Advertisement

ಮಾರಾಟದ ಒತ್ತಡ : ಮುಂಬಯಿ ಶೇರು ಪೇಟೆಗೆ 222 ಅಂಕ ನಷ್ಟ

11:03 AM Mar 22, 2017 | udayavani editorial |

ಮುಂಬಯಿ : ಫಾರ್ಮಾ, ಆಟೋ ಮತ್ತು ತೈಲ ಕ್ಷೇತ್ರದ ಶೇರುಗಳು ದೊಡ್ಡ ಮಟ್ಟದಲ್ಲಿ ಮಾರಾಟದ ಒತ್ತಡಕ್ಕೆ ಗುರಿಯಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 222 ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 234.40 ಅಂಕಗಳ ನಷ್ಟದೊಂದಿಗೆ 29,251.05 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77.70 ಅಂಕಗಳ ನಷ್ಟದೊಂದಿಗೆ 9,043.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದು ಬುಧವಾರ ನಿರಂತರ ಮೂರನೇ ದಿನ ನಷ್ಟವನ್ನು ಕಂಡಿರುವ ಮುಂಬಯಿ ಶೇರು ಪೇಟೆಗೆ, ಉತ್ತರ ಕೊರಿಯದ ಕ್ಷಿಪಣಿ ಪರೀಕ್ಷೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ಭರವಸೆಗಳ ಬಗ್ಗೆ ಕಳವಳ ಉಂಟಾಗಿರುವುದೇ ಹಿನ್ನಡೆಗೆ ಕಾರಣ ಎನ್ನಲಾಗಿದೆ.

ನಿನ್ನೆ ಮಂಗಳವಾರ ಅಮೆರಿಕನ್‌ ಶೇರು ಪೇಟೆ ಕುಸಿತ ಕಂಡಿರುವುದನ್ನು ಅನುಸರಿಸಿ ಇಂದು ಏಶ್ಯನ್‌ ಶೇರು ಪೇಟೆಗಳಲ್ಲಿ ದೌರ್ಬಲ್ಯದ ಪ್ರವೃತ್ತಿ ತೋರಿ ಬಂತು. ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ ಶೇ.1.39, ಶಾಂಘೈ ಕಾಂಪೋಸಿಟ್‌ ಇಂಡೆಕ್ಸ್‌ ಶೇ.0.77 ಮತ್ತು ಜಪಾನಿನ ನಿಕ್ಕಿ ಶೇ.2.01ರಷ್ಟು ಇಂದಿನ ಆರಂಭಿಕ ವಹಿವಾಟಿನಲ್ಲಿ ಕುಸಿದವು. 

Advertisement

Udayavani is now on Telegram. Click here to join our channel and stay updated with the latest news.

Next