Advertisement

Mobile phone: ಮೊಬೈಲ್ ಕಸಿದುಕೊಂಡ ಪೋಷಕರು; ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆ

09:33 AM Apr 11, 2023 | Team Udayavani |

ಮುಂಬಯಿ: ಇತ್ತೀಚೆಗೆ ವಯಸ್ಸಲ್ಲದ ವಯಸ್ಸಿನಲ್ಲಿ, ಬಾಳಿ ಬದುಕಬೇಕಾದ ಜೀವಗಳು ತಮ್ಮ ಜೀವನವನ್ನೇ ಅಂತ್ಯವಾಗಿಸುತ್ತಿದ್ದಾರೆ. ಕ್ಷುಲಕ ಕಾರಣವನ್ನಿಟ್ಟುಕೊಂಡು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಶುಕ್ರವಾರ ಸಂಜೆ ಮುಂಬಯಿನಲ್ಲಿ ನಡೆದಿದೆ.

Advertisement

ಮುಂಬಯಿಯ ಪಶ್ಚಿಮ ಉಪನಗರದ ಅಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 15 ವರ್ಷದ ಬಾಲಕಿಯೊಬ್ಬಳು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸರು ಬಾಲಕಿಯ ಪೋಷಕರನ್ನು ಪತ್ತೆ ಹಚ್ಚಿ, ವಿಚಾರವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Ramayana: ಬಾರ್‌ನಲ್ಲಿ ರಾಮಾಯಣದ ಡಬ್ಬಿಂಗ್‌ ವಿಡಿಯೋ ಪ್ಲೇ; ಓರ್ವ ಬಂಧನ

ಪ್ರಾಥಮಿಕ ತನಿಖೆಯ ಕಳೆದ ಕೆಲ ಸಮಯದಿಂದ ಬಾಲಕಿ ಹೆಚ್ಚು ಮೊಬೈಲ್‌ ಬಳಸುತ್ತಿದ್ದಳು. ಇದರಿಂದ ಬಾಲಕಿಗೆ ಪೋಷಕರು ಬುದ್ದಿಮಾತನ್ನು ಹೇಳಿದ್ದರು. ಆದರೂ ಬಾಲಕಿ ಇದನ್ನು ಕೇಳದ ಕಾರಣ ಪೋಷಕರು ಬಾಲಕಿಯಿಂದ  ಮೊಬೈಲ್‌ ಕಸಿದುಕೊಂಡಿದ್ದಾರೆ ಇದೇ ಕಾರಣದಿಂದ ಬಾಲಕಿ 7  ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಈ ಬಗ್ಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.