ಮುಂಬಯಿ : ಬಜೆಟ್ ಬಳಿಕದಲ್ಲಿ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ನಿರಂತರ ಮೂರನೇ ದಿನದ ಏರು ಗತಿಯಲ್ಲಿ, ಇಂದು ಗುರುವಾರದ ವಹಿವಾಟನ್ನು 37.98 ಅಂಕಗಳ ಮುನ್ನಡೆಯೊಂದಿಗೆ 28,329.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.35 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,778.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಹಾಗೂ ನಿಫ್ಟಿ ಮುಂಬರುವ ದಿನಗಳಲ್ಲಿ ತಮ್ಮ ನೆಲೆಗಟ್ಟನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಬಹುದು. ಆದರೆ ಯಾವುದೇ ದೊಡ್ಡ ಕುಸಿತಕ್ಕೆ ಗುರಿಯಾಗುವ ಸಾಧ್ಯತೆಗಳಿಲ್ಲ ಎಂದು ಶೇರು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ನಾಳೆ ಶುಕ್ರವಾರ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ತ್ತೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿದ್ದು ಮಾರುಕಟ್ಟೆಯು ಅದನ್ನು ನಿಕಟವಾಗಿ ಗಮನಿಸಲಿದೆ ಎಂದು ಅವರು ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕ್ ಶೇರುಗಳು ತೀವ್ರ ಒತ್ತಡಕ್ಕೆ ಗುರಿಯಾದವು. ವ್ಯವಹಾರಕ್ಕೆ ಒಳಪಟ್ಟ ಒಟ್ಟು ಶೇರುಗಳ ಪೈಕಿ 1,507 ಶೇರುಗಳು ಹಿನ್ನಡೆಗೆ ಗುರಿಯಾದವು; 1,336 ಶೇರುಗಳು ಮುನ್ನಡೆ ಸಾಧಿಸಿದವು; 152 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟಾರೆಯಾಗಿ 3,052.68 ಕೋಟಿ ರೂ.ಗಳ ವಹಿವಾಟು ನಡೆಯಿತು. ನಿನ್ನೆಯ ದಿನ, ಗುರುವಾರ, 6.125.92 ಕೋಟಿ ರೂ.ಗಳ ವಹಿವಾಟು ನಡೆದಿತ್ತು.