Advertisement

ಪುಣೆಯಲ್ಲಿ  ಮರಣ ಪ್ರಮಾಣಪತ್ರಕ್ಕಾಗಿ ಪರದಾಡುತ್ತಿರುವ ನಾಗರಿಕರು

09:41 PM Jun 02, 2021 | Team Udayavani |

ಪುಣೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಮರಣ ಪ್ರಮಾಣ ಪತ್ರಗಳನ್ನು ಸ್ವೀಕರಿಸದ ಕಾರಣ ನಾಗರಿಕರು ಪುಣೆ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದ ಮಿತಿಗಳನ್ನು ಎದುರಿಸಬೇಕಾಗಿರುವುದರಿಂದ ಮರಣ ಪ್ರಮಾಣಪತ್ರದ ಕೊರತೆಯಿಂದಾಗಿ ನಾಗರಿ ಕರು ಬ್ಯಾಂಕ್‌, ವಿಮೆ ಇತ್ಯಾದಿಗಳನ್ನು ನಿಭಾ

ಯಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮೃತ ನಾಗರಿಕನ ಉತ್ತರಾಧಿ ಕಾರಿಗಳಿಗೆ ಬ್ಯಾಂಕ್‌ ಖಾತೆಯನ್ನು ನಿಯಂ ತ್ರಿಸಲು ಸಂಬಂಧಪಟ್ಟ ನಾಗರಿಕನ ಮರಣ ಪ್ರಮಾಣಪತ್ರದ ಅಗತ್ಯವಿದೆ. ವಿಮಾ ಕಂಪೆನಿಗಳಿಂದಲೂ ಈ ರೀತಿಯ ಪ್ರಮಾಣಪತ್ರದ ಅಗತ್ಯವಿದೆ. ಮುನ್ಸಿಪಲ್‌ ಕಾರ್ಪೊರೇಶನ್‌ ಪ್ರಮಾಣಪತ್ರಗಳನ್ನು ನೀಡಲು ಆನ್‌ಲೈನ್‌ ಸೌಲಭ್ಯವನ್ನೂ ಒದಗಿ ಸಿದೆ. ಆದರೆ ಕಳೆದ ಹಲವು ದಿನಗಳಿಂದ ಸಾವಿನ ಪ್ರಮಾಣ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ಸ್ವೀಕರಿಸುತ್ತಿಲ್ಲ ಎಂದು ನಾಗರಿಕರಿಂದ ದೂರುಗಳು ಬರುತ್ತಿವೆ.

ಕೋವಿಡ್ಮರಣ ಪ್ರಮಾಣ ಹೆಚ್ಚು

ಕೊರೊನಾ ಸೋಂಕಿನಿಂದ ಕಳೆದ ಕೆಲವು ದಿನಗಳಿಂದ ನಗರದಲ್ಲಿ ನೂರಾರು ಸಾವುಗಳು ವರದಿಯಾಗಿವೆ. ಆದ್ದರಿಂದ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ನಿಗಮದ ಜನನ ಮತ್ತು ಮರಣ ವಿಭಾಗಕ್ಕೆ ಮೃತರ ವಾರಸುದಾರರು ಕಳುಹಿಸುತ್ತಾರೆ. ಮಾಹಿತಿಯನ್ನು ಆನ್‌ಲೈನ್‌ನ್‌ನಲ್ಲಿ ಭರ್ತಿ ಮಾಡಲಾಗುತ್ತದೆ. ಆದರೆ ಒಂದೂವರೆ -ಎರಡು ತಿಂಗಳ ಬಳಿಕವೂ ಪ್ರಮಾಣಪತ್ರ ಸಿಗದ ಕಾರಣ ನಾಗರಿಕರ ಸಮಸ್ಯೆ ಹೆಚ್ಚಾಗಿದೆ.

Advertisement

ಸರ್ವರ್ಸಮಸ್ಯೆ

ಕೆಲವು ವರ್ಷಗಳ ಹಿಂದೆ ನಿಗಮವು ತನ್ನದೇ ಆದ ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯನ್ನು ಹೊಂದಿತ್ತು. ಈ ವ್ಯವಸ್ಥೆಯ ಮೂಲಕ ನೋಂದಣಿ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರಕಾರ ನಾಗರಿಕ ನೋಂದಣಿ ವ್ಯವಸ್ಥೆಯನ್ನು 2016ರಲ್ಲಿ ಪ್ರಾರಂಭಿಸಿತು. ಬಳಿಕ 2019ರಲ್ಲಿ  ಎನ್‌ಎಂಸಿ ಈ ರೀತಿ ಪ್ರಮಾಣಪತ್ರಗಳನ್ನು ನೀಡಲು ಪ್ರಾರಂಭಿಸಿತು. ಈ ವ್ಯವಸ್ಥೆಯ ಪ್ರಕಾರ ಕಂಪ್ಯೂಟರ್‌ನಲ್ಲಿ ಕೆ-ಟರ್ನ್ ನೋಂದಣಿಯನ್ನು ಮಹಾನಗರ ಪಾಲಿಕೆ ಮಾಡುತ್ತದೆ. ಇದಕ್ಕಾಗಿ ಎನ್‌ಎಂಸಿ 16 ರಿಜಿಸ್ಟ್ರಾರ್‌ಗಳನ್ನು ಕ್ಷೇತ್ರ ಕಚೇರಿಗಳಿಗೆ ನೇಮಿಸಿತ್ತು. ಪ್ರಾದೇಶಿಕ ಕಚೇರಿವಾರು ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ಒದಗಿ ಸಲಾಗಿದೆ. ಆದರೆ ಕೇಂದ್ರ ಸರಕಾರದ ಸರ್ವರ್‌ ಸಮಸ್ಯೆಯಿಂದಾಗಿ ಪ್ರಮಾಣಪತ್ರ ಪಡೆಯಲು ವಿಳಂಬವಾಗಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ವಿಭಾಗದಲ್ಲಿ  ಸಿಬಂದಿ ಇಲ್ಲ

ಜನನ ಮತ್ತು ಮರಣ ಪ್ರಮಾಣಪತ್ರ ಕಚೇರಿಯಲ್ಲಿ ಸಿಬಂದಿ ಇಲ್ಲ. ಇದಲ್ಲದೆ ಕೊರೊನಾ ತಡೆಗಟ್ಟುವ ಕ್ರಮಗಳಿಗಾಗಿ ಈ ವಿಭಾಗದ ಸಿಬಂದಿಗೆ ಕೆಲವು ಹೆಚ್ಚವರಿ ಜವಾಬ್ದಾರಿಗಳಿಗೆ ನಿಯೋಜಿಸಲಾಗಿದೆ. ಆದ್ದರಿಂದ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾಯಿತು. ಆದರೆ ಮಹಾನಗರ ಪಾಲಿಕೆಯಿಂದ ಪ್ರಮಾಣಪತ್ರ ಪಡೆಯಲು ವಿಳಂಬವಾಗುತ್ತಿರುವುದು ಸರ್ವರ್‌ ಸಮಸ್ಯೆ ಯಿಂದಾಗಿದೆ ಎಂಬ ಆರೋಪಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next