Advertisement

ಎದ್ದು ಬಿದ್ದು ಸಾಗಿದ ಮುಂಬಯಿ ಶೇರು ಪೇಟೆಗೆ 32 ಅಂಕ ನಷ್ಟ

04:00 PM Jan 30, 2017 | udayavani editorial |

ಮುಂಬಯಿ : ಇಂದು ಸೋಮವಾರದ ವಹಿವಾಟಿನ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ದಿನದ ವಹಿವಾಟನ್ನು 32.90 ಅಂಕಗಳ ನಷ್ಟದೊಂದಿಗೆ 27,849.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,635.65 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಏಶ್ಯನ್‌ ಪೇಂಟ್ಸ್‌, ಸನ್‌ ಫಾರ್ಮಾ, ಡಾ.ರೆಡ್ಡಿ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು. 

ಇದೇ ವೇಳೆ ಟಾಟಾ ಮೋಟರ್‌, ಟಾಟಾ ಸ್ಟೀಲ್‌, ಓಎನ್‌ಜಿಸಿ, ಎಸ್‌ಬಿಐ ಮತ್ತು ಹೀರೋ ಮೋಟೋ ಕಾರ್ಪ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

ಫೆ.1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು ಅದಕ್ಕೆ ಮುನ್ನ ಮುಂಬಯಿ ಶೇರು ಪೇಟೆ ಎಚ್ಚರಿಕೆಯ ನಡೆ ಇರಿಸುತ್ತಿರುವುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next