Advertisement
ಭಾರತ ತಂಡವನ್ನು ಅಂತಿಮಗೊಳಿಸಲು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಈ ವಾರಾಂತ್ಯದಲ್ಲಿ ಸಭೆ ಸೇರಲಿದ್ದು ಇಬ್ಬರು ವಿಕೆಟ್ಕೀಪರ್ಗಳ ಆಯ್ಕೆ ಅತ್ಯಂತ ಸವಾಲಿನದ್ದಾಗುವ ಸಾಧ್ಯತೆಯಿದೆ. ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಗಳಿಗೆ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಸ್ಪರ್ಧೆಯಲ್ಲಿದ್ದಾರೆ. ಕೆ.ಎಲ್.ರಾಹುಲ್ ಏಕದಿನ ಪಂದ್ಯಗಳಲ್ಲಿ ಭಾರತದ ಸ್ಥಾಪಿತ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದರೆ, ಪಂತ್ ಮತ್ತು ಸ್ಯಾಮ್ಸನ್ ಪ್ರಬಲ ಪರ್ಯಾಯವಾಗಿ ಗೋಚರಿಸಿದ್ದಾರೆ.
Related Articles
Advertisement
ಪಂತ್ ಅವರ ಒಟ್ಟಾರೆ ಏಕದಿನ ಸಾಧನೆ ಗಮನಿಸಿದರೆ, 33.50ರ ಸರಾಸರಿಯಲ್ಲಿ 871 ರನ್ ಗಳಿಸಿದ್ದಾರೆ. ರಾಹುಲ್ 72 ಇನ್ನಿಂಗ್ಸ್ಗಳಲ್ಲಿ 49.15 ಸರಾಸರಿಯಲ್ಲಿ 2,851 ರನ್ ಗಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಂತ್ ಅವರು ಚಾಂಪಿಯನ್ಸ್ ಟ್ರೋಫಿಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿರುವ ಸಂಜು ಸ್ಯಾಮ್ಸನ್ ಅವರು ರೇಸ್ ನಲ್ಲಿದ್ದು, ಅವರು 2023 ಡಿಸೆಂಬರ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪರ್ಲ್ನಲ್ಲಿ ಕೊನೆಯ ಏಕದಿನ ಪಂದ್ಯಆಡಿ ಶತಕ ಗಳಿಸಿದ್ದರು.