Advertisement

ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿಗೆ ಮೊದಲ ಬಲಿ..!

10:50 AM Aug 13, 2021 | Team Udayavani |

ಮಹಾರಾಷ್ಟ್ರ : ಸಂಭಾವ್ಯ ಮೂರನೇ ಅಲೆ ಹಾಗೂ ಕೋವಿಡ್ ಸೋಂಕು ದಿನ ನಿತ್ಯ ಹಾವು ಏಣಿ ಆಟ ಆಡುತ್ತಿರುವ ನಡುವೆ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ಸೋಂಕಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಲಿಯಾಗಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿ ಎಮ್ ಸಿ ), ಕಳೆದ ತಿಂಗಳು ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿಗೆ ಒಳಗಾಗಿದ್ದ 63 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

63 ವರ್ಷದ ಮಹಿಳೆ ಜುಲೈ 21 ರಂದು ಕೋವಿಡ್  19 ಪಾಸಿಟಿವ್ ಗೆ ಒಳಗಾಗಿದ್ದರು. ಜುಲೈ 27 ರಂದು ಸೋಂಕಿಗೆ ಬಲಿಯಾಗಿದ್ದರು.

ಇದನ್ನೂ ಓದಿ : ಪ್ರತೀಕಾರ: ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿ ಕೊಂದು ಹಾಕಿದ ಈ ವ್ಯಕ್ತಿ!

ಸೋಂಕಿನಿಂದ ಮೃತಪಟ್ಟ ಮಹಿಳೆಗೆ  ಕೋವಿಡ್ ಸೋಂಕಿನ ಲಸಿಕೆಯ ಎರಡೂ ಡೋಸ್ ಗಳನ್ನು ನೀಡಲಾಗಿತ್ತು. ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಮಹಿಳೆಗೆ ಇಲ್ಲ. ಆದಾಗ್ಯೂ, ಮಹಿಳೆ ಕೆವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿಯನ್ನು ಇತ್ತೀಚೆಗೆ ಪಡೆದಿತ್ತು, ವರದಿಯ ಪ್ರಕಾರ, ಮೃತ ಮಹಿಳೆ ಡೆಲ್ಟಾ ಪ್ಲಸ್  ಕೋವಿಡ್ ರೂಪಾಂತರಿ ಸೋಂಕಿಗೆ ಒಳಗಾಗಿದ್ದರು ಎಂದು ಸೂಚಿಸಿದೆ ಎಂದು ಬಿ ಎಂ ಸಿ ತಿಳಿಸಿದೆ.

ಏತನ್ಮಧ್ಯೆ, ಆಕೆಯ ಕುಟುಂಬದ ಆರು ಮಂದಿ ಕೂಡ ಕೋವಿಡ್ ಸೋಂಕಿಗೆ ಒಳಗಾಇದ್ದರು. ಆ ಪೈಕಿ ಇನ್ನೊಬ್ಬರು ಕೂಡ ಡೆಲ್ಟಾ ಪ್ಲಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದ ನಾಲ್ವರ ಜೀನೋಮ್ ಸೀಕ್ವೆನ್ಸಿಂಗ್ ಇನ್ನಷ್ಟೇ  ಬರಬೇಕಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಆಗಸ್ಟ್‌ ಆಸೆ ಬಿಟ್ಟಾಕಿ.. ಸೆಪ್ಟೆಂಬರ್‌ವರೆಗೆ ನಿಮ್ಮಾಸೆ ಕಟ್ಟಾಕಿ…: ಮುಂದೈತೆ ಸಿನಿಹಬ್ಬ

Advertisement

Udayavani is now on Telegram. Click here to join our channel and stay updated with the latest news.

Next