Advertisement

ಮುಂಬಯಿ ಷೇರುಪೇಟೆ ಏರುಮುಖ ; ದಿನದ ಅಂತ್ಯಕ್ಕೆ2,476 ಅಂಕ ಏರಿಕೆ

02:52 AM Apr 08, 2020 | Hari Prasad |

ಕಳೆದ ಹಲವು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಮುಂಬಯಿ ಷೇರುಪೇಟೆ ಮಂಗಳವಾರ ಏಕಾಏಕಿ ಜಿಗಿಯುವ ಮೂಲಕ, ಹೂಡಿಕೆದಾರರಲ್ಲಿ ಭರವಸೆಯ ಆಶಾ ಕಿರಣ ಮೂಡಿಸಿದೆ. ಜಾಗತಿಕವಾಗಿ ಕೋವಿಡ್ ವೈರಸ್‌ ಪ್ರಕರಣಗಳಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಾಣುತ್ತಿರುವುದು ಹಾಗೂ ಕೇಂದ್ರ ವಿತ್ತ ಸಚಿವಾಲಯವು ಎರಡನೇ ಹಂತದ ಪರಿಹಾರ ಪ್ಯಾಕೇಜ್‌ ಘೋಷಿಸಲು ಮುಂದಾಗಿದೆ ಎಂಬ ವರದಿಗಳು ಹೂಡಿಕೆದಾರರಲ್ಲಿ ಚೈತನ್ಯ ಉಂಟುಮಾಡಿದವು.

Advertisement

ಅದರ ಪರಿಣಾಮ, ಷೇರುಗಳ ಖರೀದಿ ಉತ್ತಮವಾಗಿ ನಡೆದಿದ್ದು, ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 2,476 ಅಂಕ ಅಂದರೆ ಶೇ.8.97ರಷ್ಟು ಏರಿಕೆ ಕಂಡು, 30,067ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಅದೇ ರೀತಿ ನಿಫ್ಟಿ ಕೂಡ 708 ಅಂಕಗಳ ಭರ್ಜರಿ ಏರಿಕೆ (ಶೇ.8.76) ದಾಖಲಿಸಿ, ದಿನಾಂತ್ಯಕ್ಕೆ 8,792ರಲ್ಲಿ ಕೊನೆ ಗೊಂಡಿತು. ಶೇಕಡವಾರು ಪ್ರಮಾಣದಲ್ಲಿ ನೋಡಿದರೆ, 2009ರ ಮೇ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್‌ ಇಷ್ಟೊಂದು ಮಟ್ಟದ ಏರಿಕೆ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next