ಶಾರ್ಜಾ: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಆ ಮೂಲಕ ಹೈದರಾಬಾದ್ ತಂಡಕ್ಕೆ 209 ರನ್ ಗಳ ಗುರಿ ನೀಡಿದೆ.
ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ(6) ಮೊದಲ ಓವರ್ ನಲ್ಲೆ ಸಿಕ್ಸರ್ ಸಿಡಿಸಿ ದೊಡ್ಡ ಮೊತ್ತಗಳಿಸುವ ಮುನ್ಸೂಚನೆ ನೀಡಿದರು. ಆದರೇ ಸಂದೀಪ್ ಶರ್ಮಾ ಎಸೆತವನ್ನು ‘ಮಿಸ್ ಜಡ್ಜ್’ ಮಾಡಿ ಕೀಪರ್ ಬೈರ್ ಸ್ಟೋ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಒನ್ ಡೌನ್ ಆಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಜೊತೆಗೂಡಿ ಉತ್ತಮ ಬ್ಯಾಟಿಂಗ್ ನಡೆಸಿದ ಕ್ವಿಂಟಾನ್ ಡಿ ಕಾಕ್ ಅರ್ಧಶತಕ ಗಳಿಸಿದರು. 4 ಫೋರ್ ಹಾಗೂ 4 ಸಿಕ್ಸರ್ ಸಹಾಯದಿಂದ 67 ಗಳಿಸಿ ರಷೀದ್ ಖಾನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಸೂರ್ಯಕುಮಾರ್ ಯಾದವ್ ಕೂಡ 6 ಬೌಂಡರಿಗಳ ನೆರವಿನಿಮದ 31 ರನ್ ಗಳಿಸಿದರು. ಕಳೆದ ಪಂದ್ಯದ ಹೀರೋ ಇಶಾನ್ ಕಿಶಾನ್ ಅಮೋಘ 2 ಸಿಕ್ಸರ್ ಗಳ ಮೂಲಕ ಅಂತಿಮ ಹಂತದಲ್ಲಿ ತಂಡಕ್ಕೆ ಆಸರೆಯಾದರು . 23 ಎಸೆತಗಳಲ್ಲಿ 31 ರನ್ ಗಳಿಸಿ ಮನೀಷ್ ಪಾಂಡೆಗೆ ಕ್ಯಾಚ್ ನೀಡಿದರು.
ನಂತರ ಬಂದ ಹಾರ್ದಿಕ್ ಪಾಂಡ್ಯ 2 ಪೋರ್ ಹಾಗೂ 2 ಸಿಕ್ಸರ್ ಮೂಲಕ 28 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಕಿರಾನ್ ಪೊಲಾರ್ಡ್ (25) ಹಾಗೂ ಕೃಣಾಲ್ ಪಾಂಡ್ಯ(20) ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 208ಕ್ಕೆ ಏರಿಸಿದರು. ಆ ಮೂಲಕ ಹೈದರಾಬಾದ್ ತಂಡಕ್ಕೆ 209 ರನ್ ಗಳ ಗುರಿ ನಿಡಿದರು.
ಹೈದರಾಬಾದ್ ಪರ ಉತ್ತಮ ದಾಳಿ ಸಂಘಟಿಸಿದ ಸಂದೀಪ್ ಶರ್ಮಾ ಹಾಗೂ ಸಿದ್ದಾರ್ಥ್ ಕೌಲ್ 2 ವಿಕೆಟ್ ಪಡೆದರು. ರಷೀದ್ ಖಾನ್ 1 ವಿಕೆಟ್ ಉರುಳಿಸಿದರು.