Advertisement

ತವರೂರ ಅಭಿವೃದ್ಧಿಯಲ್ಲಿ ಮುಂಬಯಿಗರ ಕೊಡುಗೆ ಅಪಾರ

02:48 PM Mar 22, 2019 | |

ಮುಂಬಯಿ: ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ  ಬದ್ದತೆ ಹೊಂದಲು 13 ವರ್ಷಗಳ  ಹಿಂದೆ ಸ್ಥಾಪಿಸಿದ ಮುದರಂಗಡಿ ಬಿಲ್ಲವ ಸೇವಾ ಸಂಘ ಈಗ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದೆ. ವೈವಿಧ್ಯಮಯ ಕಲಾಪ್ರಕಾರಗಳ ರಂಗ ಭೂಮಿ, ಕಲ್ಯಾಣ ಮಂಟಪ, ಸಭಾಗೃಹಗಳಿರುವ ಮೂರು ಅಂತಸ್ತುಗಳ ಕಟ್ಟಡದ ಕಾಮಗಾರಿಯು 9 ತಿಂಗಳ ಹಿಂದೆ ಆರಂಭಗೊಂಡಿದೆ. ಅದನ್ನು ನಿಗದಿತ ಸಮಯದಲ್ಲಿ ಲೋಕಾರ್ಪಣೆಗೊಳ್ಳಲು ಆರ್ಥಿಕ ನೆರವು ಅತ್ಯಗತ್ಯವಿದೆ ಎಂದು ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಬಿ. ಸುವರ್ಣ ತಿಳಿಸಿದರು.

Advertisement

ಮಾ. 17ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಮುದರಂಗಡಿ ಬಿಲ್ಲವ ಸೇವಾ ಸಂಘ ಇದರ ಸಮುದಾಯ ಭವನದ ಸಹಾಯರ್ಥಕವಾಗಿ ಹಮ್ಮಿಕೊಂಡ ನಾಟಕ ಪ್ರದರ್ಶನ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತವರೂರ ಅಭಿವೃದ್ಧಿಯಲ್ಲಿ ಮುಂಬಯಿ ಜನತೆಯ ಕೊಡುಗೆ ಮಹತ್ತರವಾಗಿದೆ. ಇಂತಹ ಹೃದಯ ಶ್ರೀಮಂತಿಕೆ ಬಿಲ್ಲವ ಸೇವಾ ಸಂಘಕ್ಕೆ ಸದಾ ಇರಲಿ. ನಾವೆಲ್ಲರು ಒಂದಾಗಿ ಈ ಬೃಹತ್‌ ಯೋಜನೆಗೆ ಒಮ್ಮತದಿಂದ ಸಹಕರಿಸೋಣ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಉಪಾಧ್ಯಕ್ಷ  ಶ್ರೀನಿವಾಸ ಕರ್ಕೇರ ಮಾತನಾಡಿ, ಸಮಾಜಕ್ಕೆ  ಅಗತ್ಯ ಇರುವ ಹಾಗೂ ಇತರ ಸಮುದಾಯದವರಿಗೆ ಉಪಯೋಗವಾಗುವ ಸಮುದಾಯ ಭವನದ ನಿರ್ಮಾಣ ಕಾರ್ಯ ಪ್ರಶಂಸನೀಯ. ಮುಂಬಯಿಯ ತುಳು-ಕನ್ನಡಿಗರು ಈ ಯೋಜನೆಗೆ ಕೈಜೋಡಿಸಬೇಕು ಎಂದರು.

ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಕುಮಾರ್‌ ಕುತ್ಯಾರು ಮಾತನಾಡಿ,  ಅಧಿಕ ವೆಚ್ಚದ ಕಟ್ಟಡದ ಕಾಮಗಾರಿಗೆ ಆರ್ಥಿಕ ಸಂಪನ್ನೂಲದ ಕೊರತೆ ಎದುರಾಗಿದೆ. ಅದನ್ನು ಸರಿದೂಗಿಸುವಲ್ಲಿ ಸಹೃದಯಿ ಮುಂಬಯಿ ದಾನಿಗಳು ಸಹಕರಿಸ ಬೇಕೆಂದು ವಿನಂತಿಸಿದರು.

ಸಮಿತಿಯ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಸಿದ್ಧಿ ಸಾಧನೆಗಳ ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ, ಪತ್ರಕರ್ತ ಉಮೇಶ್‌ ಕೆ. ಅಂಚನ್‌ ವಂದಿಸಿದರು. ಗೌರವ ಅತಿಥಿಗಳಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನಿನ ಉಪಾಧ್ಯಕ್ಷ ಹರೀಶ್‌ ಜಿ. ಅಮೀನ್‌, ದಯಾನಂದ ಪೂಜಾರಿ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್‌ ಎಂ. ಕೋಟ್ಯಾನ್‌, ಮಹಿಳಾ ವಿಭಾದ ಕಾರ್ಯಧ್ಯಕ್ಷೆ ಜಯಂತಿ ವಿ. ಉಳ್ಳಾಲ…, ಅಂಧೇರಿ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಕೋಟ್ಯಾನ್‌  ಶುಭ ಹಾರೈಸಿ ಮಾತನಾಡಿದರು.

Advertisement

ಸೇವಾ ಸಮಿತಿಯ ಗೌರವ ಅಧ್ಯಕ್ಷ ಶ್ರೀಧರ ಪೂಜಾರಿ, ಕೋಶಾಧಿಕಾರಿ ಜಯ ಸಾಲ್ಯಾನ್‌, ಪುರೋಹಿತ ದಿನೇಶ್‌ ಶಾಂತಿ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಿಲ್ಲವರ ಅಸೋಸಿಯೇಶನ ಮೀರಾರೋಡು ಸ್ಥಳೀಯ ಸಮಿತಿಯ ಕಲಾವಿದರಿಂದ ವಿ. ಎನ್‌. ಕುಲಾಲ್‌ ವಿರಚಿತ, ಜಗದೀಶ್‌ ಶೆಟ್ಟಿ ಮತ್ತು ಜಿ. ಕೆ. ಕೆಂಚನಕೆರೆ ನಿರ್ದೇಶನದಲ್ಲಿ ಮುತ್ತು ಮನಿಪುಜೆ ನಾಟಕ ಪ್ರರ್ದಶನಗೊಂಡಿತು.

ತುಂಬಿದ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಊರ ಹಾಗೂ ಮುಂಬಯಿಯ ಗಣ್ಯರು, ಉದ್ಯಮಿಗಳು. ಇತರ ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡು ಸಹಕರಿಸಿದರು. 

 ಚಿತ್ರ-ವರದಿ : ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next