ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟಿನಲ್ಲಿ ನೂರಕ್ಕೂ ಹೆಚ್ಚಿನ ಅಂಕ ಗಳಿಸಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 8400 ಅಂಕಗಳ ಮಟ್ಟವನ್ನು ದಾಟಿದೆ. ಇನ್‌ಫೋಸಿಸ್ ಶೇರು ಧಾರಣೆ ಶೇ.3ರಷ್ಟು ಏರಿದೆ.
ಬಿಎಸ್‌ಎಫ್ ಪವರ್ ಇಂಡೆಕ್ಸ್ ಶೇ.3ಕ್ಕಿಂತಲೂ ಹೆಚ್ಚು ಏರಿದೆ. ಪವರ್ ಶೇರುಗಳು ಉತ್ತಮ ಮುನ್ನಡೆಯನ್ನು ದಾಖಲಿಸಿವೆ. ಎನ್‌ಟಿಪಿಸಿ, ಟೊರೆಂಟ್ ಪವರ್, ಪವರ್ ಗ್ರಿಡ್, ಟಾಟಾ ಪವರ್, ಅದಾನಿ ಪವರ್, ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ರಿಲಯನ್ಸ್ ಪವರ್ ಶೇರುಗಳು ಶೇ.2ರಿಂದ ಶೇ.5ರಷ್ಟು ಏರಿವೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ ಇಂದಿನ ವಹಿವಾಟನ್ನು 106.75 ಅಂಕಗಳ ಮುನ್ನಡೆಯೊಂದಿಗೆ 27,247.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ನಿಫ್ಟಿ 26.55 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 8,407.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ವಹಿವಾಟಿಗೆ ಒಳಪಟ್ಟ ಶೇರುಗಳಲ್ಲಿಂದು 1,201 ಶೇರುಗಳು ಮುನ್ನಡೆ ಕಂಡಿವೆ; 1,560 ಶೇರುಗಳು ಹಿನ್ನಡೆಗೆ ಗುರಿಯಾಗಿವೆ; 343 ಶೇರುಗಳು ಬದಲಾಗದೆ ಉಳಿದಿವೆ.
ಎನ್‌ಟಿಪಿಸಿ, ಇನ್‌ಫೋಸಿಸ್, ಲಾರ್ಸನ್, ಸಿಪ್ಲಾ, ವಿಪ್ರೋ ಟಾಪ್ ಗೇನರ್ ಎನಿಸಿವೆ. ಲೂಪಿನ್, ಎಚ್‌ಯುಎಲ್, ಕೋಲ್ ಇಂಡಿಯಾ, ಡಾ. ರೆಡ್ಡಿ, ಐಟಿಸಿ ಟಾಪ್ ಲೂಸರ್ ಎನಿಸಿವೆ.