ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಚಿಣ್ಣರ ಬಿಂಬ ಮುಂಬಯಿ ಇದರ ಸಂಯೋಜನೆಯಲ್ಲಿ ಸೆ. 1 ರಂದು ಮುಂಬಯಿ ವಿಶ್ವವಿದ್ಯಾಲಯದ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನ ಇಲ್ಲಿ ಕನ್ನಡ ಚಿಣ್ಣರ ಬಿಂಬದ ಚಿಣ್ಣರ, ಶಿಕ್ಷಕರ, ಸ್ವಯಂ ಸೇವಕರ, ಪಾಲಕರ ಸಮಾವೇಶವನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಚಿಣ್ಣರಾದ ದರ್ಶನ್ ಶೆಟ್ಟಿ ಥಾಣೆ ಶಿಬಿರ, ಹಸ್ತಾ ಶೆಟ್ಟಿ ಮೀರಾರೋಡ್ ಶಿಬಿರ, ಪವಿತ್ರಾ ದೇವಾಡಿಗ ಪೇಜಾವರ ಶಿಬಿರ, ಅಪೇûಾ ಶೆಟ್ಟಿ ಎಸ್.ಎಂ.ಶೆಟ್ಟಿ ಶಿಬಿರ ಹಾಗೂ ಶಿಕ್ಷಕರಾದ ಅನಿತಾ ಶೆಟ್ಟಿ ಎಸ್.ಎಂ.ಶೆಟ್ಟಿ ಶಿಬಿರ, ಉಷಾ ಶೆಟ್ಟಿ ಥಾಣೆ ಶಿಬಿರ, ಸುರೇಖಾ ಮೊಲಿ ಭಾಯಂದರ್ ಶಿಬಿರ ಹಾಗೂ
ಸ್ವಯಂಸೇವಕರಾದ ವಿನಯಾ ಶೆಟ್ಟಿ, ಮಂಜುಳಾ ಶೆಟ್ಟಿ, ಆಶಾಲತಾ ಕೊಠಾರಿ ಮೊದಲಾದವರನ್ನು ಕನ್ನಡ ವಿಭಾಗದ ಪರವಾಗಿ ಸತ್ಕರಿಸಲಾಯಿತು.
ಚಿಣ್ಣರಾದ ಶ್ರಾವ್ಯ ಶೆಟ್ಟಿ ಅವರಿಂದ ಕಾವ್ಯ ವಾಚನ, ವಿಶ್ವ ಶೆಟ್ಟಿ ಅವರಿಂದ ಭಾಷಣ-ಮಾಧ್ಯಮದ ಸಾಧಕ ಬಾಧಕ, ಜೀವಿಕಾ ವಿ. ಶೆಟ್ಟಿ, ಪೇತ್ರಿ ಅವರಿಂದ ಭಾಷಣ ಹಾಗೂ ಥಾಣೆ ಶಿಬಿರ ಹಾಗೂ ಘೋಡಬಂದರ್ ಶಿಬಿರದ ಚಿಣ್ಣರಿಂದ ನೃತ್ಯ ಕಾರ್ಯಕ್ರಮ ಹಾಗೂ ಕಾಂದಿವಲಿ ಶಿಬಿರದ ಚಿಣ್ಣರು, ಎಸ್.ಎಂ. ಶೆಟ್ಟಿ ಶಿಬಿರದ ಪಾಲಕರು ಹಾಗೂ ಕಲ್ವಾ ಶಿಬಿರದ ಪಾಲಕರಿಂದ ಸಮೂಹ ಗಾಯನ ಕಾರ್ಯಕ್ರಮ ನೆರವೇರಿತು. ಶಿಕ್ಷಕರಿಗೆ ಹಾಗೂ ಪಾಲಕರಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಕವಿ, ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ನಡೆಸಿಕೊಟ್ಟು ವಿಜೇತರಿಗೆ ಅತಿಥಿಗಳು ಬಹುಮಾನವನ್ನು ನೀಡಿದರು.
ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ| ಎಸ್. ಜಿ. ಸಿದ್ದರಾಮಯ್ಯ, ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ಚಿಣ್ಣರ ಬಿಂಬದ ರೂವಾರಿ ಸುರೇಂದ್ರ ಕುಮಾರ್ ಹೆಗ್ಡೆ, ಕನ್ನಡ ವಿಭಾಗ ಮುಂಬಯಿ ವಿವಿಯ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಉಪಸ್ಥಿತರಿದ್ದರು. ಕಾಂದಿವಲಿ ಶಿಬಿರದ ಚಿಣ್ಣರು ಪ್ರಾರ್ಥನೆ ಹಾಡಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು ಜ್ಯೋತಿ ಶೆಟ್ಟಿ, ಅನಿತಾ ಶೆಟ್ಟಿ, ಉದಯ ಶೆಟ್ಟಿ, ಸೋಮಶೇಖರ ಮಸಳಿ, ಸುರೇಖಾ. ಬಿ, ಕುಮುದಾ ಆಳ್ವ, ಸುಚಿತ್ರಾ ಶೆಟ್ಟಿ, ಸುಮಿತ್ರಾ ದೇವಾಡಿಗ, ವಿನಯಾ ಶೆಟ್ಟಿ, ಶೋಭಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಭಾಸ್ಕರ ಶೆಟ್ಟಿ, ತಾಳಿಪಾಡಿಗುತ್ತು, ಜಗದೀಶ್ ರಾವ್, ರವಿ ಹೆಗ್ಡೆ, ಸಂಜೀವ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ವಿಜಯ ಕೋಟ್ಯಾನ್, ಶ್ರೀಪಾದ ಪತಕಿ ಮೊದಲಾ ದವರು ಉಪಸ್ಥಿತರಿದ್ದರು.