ಮೂರು ಮೋಸದ ಪ್ರಕರಣಗಳ ಆರೋಪಿಯಾಗಿ ಸದ್ಯಕ್ಕೆ ಜಾಮೀನಿನ ಮೇಲೆ ಹೊರಬಂದಿರುವ ರವಿ ನವ್ಲಾನಿ ಎಂಬ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬ ತನ್ನನ್ನು ರಷ್ಯಾಕ್ಕೆ ಕಳುಹಿಸಬೇಕೆಂದು ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದಾನೆ.
ನನ್ನ ಪತ್ನಿ ಗರ್ಭವತಿಯಾಗಿದ್ದು, ಆಕೆಗೆ ಹೆರಿಗೆ ಸಮಯ ಹತ್ತಿರಕ್ಕೆ ಬಂದಿದೆ. ಹಾಗಾಗಿ, ಆಕೆಯನ್ನು ನೋಡಲು ಹಾಗೂ ಆಕೆಯನ್ನು ಆರೈಕೆ ಮಾಡಲು ತನಗೆ ಅವಕಾಶ ಕಲ್ಪಿಸಬೇಕೆಂದು ಆತ ಮುಂಬೈನ ಬಾಂದ್ರಾದಲ್ಲಿರುವ ಸ್ಥಳೀಯ ನ್ಯಾಯಾಲಯವನ್ನು ಕೋರಿದ್ದಾನೆ.
ಆದರೆ, ಆತನಿಗೆ ಮುಂಬೈ ಬಿಟ್ಟು ಎಲ್ಲೂ ಹೋಗದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು : ಮಹತ್ವ ಪಡೆಯಲಿದೆ ನಾಳಿನ ಕಾರ್ಯಕಾರಿ ಸಮಿತಿ ಸಭೆ
ಜೊತೆಗೆ, ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಹಾಗಾಗಿ, ಇದೊಂದು ವಿಶೇಷ ಪ್ರಕರಣವೆನಿಸಿದೆ.