Advertisement

ಎದ್ದು ಬಿದ್ದು ಮುನ್ನಡೆದ ಮುಂಬಯಿ ಶೇರು ಕೊನೆಗೂ 27 ಅಂಕ ಏರಿಕೆ

04:37 PM Mar 09, 2017 | |

ಮುಂಬಯಿ : ಪಂಚ ರಾಜ್ಯಗಳ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯನ್ನು ಎದುರು ನೋಡುತ್ತಿರುವ ಮುಂಬಯಿ ಶೇರು ಪೇಟೆ ಇಂದು ಗುರುವಾರದ ವಹಿವಾಟಿನಲ್ಲಿ ಏಳು ಬೀಳುಗಳ ಹಾದಿಯಲ್ಲಿ ಸಾಗುತ್ತಾ ಅಂತಿಮವಾಗಿ 27.19 ಅಂಕಗಳ ಏರಿಕೆಯನ್ನು ಸಾಧಿಸಿ ದಿನದ ವಹಿವಾಟನ್ನು 28,929.13 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ  2.70 ಅಂಕಗಳ ಅಲ್ಪ ಗಳಿಕೆಯನ್ನು ಸಾಧಿಸಿ ದಿನದ ವಹಿವಾಟನ್ನು 8,927 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ಎಸ್‌ಬಿಐ, ಮಾರುತಿ ಸುಜುಕಿ, ಎಕ್ಸಿಸ್‌ ಬ್ಯಾಂಕ್‌, ಟಾಟಾ ಮೋಟರ್‌, ಏಶ್ಯನ್‌ ಪೇಂಟ್‌ ಶೇರುಗಳು ಶೇ.1ರಿಂದ ಶೇ.1.5ರಷ್ಟು ಏರಿಕೆ ಕಂಡವು. ಆದರೆ ಡಾ.ರೆಡ್ಡೀಸ್‌ ಲ್ಯಾಬ್‌, ಅದಾನಿ ಪೋರ್ಟ್‌, ಓಎನ್‌ಜಿಸಿ, ವಿಪ್ರೋ,ಗೇಲ್‌ ಮತ್ತು ಟಾಟಾ ಸ್ಟೀಲ್‌ ಶೇ.1ರಿಂದ ಶೇ.5ರಷ್ಟು ಕುಸಿದವು. 

ಇಂದಿನ ವಹಿವಾಟಿನಲ್ಲಿ 1,632 ಶೇರುಗಳು ಹಿನ್ನಡೆಗೆ ಗುರಿಯಾದವು; 1,176 ಶೇರುಗಳು ಮುನ್ನಡೆ ಕಂಡವು.

Advertisement

Udayavani is now on Telegram. Click here to join our channel and stay updated with the latest news.

Next