Advertisement

Mumbai: ಡಿಜಿಟಲ್‌ ಅರೆಸ್ಟ್‌ಗೆಂದು ಬಂದವನಿಗೆ ಸಾಕುನಾಯಿ ತೋರಿಸಿ ಯಾಮಾರಿಸಿದ!

08:59 PM Dec 29, 2024 | Team Udayavani |

ಮುಂಬೈ: ಡಿಜಿಟಲ್‌ ಅರೆಸ್ಟ್‌ಗೆಂದು ಮುಂದಾದ ವಂಚಕನಿಗೆ ಮುಂಬೈನ ವ್ಯಕ್ತಿಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ವಂಚಕ ವಿಡಿಯೋ ಕಾಲ್‌ ಮಾಡುತ್ತಿದ್ದಂತೆ ತನ್ನ ನಾಯಿ ಮರಿಯನ್ನು ಎದುರಿಗಿಟ್ಟು ಮಾತನಾಡುವ ಮೂಲಕ ಆತನನ್ನೇ ಗಲಿಬಿಲಿಗೊಳಿಸಿದ್ದಾರೆ.

Advertisement

ಮುಂಬೈನ ಅಂಧೇರಿ ಪೂರ್ವ ಪೊಲೀಸ್‌ ಠಾಣೆಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ ವಂಚಕ ಪೊಲೀಸ್‌ ಅಧಿಕಾರಿಯ ಸಮವಸ್ತ್ರ ಧರಿಸಿದ್ದ. ಆದರೆ, ಈತ ವಂಚಕ ಎಂಬುದು ತಿಳಿದಿದ್ದ ವ್ಯಕ್ತಿ ಮೊಬೈಲ್‌ ಕ್ಯಾಮೆರಾದಲ್ಲಿ ತನ್ನ ಮುಖ ತೋರಿ ಸುವ ಬದಲು, ನಾಯಿಯನ್ನು ಅಡ್ಡ ಹಿಡಿದಿದ್ದು, ‘ಇಲ್ಲಿ ನೋಡಿ ಸರ್‌.. ನಾನು ಕ್ಯಾಮೆರಾ ಮುಂದಿದ್ದೇನೆ…’ ಎಂದಿದ್ದಾನೆ. ಆದರೆ, ಇದನ್ನು ನಿರೀಕ್ಷಿಸದೇ ಇದ್ದ ವಂಚಕ ಕಕ್ಕಾಬಿಕ್ಕಿಯಾಗಿದ್ದಾನೆ. ಗಟ್ಟಿ ಧ್ವನಿಯಲ್ಲಿ ಹೆದರಿಸಲು ನೋಡಿದನಾದರೂ ಸಾಧ್ಯವಾಗಿಲ್ಲ. ಕೊನೆಗೆ ಆತ ಕ್ಯಾಮೆರಾ ಆಫ್ ಮಾಡಿ, ಕರೆ ಕಟ್‌ ಮಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next