ಮುಂಬಯಿ : ಲಾಭ ನಗದೀಕರಣದ ಕಾರಣ ಜಾರು ಹಾದಿಗೆ ತಿರುಗಿರುವ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 33.29 ಅಂಕಗಳ ನಷ್ಟದೊಂದಿಗೆ 29,485.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,121.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿನ ಇಂದಿನ ಅತೀ ಮಹತ್ವದ ವಿದ್ಯಮಾನವೆಂದರೆ ಈಚೆಗಷ್ಟೇ ತಲಾ 299 ರೂ. ಬೆಲೆಗೆ ಪಬ್ಲಿಕ್ ಇಶ್ಯೂ ಮಾಡಿದ್ದ ಅವೆನ್ಯೂ ಸೂಪರ್‌ಮಾರ್ಟ್ಸ್ ನ ಶೇರುಗಳು ಇಂದು 604.40 ರೂ.ಗೆ ಲಿಸ್ಟ್ ಆಗುವ ಮೂಲಕ ಶೇರುದಾರರಿಗೆ ಶೇ.102ರ ಬಂಪರ್ ಲಾಭ ಲಭಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,094 ಶೇರುಗಳು ಮುನ್ನಡೆ ಸಾಧಿಸಿದವು; 1,692 ಶೇರುಗಳು ಹಿನ್ನಡೆಗೆ ಗುರಿಯಾದವು; 188 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಎಕ್ಸಿಸ್ ಬ್ಯಾಂಕ್, ಐಡಿಯಾ ಸೆಲ್ಯುಲರ್ ಟಾಪ್ ಲೂಸರ್ ಎನಿಸಿಕೊಂಡರೆ, ಐಟಿಸಿ, ಓಎನ್‌ಜಿಸಿ, ಗ್ರಾಸಿಂ ಟಾಪ್ ಗೇನರ್ ಎನಿಸಿಕೊಂಡವು.
ದಿವೀಸ್ ಲ್ಯಾಬೋರೇಟರೀಸ್ ಶೇರುಗಳು ಇಂದಿನ ವಹಿವಾಟಿನ ನಡುವೆ ಶೇ.20ರಷ್ಟು ಕುಸಿದವು. ಅಮೆರಿಕದ ಎಫ್ಡಿಎ, ದಿವೀಸ್ ಉತ್ಪನ್ನಗಳಿಗೆ ಆಮದು ಎಚ್ಚರ ಜಾರಿ ಮಾಡಿದ್ದುದೇ ಇದಕ್ಕೆ ಕಾರಣವೆನಿಸಿತು.