Advertisement

ರೋಹಿತ್ ಹುಡುಗರ ಪ್ಲೇ ಆಫ್ ಕನಸಿಗೆ ಅಡ್ಡಿಯಾಗುವುದೇ ಡೆಲ್ಲಿ ಕ್ಯಾಪಿಟಲ್ಸ್

11:23 AM Oct 02, 2021 | Team Udayavani |

ಶಾರ್ಜಾ: 14ನೇ ಆವೃತ್ತಿಯ ಐಪಿಎಲ್ ಕೂಟ ಕೊನೆಯ ಹಂತಕ್ಕೆ ತಲುಪಿದೆ. ಪ್ಲೇ ಆಫ್ ಪ್ರವೇಶಕ್ಕಾಗಿ ತಂಡಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಪ್ಲೇ ಆಫ್ ಗೆ ಮೊದಲ ಮೂರು ತಂಡಗಳ ಪ್ರವೇಶ ಬಹುತೇಕ ಖಚಿತವಾಗಿದ್ದು, ನಾಲ್ಕನೇ ತಂಡ ಯಾವುದೆಂಬ ಕುತೂಹಲ ಜಾರಿಯಲ್ಲಿದೆ.

Advertisement

ಇಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಿಷಭ್ ಪಂತ್ ಪಡೆ ಇಂದು ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್ ಗೆ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ:ಇದು ಅತ್ಯಂತ ಕೆಟ್ಟ ಅಂಪೈರಿಂಗ್: ಸಿಟ್ಟಾದ ಗೌತಮ್ ಗಂಭೀರ್, ಗ್ರೇಮ್ ಸ್ವಾನ್

ಆದರೆ 10 ಅಂಕ ಹೊಂದಿರುವ ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದೆ. ಕೆಕೆಆರ್ ಮತ್ತು ಪಂಜಾಬ್ ತಂಡಗಳೂ 10 ಅಂಕ ಹೊಂದಿದ್ದು, ರನ್ ರೇಟ್ ಆಧಾರದಲ್ಲಿ ಮುಂಬೈಗಿಂತ ಮೇಲಿದೆ. ಇಂದು ಮುಂಬೈ ಗೆದ್ದರೆ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಲಿದೆ. ಆದರೆ ಸೋತರೆ ರನ್ ರೇಟ್ ಮತ್ತೆ ಕಡಿಮೆಯಾಗಲಿದೆ.

ಸಂಭಾವ್ಯ ತಂಡಗಳು

Advertisement

ಮುಂಬೈ: ರೋಹಿತ್ ಶರ್ಮಾ (ನಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ಸೂರ್ಯಕುಮಾರ್ ಯಾದವ್/ ಇಶಾನ್ ಕಿಶನ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ ಜಯಂತ್ ಯಾದವ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಡೆಲ್ಲಿ: ಸ್ಟೀವ್ ಸ್ಮಿತ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾ/ ವಿ.ಕೀ), ಶಿಮ್ರನ್ ಹೆಟ್ಮೈರ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಆರ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್  ನೋರ್ಜೆ, ಅವೇಶ್ ಖಾನ್

Advertisement

Udayavani is now on Telegram. Click here to join our channel and stay updated with the latest news.

Next