Advertisement

ಮುಂಬೈ ನಂಜು: ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾ!

08:07 AM May 25, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕೋವಿಡ್‌ 19 ಮುಕ್ತ ಜಿಲ್ಲೆಯ ಕನಸು ಕಾಣುತ್ತಿದ್ದ ಜಿಲ್ಲೆಗೆ ಕಂಟಕವಾದ ಮುಂಬೈ ವಲಸಿಗರು, ಹಸಿರು ವಲಯ ದತ್ತ ಸಾಗಿದ್ದ ಜಿಲ್ಲೆಗೆ ಈಗ ಕೆಂಪು ವಲಯದ ಕಪ್ಪು ಚುಕ್ಕೆ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಖುದ್ದು  ವಿರೋಧಿಸಿದರೂ ಜಿಲ್ಲೆಗೆ ತಂದು ಬಿಟ್ಟರು ಕೋವಿಡ್‌ 19 ಸೋಂಕಿತ ಮುಂಬೈ ವಲಸಿಗರನ್ನ. ಮಹಾಮಾರಿ ಕೋವಿಡ್‌ 19 ಜಿಲ್ಲಾಡಳಿತದ ಲೆಕ್ಕಚಾರವನ್ನೇ ತಲೆಕೆಳಗೆ ಮಾಡಿದೆ.

Advertisement

ಜಿಲ್ಲೆ ಯಲ್ಲಿ ಮೇ 22 ರವರೆಗೂ ಬರೀ 26 ಮಂದಿ ಯಲ್ಲಿ  ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಆ ಪೈಕಿ ಇಬ್ಬರು ಮೃತಪಟ್ಟು 19 ಮಂದಿ ಚೇತ ರಿಕೆ ಕಂಡು ಐವರು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಜಿಲ್ಲೆಯಲ್ಲಿ ಸೋಂಕಿತರು ಗುಣ ಮುಖರಾಗಿ ಜಿಲ್ಲೆ ಹಸಿರು ವಲಯಕ್ಕೆ ಹೋಗ ಲಿದೆ ಎನ್ನುವಷ್ಟರಲ್ಲಿ ಜಿಲ್ಲೆಗೆ ಮುಂಬೈ ನಂಜು ಅಂಟಿಕೊಂಡಿದೆ.

3 ದಿನದಲ್ಲಿ ಶತಕ ಬಾರಿಸಿದ ಕೋವಿಡ್‌ 19: ಜಿಲ್ಲೆಗೆ ಮುಂಬೈ ನಿಂದ ವಲಸಿಗರನ್ನು ಕರೆ ತಂದಿದ್ದೆ ಈಗ ಜಿಲ್ಲೆಗೆ ಶಾಪವಾಗಿದೆ. ವಲಸಿಗರು ಬಂದ ಮೂರೇ ದಿನಕ್ಕೆ ಹಾಗೂ  ಬಾಗೇಪಲ್ಲಿ ಗರ್ಭಿಣಿ ಸೋಂಕಿತೆ ಸೇರಿ ಜಿಲ್ಲೆಯಲ್ಲಿ ಶತಕ ಬಾರಿ ಸಿದೆ. ಕಳೆದ ಶುಕ್ರವಾರ 47 ಮಂದಿ ವಲಸಿಗ ರಲ್ಲಿ ಕಂಡು ಬಂದಿದ್ದ ಕೋವಿಡ್‌ 19, ಎರಡನೇ ದಿನ ಶನಿವಾರ 26 ಮಂದಿಯಲ್ಲಿ ಕಾಣಿಸಿ ಕೊಂಡರೆ, ಭಾನು ವಾರ 27ಕ್ಕೆ ಏರಿಕೆ  ಕಂಡಿದೆ.

ಹೀಗಾಗಿ ಮೂರು ದಿನದಲ್ಲಿ ವಲಸಿ ಗರ ಆಗಮನದ ಪರಿಣಾಮ ಜಿಲ್ಲೆಯಲ್ಲಿ ಸೋಂಕಿ ತರ ಸಂಖ್ಯೆ 126ಕ್ಕೆ ಏರಿಕೆ ಕಂಡಿದೆ. ಆರಂಭ ದಲ್ಲಿ ಜಿಲ್ಲೆಯಲ್ಲಿ ಕೋವಿಡ್‌ 19 ಆರ್ಭಟ ನಿಯಂತ್ರಣದಲ್ಲಿತ್ತು. ಜಿಲ್ಲಾಡಳಿತ ಕೂಡ ಸೋಂಕಿತರ  ಹಾಗೂ ಅವರ ಸಂಪರ್ಕದಲ್ಲಿದ್ದವರನ್ನು ಸಮರ್ಪಕವಾಗಿ ಕ್ವಾರಂಟೈನ್‌ ಮಾಡಿ ಸೋಂಕಿ ತರ ಪ್ರಮಾಣ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.

ಆದರೆ, ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ  ವಲಸಿಗರ ಆಗಮಕ್ಕೆ ಅವಕಾಶ ನೀಡಿದ್ದೆ ತಡ ಜಿಲ್ಲೆಯಲ್ಲೀಗ ಕೋವಿಡ್‌ 19 ನಾಗಲೋಟ ಬ್ರೇಕ್‌ ಇಲ್ಲದೇ ಸಾಗಿದ್ದು, ಜಿಲ್ಲಾಡ ಳಿತಕ್ಕೆ ಮುಂಬೈ ವಲಸಿಗರು ಸಂಕಷ್ಟ, ಸಂಕಟ ತಂದಿದ್ದು, ಸಾರ್ವ ಜನಿಕರಲ್ಲಿ ಆತಂಕ ಉಂಟು ಮಾಡಿದೆ.  ಸದ್ಯಕ್ಕೆ ವಲಸಿಗರು ಆಗ ಮನಕ್ಕೆ ರಾಜ್ಯ ಸರ್ಕಾರವೇ ಬ್ರೇಕ್‌ ಹಾಕಿದೆ. ಆದರೆ ಜಿಲ್ಲೆಗೆ ಆಗ ಮಿಸಿರುವ ಸುಮಾರು 253 ಮುಂಬೈ ವಲಸಿಗರ ಪೈಕಿ ಇದುವರೆಗೂ 99 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ 37 ಮಂದಿ ವರದಿ ಬಾಕಿ ಇದೆ.

Advertisement

ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗ ಮಿಸಿರುವ ಕಾರ್ಮಿಕರಿಗೆ ನನ್ನ ಕಡೆಯಿಂದ ಅನುಮತಿ ಕೊಟ್ಟಿರಲಿಲ್ಲ. ಆದರೆ ಸರ್ಕಾರದ ಮಟ್ಟದಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಅವರನ್ನು ಜಿಲ್ಲೆಗೆ ಕರೆಸಿಕೊಳ್ಳಬೇಕೆಂಬ ಆದೇಶದ ಮೇರೆಗೆ ನಾವು ಅವರನ್ನು ಸಾರ್ವಜನಿಕರ ಸಂಪರ್ಕಕ್ಕೆ ಬಿಡದೇ ಎಲ್ಲರನ್ನು ಕ್ವಾರಂಟೈನ್‌ ಮಾಡಿದ್ದೇವೆ. 
-ಆರ್‌.ಲತಾ, ಜಿಲ್ಲಾಧಿಕಾರಿ, ಮಾಧ್ಯಮ ಹೇಳಿಕೆ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next