ಮುಂಬೈ: ಭಾರತದಲ್ಲಿ ವಾಣಿಜ್ಯ ನಗರಿ ಮುಂಬೈ ಇದೀಗ ಕೋವಿಡ್ 19 ವೈರಸ್ ನ ಕೇಂದ್ರ ಸ್ಥಾನವಾಗತೊಡಗಿದೆ. ಏತನ್ಮಧ್ಯೆ ಸಿಂಗಲ್ ಡಿಜಿಟ್ (ಸಂಖ್ಯೆ)ನಲ್ಲಿದ್ದ ನಗರದ ವರ್ಲಿ ಪ್ರದೇಶದಲ್ಲಿ ಬರೋಬ್ಬರಿ 250ಕ್ಕೂ ಅಧಿಕ ಮಾರಣಾಂತಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಮುಂಬೈನಲ್ಲಿ ಭಾನುವಾರ 152 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 16 ಮಂದಿ ಸಾವನ್ನಪ್ಪಿದ್ದರು. ಸುಮಾರು 26 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚಾಗತೊಡಗಿದೆ ಎಂದು ವರದಿ ವಿವರಿಸಿದೆ.
ಮಹಾರಾಷ್ಟ್ರದಲ್ಲಿ ಭಾಣುವಾರ 221 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 22 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ಒಟ್ಟು ರಾಜ್ಯದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 1,982ಕ್ಕೆ ಏರಿತ್ತು. 149 ಜನರು ಸಾವನ್ನಪ್ಪಿದ್ದು, ಒಟ್ಟು 217 ಮಂದಿ ಗುಣಮುಖರಾಗಿದ್ದರು ಎಂದು ವರದಿ ತಿಳಿಸಿದೆ.
ಜಿ ದಕ್ಷಿಣ ವಾರ್ಡ್ ನ ವರ್ಲಿ ಪ್ರದೇಶದಲ್ಲಿ ಅತೀ ಹೆಚ್ಚು (250) ಪ್ರಕರಣಗಳು ಪತ್ತೆಯಾಗಿದೆ. ಪೂರ್ವ ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ 111 ಕೋವಿಡ್ ಪ್ರಕರಣ ಪತ್ತೆಯಾಗಿದೆ.
ದಾದರ್ ನ ಕಾಸರ್ವಾಡಿ ಚಾವಲ್ ನಲ್ಲಿ ವಾಸವಾಗಿರುವ 48ವರ್ಷದ ಬಿಎಂಸಿ ನೌಕರನನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕು
ಪಾಸಿಟಿವ್ ವರದಿ ಬಂದಿತ್ತು. ದಾದರ್ ನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗನಿಂದ ತಂದೆಗೆ ಸೋಂಕು ಹರಡಿತ್ತು
ಎಂದು ವರದಿ ತಿಳಿಸಿದೆ. ಕಾಸರ್ವಾಡಿ ಚಾವಲ್ ಬಿಎಂಸಿ ಸಿಬ್ಬಂದಿಗಳ ಮನೆಗಳಿದ್ದು, ಇದೀಗ ಇಡೀ ಪ್ರದೇಶ ಸೀಲ್ಡ್ ಮಾಡಿದ್ದು,
ಸೋಂಕು ಪೀಡಿತರ ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.