Advertisement

ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ಟ್ರೈನ್‌ ಯೋಜನೆ ವಿಳಂಬ ಸಂಭವ

11:32 AM Jun 12, 2018 | udayavani editorial |

ಪಾಲ್‌ಘರ್‌, ಭಾರತ/ಟೋಕಿಯೋ : ಜಪಾನಿನ 17 ಶತಕೋಟಿ ಡಾಲರ್‌ ನೆರವಿನಲ್ಲಿ ರೂಪಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಮುಂಬಯಿ – ಅಹ್ಮದಾಬಾದ್‌ ಬುಲೆಟ್‌ ಟ್ರೈನ್‌ ಯೋಜನೆಗೆ ಈ ವರ್ಷ ಡಿಸೆಂಬರ್‌ ಒಳಗಾಗಿ ಭೂ ಸ್ವಾಧೀನವನ್ನು ಪೂರ್ಣಗೊಳಿಸುವ ಗಡುವನ್ನು ಯಶಸ್ವಿಯಾಗಿ ನಿಭಾಯಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹಾಗಾಗಿ ಈ ಯೋಜನೆ ವಿಳಂಬವಾಗುವ ಎಲ್ಲ ಸಾಧ್ಯತೆಗಳು ಈಗ ನಿಚ್ಚಳವಾಗುತ್ತಿವೆ. 

Advertisement

ಬುಲೆಟ್‌ ಟ್ರೈನ್‌ ಯೋಜನೆಗೆ ಅವಶ್ಯವಿರುವ ಭೂಸ್ವಾಧೀನ ಕಾರ್ಯವನ್ನು ಈ ವರ್ಷ ಡಿಸೆಂಬರ್‌ ಒಳಗೆ ಪೂರ್ತಿಗೊಳಿಸುವುದಕ್ಕೆ ಹಣ್ಣು ಹಂಪಲು ಬೆಳೆಗಾರರ ಪ್ರತಿಭಟನೆಯೇ ಕಾರಣವಾಗಿದೆ. ತಮಗೆ ಜೀವನಾಧಾರವಾಗಿರುವ ಹಣ್ಣು ಹಂಪಲು ಬೆಳೆಯುವ ಪ್ರದೇಶಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟರೆ ಮುಂದೆ ತಮ್ಮ ಪಾಡೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. 

ಹಾಗಿದ್ದರೂ ಭಾರತದ ಈ ಮಹತ್ವಾಕಾಂಕ್ಷೀ ಯೋಜನೆಯ ಪ್ರಗತಿಯನ್ನು ವಾರ-ವಾರದ ನೆಲೆಯಲ್ಲಿ ಕೂಲಂಷವಾಗಿ ಮೇಲುಸ್ತುವಾರಿ ನಡೆಸುತ್ತಿರುವ ಪ್ರಧಾನಿ ಕಾರ್ಯಾಲಯ, ಈಗ ಎದುರಾಗಿರುವ ಭೂ ಸ್ವಾಧೀನತೆಯ ಎಲ್ಲ ಎಡರು ತೊಡರುಗಳನ್ನು ನಿಶ್ಚಿತವಾಗಿಯೂ ನಿವಾರಿಸಲಾಗುವುದು ಎಂದು ಟೋಕಿಯೋದಲ್ಲಿನ  ಅಧಿಕಾರಿಗಳಿಗೆ ಮನವರಿಕೆ ಮಾಡುತ್ತಿದೆ. ಇದೇ ರೀತಿ ಮಹಾರಾಷ್ಟ್ರದ ಮಾವು ಮತ್ತು ಚಿಕ್ಕು (ಸಪೋಟಾ) ಬೆಳೆಯುವ ರೈತರ ಮನವೊಲಿಸುವ ಯತ್ನವನ್ನು  ಕೂಡ ಪಿಎಂಓ ಅಧಿಕಾರಿಗಳು ಜಾರಿಯಲ್ಲಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next