Advertisement

ಮುಂಬಯಿ:ಸೆ.17ರಿಂದ ಸೀತಾನದಿ ಕನ್ನಡ ಚಲನಚಿತ್ರ ಪ್ರದರ್ಶನ

03:52 PM Sep 15, 2017 | |

ಮುಂಬಯಿ: ಮಲೆನಾಡ ಪ್ರಕೃತಿಯ ಮಡಿಲಿಗೆ ತಾಗಿರುವ ಪುಟ್ಟ ಊರಲ್ಲೊಂದು ಪುಟ್ಟ ಮನೆ. ಹೆಣ್ಣು ಮಕ್ಕಳೇ ಇರುವ ಆ ಮನೆಯಲ್ಲಿ ಮುದ್ದು ಮನಸ್ಸಿನ ಹದಿನಾರರ ಕುಸುಮ ಬಾಲೆಗೆ ನೀರೆಂದರೆ ಪಂಚ ಪ್ರಾಣ. ತನ್ನ ಮನೆಯ ಪಕ್ಕದಲ್ಲಿಯೇ ಹರಿವ ನದಿಯಲ್ಲಿ ಆಟಆಡುತ್ತಾ ಪಾಠಕಲಿಯುವ ಹೊತ್ತಿನಲ್ಲಿ ಅವಳಿಗೆ ಪರಿಚಯವಾಗುವ ಪರವೂರಿನಿಂದ ಬಂದ ಒಬ್ಬ ಹುಡುಗ ಮತ್ತು ಅವರಸುತ್ತ ನಡೆಯುವ ಘಟನೆಗಳು ಹೇಗೆ ಇಡೀ ಊರನ್ನೆ ಜಾಗೃತಗೊಳಿಸಿ ನಾಡಿಗೆ ಮಾದರಿಯಾಗುತ್ತದೆ ಎಂಬುವುದನ್ನು ಸಾರುವ ಸೀತಾನದಿ ಎಂಬ ಕನ್ನಡ ಚಲನಚಿತ್ರವು ಸೆ. 17 ರಿಂದ ಮುಂಬಯಿಯಾದ್ಯಂತ ಪ್ರದರ್ಶನಗೊಳ್ಳಲಿದೆ. 

Advertisement

ಕಳೆದ ವರ್ಷ ಕರ್ನಾಟಕಾದ್ಯಂತ ಬಿಡುಗಡೆಗೊಂಡು ಜನಮನಗೆದ್ದ ಉತ್ತಮ ಕೌಟುಂಬಿಕ ಚಲನಚಿತ್ರ ಈಗ ಮಹಾನಗರಿ ಮುಂಬಯಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ. 

ನಮ್ಮ ತುಳುನಾಡಿನ ಪ್ರಕೃತಿ ರಮಣೀಯ ಸ್ಥಳಗಳಾದ ಆಗುಂಬೆ, ಸೀತಾನದಿ, ಹೆಬ್ರಿ ಮತ್ತು ಅದರ ಸುತ್ತಲಿನ ಮಲೆನಾಡು-ಕರಾವಳಿಯ ರಮ್ಯ ಮನೋಹರ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಈ ಸಿನೆಮಾ ವೀಕ್ಷಕರ ಕಣ್ಮನ ತಣಿಸುವುದರಲ್ಲಿ ಎರಡು ಮಾತಿಲ್ಲ.ಸೀತಾನದಿಯಲ್ಲಿ  ನೋಡುವವರೆಲ್ಲರಿಗೂ ಇಷ್ಟವಾಗುವ ವಿಷಯಗಳೆಂದರೆ ಅದರ ಕಥೆಯ ಕೆಲವು ಸೂಕ್ಷ್ಮ ಅಂಶಗಳು. ಒಂದು ನೈಜಘಟನೆಯನ್ನು ಆದರಿಸಿ ತಯಾರಿಸಿದ ಗಟ್ಟಿಕಥೆಯನ್ನು ಸಿನೆಮಾಕ್ಕೆ ಬೇಕಾದ ರೀತಿಯಲ್ಲಿ ನಿರೂಪಿಸಿ, ಸಮಾಜಕ್ಕೊಂದು ಸಂದೇಶಕೊಡುವ ಮೂಲಕ ಜನರ ಹƒದಯತಲುಪುವುದು ಖಂಡಿತ.ಅತಿಯಾಗಿ ಯಾವುದನ್ನೂ ಹೇಳುವ ಮೂಲಕ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವ ಕೆಲಸಕ್ಕೆ ನಿರ್ದೇಶಕರು ಕೈ ಹಾಕಿಲ್ಲ. 

ಏನು ಹೇಳಬೇಕೋ ಅದನ್ನು ನೀಟಾಗಿ ಹೇಳು ವುದರೊಂದಿಗೆ ಸೀತಾನದಿಯನ್ನು ಕಟ್ಟಿಕೊಟ್ಟಿದ್ದಾರೆ. ಇಡೀ ಸಿನೆಮಾ ನಡಿಯುವುದು ಸೀತಾನದಿ ಪರಿಸರದಲ್ಲಿ. ಹಾಗಾಗಿ ನಗರದ ಸದ್ದು-ಗದ್ದಲಗಳಿಂದ ಮುಕ್ತ. ಹಚ್ಚ ಹಸಿರಿನ ಊರಿನ ನಡುವೆ ಇಡೀ ಸಿನಿಮಾ ಸಾಗುವುದರಿಂದ ನಿಮಗೆ ನಿಮ್ಮ ಊರು, ಬಾಲ್ಯದ ನೆನಪಾದರೂ ಆಗಬಹುದು. ನರೇಂದ್ರ ಕಬ್ಬಿನಾಲೆಯವರ ಕಥೆಯಲ್ಲಿ ಸಾಕಷ್ಟು ಸೂಕ್ಷ ಅಂಶಗಳಿವೆ. ಅವೆಲ್ಲವನ್ನು ಅಚ್ಚುಕಟ್ಟಾಗಿ ನಿರ್ದೇಶಕ ಕೆ. ಶರತ್‌ ಅವರು ನಿರೂಪಿಸಿದ್ದಾರೆ. ಊರಿನಲ್ಲಿರುವ ಒಗ್ಗಟ್ಟು, ನರೆಮನೆಯವರಿಗೆ ಏನಾದರೂ ತೊಂದರೆಯಾದಾಗ ತತ್‌ಕ್ಷಣ ಸ್ಪಂದಿಸುವ ಜನರ ಮನಸ್ಸನು ಮುಂತಾದ ಸೂಕ್ಷ್ಮ ವಿಚಾರಗಳನ್ನು ಮನೋಜ್ಞವಾಗಿ ತೋರಿಸುವ ಮೂಲಕ ತುಳುನಾಡಿನ ಹಳ್ಳಿಯ ಚಿತ್ರಣ ತುಂಬಿದೆ.  ತುಳುನಾಡಿನ ಜನರು ಮಾತಾಡುವ ಶುದ್ಧ ಕನ್ನಡದಲ್ಲಿಯೇ ಸಂಭಾಷಣೆಯನ್ನು ಬರೆದಿದ್ದಾರೆ ಡಿ.ಬಿ.ಸಿ ಶೇಖರ್‌. ಪ್ರಕೃತಿಯ ಸೊಬಗನ್ನು ಚೆಂದವಾಗಿ ಸೆರೆಹಿಡಿದಯುವ ಕ್ಯಾಮಾರಮ್ಯಾನ್‌ ಮಯೂರ್‌ಆರ್‌. ಶೆಟ್ಟಿಯವರು ಈಗಾಗಲೆ ಕೊಸ್ಟಲ್‌ವುಡ್‌ನ‌ಲ್ಲಿ ಎಕ್ಕಸಕ್ಕ ಮತ್ತು  ಮಿತ್ತಬೈಲ್‌ ಯಮುನಕ್ಕ ಚಿತ್ರಗಳಿಗೆ ಉತ್ತಮ ಸಾಹಿತ್ಯ ಬರೆದು ಮನೆಮಾತಾಗಿದ್ದಾರೆ. ಮುಂಬಯಿಯ ಪುರಂದರ್‌ ಶೆಟ್ಟಿಗಾರ್‌ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇಂಪಾದ ನಾಲ್ಕು ಹಾಡಿಗೆ ಸಾಹಿತ್ಯವನ್ನು ಹಿರಿಯ ಸಾಹಿತಿಗಳಾದ ಅಂಬಾತನಯ ಮುದ್ರಾಡಿಯವರ ಸೋದರ ಸಂಬಂಧಿ ನರೇಂದ್ರ ಕಬ್ಬಿನಾಲೆಯವರು ಬರೆದಿದ್ದಾರೆ.

ವಿರತಿ ಸಿನಿ ಕ್ರೀಯೆಸನ್ಸ್‌ ಲಾಂಛನದಲ್ಲಿ ತಯಾರಿಸಲಾದ ಈ ಚಲನಚಿತ್ರಕ್ಕೆ ಮುಂಬಯಿ ಯುವ ಉದ್ಯಮಿ ಸುಧಾಕರ್‌ ಶೆಟ್ಟಿ ಮುನಿಯಾಲು ಅವರು ಬಂಡವಾಳ ಹೂಡಿದ್ದಾರೆ. ತಮ್ಮ ಊರಿನ ಸೌಂದರ್ಯವನ್ನುದೊಡ್ಡ ಸ್ಕಿÅàನ್‌ನಲ್ಲಿ ಎಲ್ಲರಿಗೂ ತೋರಿಸುವ ಬಯಕೆ, ಯುವ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಮಿಡಿತ ಮತ್ತು ಕಲೆ-ಕನ್ನಡ ಭಾಷೆಯ ಬಗ್ಗೆ ಇವರಿಗಿದ್ದ ಅಭಿಮಾನದ ಪ್ರತೀಕವೇ ಸೀತಾನದಿ ಎನ್ನುತ್ತಾರೆ ನಿರ್ಮಾಪಕರು. ಪಕ್ಕ ಕಮರ್ಷಿಯಲ್‌ಅಲ್ಲದ ಹಳ್ಳಿಯ ಜೀವನವನ್ನು ತೋರಿಸುವ ಈ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಮಂಗಳೂರಿನ ಪುಟ್ಟ ಚೆಲುವೆ ಕುಮಾರಿ ಶ್ರೇಯಾ ಮನೋಜ್ಞವಾಗಿ ನಟಿಸಿದ್ದಾಳೆ. ಕನ್ನಡದ ಖ್ಯಾತಧಾರಾವಾಹಿ ಗೃಹ ಲಕ್ಷ್ಮಿàಯಲ್ಲಿ ನಟಿಸಿರುವ ಮುದ್ದು ಮುದ್ದಾದ ಇವಳ ನಟನೆಯೇ ಸಿನಿಮಾಕ್ಕೆ ಜೀವ ತುಂಬಿದೆ. ಚಿತ್ರದ ನಾಯಕನಾಗಿ ವಿಷ್ಣವಲ್ಲಭ ಅಭಿನಯಿಸಿದ್ದಾರೆ. ತಾಯಿಯಾಗಿ ತನುಜಾ ಅವರ ನಟನೆ ಇಷ್ಟವಾಗುತ್ತದೆ.  ಊರಿನ ಶೇಂದಿ ಕಿಟ್ಟಪ್ಪನ ಪಾತ್ರದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣರವರ ಕಾಮಿಡಿ ನೋಡಲೇಬೇಕು. ಅವರ ಜೊತೆಗೆಕುಲ್‌ದೀಪ್‌, ಯಾದವ್‌ ಕಲ್ಲಾಪು ಇವರ ಕಾಂಬಿನೇಷನ್‌ ಜನರನ್ನು ನಗಿಸುವುದರಲ್ಲಿ ಸಂಶಯವಿಲ್ಲ.

Advertisement

ಈ ಚಲನಚಿತ್ರದಲ್ಲಿ ವಿಶೇಷವಾಗಿ ಕಾರ್ಕಳದ ಶಾಸಕ ವಿ. ಸುನಿಲ್‌ ಕುಮಾರ್‌ರವರು ಮೊದಲ ಬಾರಿಗೆ ಹಿರಿತೆರೆಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವುದು ಸಿನಿಮಾಕ್ಕೆ ಹೆಚ್ಚಿನ ಲುಕ್‌ ಕೊಟ್ಟಿದೆ.  

ಹಿರಿಯ ಸಾಹಿತಿ, ಹರಿದಾಸ, ವಿಮರ್ಶಕ  ಅಂಬಾತನಯ ಮುದ್ರಾಡಿ ಅವರನ್ನು ಪ್ರಥಮ ಬಾರಿಗೆ ಬಣ್ಣ ಹಚ್ಚಿ, ಚಿತ್ರದಲ್ಲಿ ಹಿರಿಯ ಸಮಾಜ ಚಿಂತಕರ ಪಾತ್ರದಲ್ಲಿ ಕಾಣಿಸಿ ಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಡಬಹುದು. 

ಉತ್ತಮವಾದ ಕಥೆ, ಸಂಭಾಷಣೆ, ಸಂಗೀತ, ಛಾಯಗ್ರಹಣ, ನಿರ್ದೇಶನಗಳನ್ನು ಹೊಂದಿರುವ  ಸೀತಾನದಿ ಮುಂಬಯಿಗೆ ಹರಿಯ ಬಂದಿರುವುದು ಹೊರನಾಡು ಕನ್ನಡಿಗರಿಗೆ ಸಂತಸದ ವಿಚಾರ.

Advertisement

Udayavani is now on Telegram. Click here to join our channel and stay updated with the latest news.

Next