ಮುಂಬಯಿ : ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಲಾಭನಗದೀಕರಣದ ಒತ್ತಡಕ್ಕೆ ಗುರಿಯಾಗಿ 40 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ಬೆಳಗ್ಗೆ 12 ಗಂಟೆಯ ಹೊತ್ತಿಗೆ ಉತ್ತಮ ಚೇತರಿಕೆಯನ್ನು ಕಂಡು 67.38 ಅಂಕಗಳ ಮುನ್ನಡೆಯನ್ನು ಸಾಧಿಸಿ 28,536.13 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರಕಟ್ಟೆಯ ನಿಫ್ಟಿ ಸೂಚ್ಯಂಕ 19.85 ಅಂಕಗಳ ಮುನ್ನಡೆಯನ್ನು ಸಾಧಿಸಿ 8,841.55 ಅಂಕಗಳ ಮಟ್ಟವನ್ನು ತಲುಪಿತು.
ಇಂದಿನ ವಹಿವಾಟಿನಲ್ಲಿ ನಿಫ್ಟಿ ಮಿಡ್ ಕ್ಯಾಪ್ 16.316.30 ಅಂಕಗಳ ದಾಖಲೆಯ ಮಟ್ಟವನ್ನು ಏರಿರುವುದು ಗಮನಾರ್ಹವಾಗಿದೆ.
ಜಿಂದಾಲ್ ಸ್ಟೀಲ್, ಟೊರೆಂಟ್ ಫಾರ್ಮಾ, ಸ್ಪಾರ್ಕ್, ಸೆಯ್ಲ, ರಿಲಯನ್ಸ್ ಕಮ್ಯುನಿಕೇಶನ್ಸ್, ಪಿಡಿಲೈಟ್ ಇಂಡಸ್ಟ್ರೀಸ್, ಎನ್‌ಎಂಡಿಸಿ, ಕರೂರ್ ವೈಶ್ಯ ಬ್ಯಾಂಕ್, ಜಸ್ಟ್ ಡಯಲ್, ಕ್ರಾಂಪ್ಟನ್ ಗೀÅವ್ಸ್, ಎಮಾಮಿ, ಡಿಸಿಬಿ ಬ್ಯಾಂಕ್, ಅದಾನಿ ಪೋರ್ಟ್ ಕಂಪೆನಿಯ ಶೇರುಗಳು ಶೇ.2ರಿಂದ ಶೇ.8ರ ವರೆಗಿನ ಏರಿಕೆಯನ್ನು ಕಂಡಿವೆ.
ಐಡಿಯಾ ಸೆಲ್ಯುಲರ್ ಶೇ.3.6ರಷ್ಟು ಏರಿರುವುದು ಈ ತಿಂಗಳಾಂತ್ಯದೊಳಗೆ ವೋಡಾಫೋನ್-ಐಡಿಯಾ ವಿಲಯನ ಘೋಷಣೆಯಾಗುವುದರ ಸೂಚನೆ ಎಂದು ತಿಳಿಯಲಾಗಿದೆ.