ಸಂಪೂರ್ಣ ಭೂಮಿಗತ ಕೊಲಾಬಾ ಬಾಂದ್ರಾ ಸೀಪ್j ಮೆಟ್ರೋ ಮಾರ್ಗದ 170 ಕಿ.ಮೀ. ಉದ್ದದ ಸುರಂಗ ಮಾರ್ಗವು ಮೀಠಿ ನದಿಯ ಕೆಳಗಿನಿಂದ ಸಾಗಲಿದೆ. ಧಾರಾವಿ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ) ನಿಲ್ದಾಣಗಳ ನಡುವೆ ನಿರ್ಮಾಣವಾಗಲಿರುವ ಈ ಮಾರ್ಗವು ಮುಂಬಯಿಯ ಮೊದಲ ಮತ್ತು ದೇಶದ 2ನೇ ನದಿಯ ಕೆಳಗಿನ ಮೆಟ್ರೋ ಸುರಂಗ ಮಾರ್ಗವಾಗಿ ಹೊರಹೊಮ್ಮಲಿದೆ.
Advertisement
ಕೆಲಸ ಮುಂದುವರಿಸಲು ಸುರಕ್ಷಿತ ಪರದೆಯೊಂದನ್ನು ರಚಿಸಲಾಗುತ್ತಿದೆ. ನೀರಿನ ಒತ್ತಡವನ್ನು ತಡೆಗಟ್ಟುವುದು ನಮ್ಮ ಮುಂದಿನ ಸವಾಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಲ್ಲಿನ ಬಂಡೆಗಳು ದುರ್ಬಲವಾಗಿರುವುದು ಮತ್ತೂಂದು ಎಂಜಿನಿಯರಿಂಗ್ ಸವಾಲು ಆಗಿದೆ. ಇದನ್ನು ಕಾರ್ಯಸಾಧ್ಯವಾಗಿಸಲು ನಮ್ಮ ವಿನ್ಯಾಸಕರು, ಸಲಹಾಕಾರರು ಮತ್ತು ಗುತ್ತಿಗೆದಾರರು ಈ ಯೋಜನೆಯ ಮೇಲೆ ದೀರ್ಘಕಾಲದಿಂದ ಕೆಲಸ ಮಾಡಿದ್ದಾರೆ ಎಂದು ಎಂಎಂಆರ್‌ಸಿ ಯೋಜನಾ ನಿರ್ದೇಶಕ ಎಸ್.ಕೆ. ಗುಪ್ತಾ ಹೇಳಿದ್ದಾರೆ.
Related Articles
Advertisement
ಎಂಎಂಆರ್‌ಸಿ ಸುರಂಗ ಕೊರೆಯುವ ಯಂತ್ರ (ಟಿಬಿಎಂ)ಗಳನ್ನು ಬಳಸಿ 1.18 ಕಿ.ಮೀ. ಉದ್ದದ ಎರಡು ಸುರಂಗಗಳನ್ನು ನಿರ್ಮಿಸಲಿದೆ. ಈ ಸುರಂಗಗಳು ಧಾರಾವಿ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಡುವೆ ಇರಲಿವೆ. ಬಿಕೆಸಿ ನಿಲ್ದಾಣದ ದಕ್ಷಿಣ ತುದಿ ನೀರೊಳಗಿರಲಿದೆ. ನದಿಯ ಕೆಳಗಿನ ಈ ಎಂಜಿನಿಯರಿಂಗ್ ಸಾಧನೆಯನ್ನು ಸಾಧಿಸಲು ಗುತ್ತಿಗೆದಾರರು ಹಲವಾರು ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದಾರೆ.
ನೀರಿನ ಪ್ರವೇಶ ಸಾಧ್ಯತೆಯನ್ನು ಕಡಿಮೆ ಮಾಡಲು ಸುರಂಗದ ಮೇಲಿನ ಮಣ್ಣು ಮತ್ತು ಮುರಿದ ಬಂಡೆಗಳನ್ನು ಬಲಪಡಿಸಲಾಗುವುದು. ಸುರಕ್ಷತೆಗಾಗಿ ಅಗೆಯುವ ಪ್ರದೇಶದ ಮೇಲೆ ಉಕ್ಕಿನ ಕೊಡೆಯೊಂದನ್ನು ನಿರ್ಮಿಸಲಾಗುವುದು ಹಾಗೂ ಅಗೆಯುವ ಸಮಯದಲ್ಲಿ ಮಣ್ಣು ಮತ್ತು ಕಲ್ಲುಗಳನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.