Advertisement

ಮುಂಬಯಿ-ಝರಾಪ್‌ ಬೇಸಗೆ ವಿಶೇಷ ರೈಲು

02:29 AM Apr 14, 2019 | Team Udayavani |

ಉಡುಪಿ: ಮುಂಬಯಿ ಸಿಎಸ್‌ಎಂಟಿ/ಪುಣೆ ಜಂಕ್ಷನ್‌ ಮತ್ತು ತಿವಿಂ/ಝರಾಪ್‌ ನಡುವಿನ ಬೇಸಗೆ ರಜೆಯ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳು ಓಡಾಟ ನಡೆಸಲಿವೆ.

Advertisement

ರೈಲು ಸಂಖ್ಯೆ 01194 ತಿವಿಂ-ಮುಂಬಯಿ ಸಿಎಸ್‌ಎಂಟಿ ಅನ್‌ರಿಸರ್ವ್‌ಡ್‌ ವಿಶೇಷ ರೈಲು ಎ. 14ರಂದು ಅಪರಾಹ್ನ 3.40ಕ್ಕೆ ತಿವಿಂನಿಂದ ಹೊರಟು ಮರುದಿನ ಮುಂಜಾವ 4.15ಕ್ಕೆ ಮುಂಬಯಿ ಸಿಎಸ್‌ಎಂಟಿ ತಲುಪಲಿದೆ.

ಈ ರೈಲಿಗೆ ದಾದರ್‌, ಥಾಣೆ, ಪನ್ವೇಲ್‌, ರೋಹಾ, ಮಡ್ಗಾಂವ್‌, ಖೇಡ್‌, ಚಿಪ್ಳೂಣ್‌, ಸಾವರ್ದಾ, ಸಂಗಮೇಶ್ವರ್‌ ರೋಡ್‌, ರತ್ನಾಗಿರಿ, ರಾಜಾಪುರ್‌ ರೋಡ್‌, ವೈಭವ್‌ವಾಡಿ ರೋಡ್‌, ಕಂಕವಲಿ, ಸಿಂಧುದುರ್ಗ, ಕುಡಾಳ್‌ ಮತ್ತು ಸಾವಂತ್‌ವಾಡಿ ರೋಡ್‌ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲಿನಲ್ಲಿ 10 ಜನರಲ್‌ ಹಾಗೂ 2 ಎಸ್‌ಎಲ್‌ಆರ್‌ ಸೇರಿದಂತೆ ಒಟ್ಟು 12 ಕೋಚ್‌ಗಳಿರುತ್ತವೆ.

ರೈಲು ಸಂಖ್ಯೆ 01423 ಪುಣೆ ಜಂಕ್ಷನ್‌-ಝರಾಪ್‌ ವಿಶೇಷ ದರದ ವಿಶೇಷ ರೈಲು ಎ. 18ರಂದು ಸಂಜೆ 6.45ಕ್ಕೆ ಪುಣೆ ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.40ಕ್ಕೆ ಝರಾಪ್‌ ತಲುಪಲಿದೆ.

ರೈಲು ಸಂಖ್ಯೆ 01424 ಝರಾಪ್‌- ಪುಣೆ ಜಂಕ್ಷನ್‌ ವಿಶೇಷ ದರದ ವಿಶೇಷ ರೈಲು ಎ. 19ರಂದು ಬೆಳಗ್ಗೆ 7.10ಕ್ಕೆ ಝರಾಪ್‌ನಿಂದ ಹೊರಟು ಅದೇ ದಿನ ರಾತ್ರಿ 8.05ಕ್ಕೆ ಪುಣೆ ಜಂಕ್ಷನ್‌ ತಲುಪಲಿದೆ. ಈ ರೈಲಿಗೆ ಲೋನಾವಾಲಾ, ಪನ್ವೇಲ್‌, ರೋಹಾ, ಮಡ್ಗಾಂವ್‌, ಖೇಡ್‌, ಚಿಪ್ಳೂಣ್‌, ಸಂಗಮೇಶ್ವರ್‌ ರೋಡ್‌, ರತ್ನಾಗಿರಿ, ರಾಜಾಪುರ್‌ ರೋಡ್‌, ವೈಭವ್‌ವಾಡಿ ರೋಡ್‌, ಕಂಕವಲಿ, ಸಿಂಧುದುರ್ಗ್‌ ಮತ್ತು ಕುಡಾಳ್‌ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

Advertisement

ಈ ರೈಲಿನಲ್ಲಿ 2 ಟೈರ್‌ ಎಸಿಯ 1, 3 ಟೈರ್‌ ಎಸಿಯ 5, ಸ್ಪೀಪರ್‌ 8, ಜನರಲ್‌ 4, ಎಸ್‌ಎಲ್‌ಆರ್‌ 2 ಸೇರಿದಂತೆ ಒಟ್ಟು 20 ಕೋಚ್‌ಗಳಿರುತ್ತವೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next