ಮುಂಬಯಿ: ಮಾದಕ ವಸ್ತುಗಳ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗವನ್ನು ನಿಂದಿಸುವವರ ವಿರುದ್ಧ ಸಂಸತ್ತಿನಲ್ಲಿ ಗುಡುಗಿರುವ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರ ನಿವಾಸಕ್ಕೆ ಒದಗಿಸಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.
“ಯಾರೋ ಕೆಲವರು ಮಾಡುತ್ತಿರುವ ಡ್ರಗ್ಸ್ ದಂಧೆಯನ್ನು ಆಧಾರವಾಗಿಟ್ಟುಕೊಂಡು ಇಡೀ ಚಿತ್ರರಂಗದ ಘನತೆಯನ್ನೇ ಮಣ್ಣುಪಾಲಾಗಿಸುವಂಥ ಮಾತುಗಳನ್ನಾಡುವುದು ಸಲ್ಲದು’ ಎಂದು ಜಯ ಬಚ್ಚನ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಕಿಡಿಕಾರಿದ್ದರು.
ಊರ್ಮಿಳಾ ಕಿಡಿ: ಬಾಲಿವುಡ್‌ನ ಹಿರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಕಂಗನಾ ವಿರುದ್ಧ ಟೀಕೆ ಮಾಡಿದ್ದು, ನೀವು ಮೊದಲು ನಿಮ್ಮ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಬೇರೂರಿರುವ ಮಾದಕ ದ್ರವ್ಯ ಪಿಡುಗನ್ನು ತೊಲಗಿಸಿ. ನಿಮ್ಮ ಹೋರಾಟ ಅಲ್ಲಿಂದಲೇ ಆರಂಭವಾಗಲಿ ಎಂದಿದ್ದಾರೆ.
ಜಯಾ ಜಿ ನೀವು ಯಾವ ಊಟದ ತಟ್ಟೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೀರಿ? ಸಿನಿಮಾ ಜಗತ್ತಿಗೆ ಮಹಿಳಾ ಪರ ವಾದ ಕಲಿಸಿದ್ದು ನಾನೇ. ಇದು ನನ್ನದೇ ಸಾಧನೆ.
ಕಂಗನಾ ರಾಣೌತ್, ಬಾಲಿವುಡ್ ನಟಿ