ಮುಚ್ಚುತ್ತೇವೆ… ಹೀಗೆಲ್ಲಾ ಯೋಚಿಸುತ್ತೆ ಅಮ್ಮನ ಕೋಮಲ ಮನಸ್ಸು.
– – –
ಅಮ್ಮ ಕೇಳು ಇಲ್ಲಿ, ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ನಾನು ದಡ್ಡಿಯಲ್ಲ. ನಿನ್ನ ಆತಂಕವನ್ನು ಹೆಜ್ಜೆ ಹೆಜ್ಜೆಗೂ ಗಮನಿಸುತ್ತಲೇ ಇರುತ್ತೇನೆ. ನಾನು ನನ್ನ ದಾರಿಯ ಬಗ್ಗೆ ತುಂಬಾ ಸೀರಿಯಸ್‌ ಆಗಿದ್ದೇನೆಯೇ ಹೊರತು, ನೀವು ಕೊಟ್ಟ ಸ್ವಾತಂತ್ರÂವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನಿಮ್ಮ ಮನಸಿನಲ್ಲಿರುವ ಶಂಕೆ ಯಾವತ್ತೂ ನಿಜ ಆಗೋಲ್ಲ. ಅಂಥದ್ದೊಂದು ಗಿಲ್ಟ್ ನನ್ನಲ್ಲಿ ಕಂಡುಬಂದಾಗ ನೇರವಾಗಿ ಕೇಳು. ನಾನೇ ಅದಕ್ಕೆ ಉತ್ತರಿಸುವೆ. ನನಗೆ ನೂರಕ್ಕೆ ನೂರರಷ್ಟು ಭರವಸೆ ಇದೆ, ಅಂಥ ಸಂದರ್ಭ ಯಾವತ್ತೂ ಬರಲಿಕ್ಕಿಲ್ಲ ಅಂತ. ನೀವಿಟ್ಟ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಲಾರೆ. ಹೆತ್ತವರಿಗೆ ದ್ರೋಹ ಬಗೆದು, ತಪ್ಪು ಮಾಡುವವಳಲ್ಲ ಈ ಜಾಣೆ. ನಾನು ನಿಮ್ಮ ಮಗಳು. ಅಷ್ಟಕ್ಕೂ ನನಗೆ ಮದುವೆ ಈಗಲೇ ಬೇಕೇನಮ್ಮಾ? ಹೀಗಂತ ಅಮ್ಮನಿಗೆ ಹೇಗೆ ಕೌನ್ಸೆಲಿಂಗ್‌ ಮಾಡಲಿ?

Advertisement

– ಶುಭಾಶಯ ಆದಿರಾಜ್‌, ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next