Advertisement

“ಕಲಾವಿದರು ಸಮಾಜದ ಸುಧಾರಣೆಗೆ ಪ್ರತಿಭೆ ಬಳಸಿಕೊಳ್ಳಲಿ”

01:45 PM Jul 22, 2021 | Team Udayavani |

ಮುಂಬಯಿ: ಕಾಲಕಾಲಕ್ಕೆ ಈ ದೇಶದಲ್ಲಿ ಪ್ರತಿಭಾವಂತರು ಹೊರಹೊ ಮ್ಮಿದ್ದಾರೆ. ಪೋರ್ಚುಗೀಸ್‌, ಬ್ರಿಟಿಷ್‌, ಮೊಘಲರಂತಹ ವಿದೇಶಿ ಆಕ್ರಮಣಕಾರರ ಕಾಲದಲ್ಲೂ  ಈ ದೇಶದ ಪ್ರತಿಭೆ ಕಡಿಮೆಯಾಗಲಿಲ್ಲ. ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ದೇಶ ಹೆಚ್ಚು ಪ್ರಗತಿ ಸಾಧಿಸುತ್ತದೆ ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಹೇಳಿದರು.

Advertisement

ಮಂಗಳವಾರ ರಾಜಭವನದಲ್ಲಿ ನಮೋ ಸಿನಿ ಟಿವಿ ನಿರ್ಮಾಪಕರ ಸಂಘದ ಪರವಾಗಿ ರಾಜ್ಯಪಾಲ ಕೋಶ್ಯಾರಿ ಅವರು ಮೇಡ್‌ ಇನ್‌ ಇಂಡಿಯಾ ಐಕಾನ್ಸ್‌ ಮಹಾರಾಷ್ಟ್ರ ಗೌರವ ಪುರಸ್ಕಾರಗಳನ್ನು ಹಿಂದಿ-ಮರಾಠಿ ಚಲನಚಿತೊ›àದ್ಯಮದ ಸಾಧಕ ಕಲಾವಿದರಿಗೆ ಪ್ರದಾನ ಮಾಡಿ ಶುಭ ಹಾರೈಸಿದರು.

ಹಿನ್ನೆಲೆ ಗಾಯಕರಾದ ಕುಮಾರ್‌ ಸಾನು, ಉದಿತ್‌ ನಾರಾಯಣ್‌, ಭಜನ ಸಾಮ್ರಾಟ್‌ ಅನುಪ್‌ ಜಲೋಟಾ ಮತ್ತು ನಟಿ ದೀಪಿಕಾ ಚಿಖಾಲಿಯಾ ಸಹಿತ ವಿವಿಧ ಕ್ಷೇತ್ರಗಳ 42 ಮಂದಿಗೆ ಮಹಾರಾಷ್ಟ್ರ ಗೌರವ ಪ್ರದಾನ ಮಾಡಲಾಯಿತು. ಮರಾಠಿ ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕ ಮಹೇಶ್‌ ಕೊಠಾರೆ, ನಟರಾದ ಪ್ರಶಾಂತ್‌ ದಮ್ಲೆ, ಭಾರತ್‌ ಜಾಧವ್‌ ಮತ್ತು ಸ್ವಪ್ನಿಲ್‌ ಜೋಶಿ ಅವರಿಗೆ ಮಹಾರಾಷ್ಟ್ರ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಮೋ ಸಿನಿ ಟಿವಿ ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೀಪ್‌ ಘುಗೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next