ಮುಂಬಯಿ: ಮುಂಬಯಿ ಯ ತುಳು ರಂಗಭೂಮಿಯಲ್ಲಿ ನಾಟಕ ರಚನೆಗಾರರಾಗಿ, ನಿರ್ದೇಶಕರಾಗಿ, ನಟನಾಗಿ ಸುದೀರ್ಘ ಕಾಲ ಸೇವೆ ಮಾಡಿದ ರಂಗ ಸಾಮ್ರಾಟ ಸುಂದರ್ ಮೂಡಬಿದ್ರೆ ಅವರಿಗೆ ಓಮಾನ್ ತುಳುವೆರ್ ಸಮಿತಿ ವತಿಯಿಂದ ಎ. 16ರಂದು ಕಲಾ ಸಾಧಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಸುಲ್ತನೇಟ್ ಆಫ್ ಓಮಾನ್‌ನ ಮಸ್ಕತ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ, ನಮ್ಮ ಟಿವಿ ನಿರೂಪಕ ನವೀನ್ ಶೆಟ್ಟಿ ಎಡ್ಮೇಮಾರ್, ಚಿತ್ರನಟಿ ಹಾಗೂ ನಿರೂಪಕಿ ಶ್ವೇತಾ ಸುವರ್ಣ ಅವರು ಸುಂದರ್ ಮೂಡಬಿದ್ರೆ ಮತ್ತವರ ಪತ್ನಿ ರತ್ನಾ ಸುಂದರ ಅವರನ್ನು ಸಮ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಝೂಮ್ ವರ್ಚುವಲ್ ಮೂಲಕ ದೇಶ-ವಿದೇಶದ ತುಳು, ಕನ್ನಡಿಗರು ವೀಕ್ಷಿಸಿದರು.ಕಪ್ಪು ಬಿಳುಪು ಟಿವಿಯ ಸಮಯದಲ್ಲಿ ಮುಂಬಯಿಯ ದೂರದರ್ಶನ ತುಳು ಭಾಷೆಯ ಪ್ರಥಮ ಕಾರ್ಯಕ್ರಮ ಭೂತ ದರ್ಶನ ಪ್ರಸಾರ ಮಾಡಿದ ಇವರು ಈ ಕಾರ್ಯಕ್ರಮದಲ್ಲಿ ಗುಣಪಾಲ್ ಉಡುಪಿ ಅವರ ನೇತೃತ್ವದಲ್ಲಿ ಪತ್ನಿ ರತ್ನಾ ಸುಂದರ್ ಮೂಡಬಿದ್ರಿ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ತುಳು ಭಾಷೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಲ್ಲದೆ ಸಾಹಿತಿ, ಲೇಖಕ ಕೋಡು ಭೋಜ ಶೆಟ್ಟಿ ಬರೆದು ದಿಗªರ್ಶಿಸಿದ ಕನ್ನಡ ಬೊಂಬೆ ನಾಟಕ ಮುಂಬಯಿಯ ಷಣ್ಮುಕಾನಂದ ಸಭಾಗೃಹದಲ್ಲಿ ಎರಡು ಪ್ರದರ್ಶನ ಮಾಡಿ ಅದರಲ್ಲಿ ಸುಂದರ್ ಮೂಡಬಿದ್ರೆ ಅವರೊಂದಿಗೆ ಅವರ ಪತ್ನಿ ರತ್ನಾ ಸುಂದರ ಮೂಡಬಿದ್ರಿ ಅವರು ಅಭಿನಯ ಮಾಡಿದ್ದಾರೆ. ಇದಲ್ಲದೆ ಅರ್ಧ ಶತಮಾನದಿಂದ ತಾಯಿನಾಡಿನಲ್ಲಿ ಸೇವೆ ಮಾಡುತ್ತಾ ತುಳು ರಂಗಭೂಮಿಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸುಂದರ ಮೂಡಬಿದ್ರೆ ದಂಪತಿಯ ಕೊಡುಗೆ ಅಪಾರವಾಗಿದೆ.
ಇಂಡಿಯನ್ ಸೋಶಿಯಲ್ ಕ್ಲಬ್ ಓಮಾನ್ ತುಳುವೆರ್ ತುಳು ವಿಂಗ್ ಇದರ ಸಂಚಾಲಕ ರಮಾನಂದ ಎಂ. ಶೆಟ್ಟಿ, ಸಹ ಸಂಚಾಲಕ ಪದ್ಮಾಕರ ಮೆಂಡನ್, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಜತೆ ಕೋಶಾಧಿಕಾರಿ ರವೀಂದ್ರ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಅರುಲ್ ಮೆಕೋಲಿ ಲೋಬೊ, ಕ್ರೀಡಾ ಉಪ ಕಾರ್ಯದರ್ಶಿ ಪ್ರವೀಣ್ ಅಮೀನ್, ಮಹಿಳಾ ಸಂಚಾಲಕಿ ಉಷಾ ಎಲ…. ಆಚಾರ್ಯ, ಕಮ್ಯೂನಿಟಿ ವೆಲ್ಫೆàರ್ ಕಾರ್ಯದರ್ಶಿ ಮೋನಬ್ಬ ಎ. ಬ್ಯಾರಿ, ಮಾಧ್ಯಮ ಸಲಹೆಗಾರ, ತಾಂತ್ರಿಕ ಸಲಹೆಗಾರ ಶರತ್ ಕುಮಾರ್ ಹಾಗೂ ಇತರ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.