Advertisement
ಮುಂಬೈ ಖಾರ್ ರೈಲ್ವೇ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅದಾಗ್ಯೂ ಚಲಿಸುತ್ತಿರುವ ರೈಲಿನ ಮುಂದೆ ಆಕೆ ಬಿದ್ದುದ್ದರಿಂದ ತಲೆಗೆ ಗಂಭಿರ ಗಾಯಗಳಾಗಿದ್ದು 12 ಹೊಲಿಗೆ ಹಾಕಲಾಗಿದೆ.
Related Articles
Advertisement
ಶುಕ್ರವಾರ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಸುಮೇಧ್ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೇ ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಮಾತ್ರವಲ್ಲದೆ ರೈಲೊಂದು ನಿಲ್ದಾಣಕ್ಕೆ ಆಗಮಿಸುತ್ತಿರುವಾಗಲೇ ಆಕೆಯನ್ನು ತಳ್ಳಿದ್ದ. ಕೂಡಲೇ ಸ್ಥಳದಲ್ಲಿವರು ಆಕೆಯ ರಕ್ಷಣೆಗೆ ಧಾವಿಸಿದ್ದರು.
ಘಟನೆಯ ನಂತರ ಸುಮೇಧ್ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನನ್ನು ಕೃತ್ಯವೆಸಗಿದ 12 ಗಂಟೆಯೊಳಗೆ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೋವಿಡ್ ಸೋಂಕು ಹೆಚ್ಚಳ: 5 ರಾಜ್ಯಗಳ ಸ್ಥಿತಿ ಕಳವಳಕಾರಿ