ಮುಂಬೈ: ಮುಂಬೈನ ಪ್ರತಿಷ್ಠಿತ ಲಾಲ್ ಬೌಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಬರೋಬ್ಬರಿ 3.66 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:40% ಕಮಿಷನ್ ವಿರುದ್ಧ ‘ಪೇ ಸಿಎಂ’ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಗಣೇಶೋತ್ಸವ ಸಂದರ್ಭದಲ್ಲಿ ಲಾಲ್ ಬೌಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಪೆಂಡಾಲ್ ಹಾಕಲು ರಸ್ತೆಗಳಲ್ಲಿ 183 ಗುಂಡಿಗಳನ್ನು ತೋಡಿದ್ದು, ಈ ಹಿನ್ನೆಲೆಯಲ್ಲಿ ಬಿಎಂಸಿ ಭಾರೀ ಮೊತ್ತದ ದಂಡ ವಿಧಿಸಿರುವುದಾಗಿ ವರದಿ ವಿವರಿಸಿದೆ.
ಪ್ರತಿ ಗುಂಡಿಗೆ 2,000 ರೂಪಾಯಿಯಂತೆ ದಂಡ ವಿಧಿಸಿದ್ದು, ಒಟ್ಟು 183 ಗುಂಡಿಗಳಿಗೆ 3.66 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ಹೇಳಿದೆ. ಡಾ.ಬಾಬಾಸಾಹೇಬ್ ರಸ್ತೆ ಮತ್ತು ಟಿಬಿ ಕದಂ ಮಾರ್ಗದ ನಡುವಿನ ರಸ್ತೆಯಲ್ಲಿ ಗುಂಡಿ ತೋಡಲಾಗಿತ್ತು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು ಇ ವಾರ್ಡ್ ಮುನ್ಸಿಪಲ್ ಕಾರ್ಪೋರೇಶನ್ ಹೊರಡಿಸಿದ ನೋಟಿಸ್ ನಲ್ಲಿ ತಿಳಿಸಿದೆ. ಗಣೇಶೋತ್ಸವದ ಬಳಿಕ ಬಿಎಂಸಿ ಸೆಪ್ಟೆಂಬರ್ 5ರಂದು ರಸ್ತೆಯ ಪರಿಶೀಲನೆ ನಡೆಸಿತ್ತು.
ಗಣೇಶೋತ್ಸವ ಸಮಿತಿಗೆ ನೀಡಲಾದ ಪರವಾನಿಗೆಯಲ್ಲಿ, ಯಾವುದೇ ಕಾರಣಕ್ಕೂ ಪೆಂಡಾಲ್ ಹಾಕಲು ರಸ್ತೆ ಮತ್ತು ಫುಟ್ ಪಾತ್ ನಲ್ಲಿ ಗುಂಡಿಗಳನ್ನು ತೋಡುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ ಲಾಲ್ ಬೌಚಾ ರಾಜಾ ಮಂಡಲ್ ಸಮಿತಿ ಗಣೇಶೋತ್ಸವದ ವೇಳೆ ರಸ್ತೆ ಮತ್ತು ಫುಟ್ ಪಾತ್ ನಲ್ಲಿ ಗುಂಡಿಗಳನ್ನು ತೋಡಿತ್ತು ಎಂದು ವರದಿ ತಿಳಿಸಿದೆ.